Siddaramaiah: ರಾಜ್ಯ ರಾಜಕೀಯದ ಅಂಗಳದಲ್ಲಿ ಈಗ ಸಿಂಹಾಸನದ ಕಾಳಗ ಬರಿ ಒಳಗೊಳಗೇ ಕುದಿಯುತ್ತಿಲ್ಲ; ಬದಲಿಗೆ ರಾಜಾರೋಷವಾಗಿ ಬೀದಿಗೆ ಬಿದ್ದಿದೆ! ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ಗದ್ದುಗೆ ಏರಿ ತಾವು ಬಲಶಾಲಿ ಎಂದು ತೋರಿಸಿಕೊಳ್ಳಲು ಹೊರಟ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕಟ್ಟಾ ಬೆಂಬಲಿಗರ ಪಡೆ ನೂತನ ನಾಯಕತ್ವಕ್ಕೆ ‘ಡೆಡ್ಲಿ ಶೋಡೌನ್’ ನೀಡಿದೆ. ಸಿದ್ದರಾಮಯ್ಯ ಆರಂಭಿಸಿರುವ ಈ ‘ಗೈರು ರಾಜಕಾರಣ’ (Absentee Politics) ಕೇವಲ ಅಸಮಾಧಾನದ ಸಂಕೇತವಲ್ಲ, ಬದಲಿಗೆ ಡಿಕೆಶಿ ಮತ್ತು ಕಾಂಗ್ರೆಸ್ ಹೈಕಮಾಂಡ್‌ನ ನೆತ್ತಿಗೇರಿಸಿರುವ ರಾಜಕೀಯ ಬಾಂಬ್!
“ನನ್ನ ಹಿಂಬದಿ ನಿಂತಿರುವುದು ಶಾಸಕರ ಬೃಹತ್ ಪಡೆ. ನನ್ನನ್ನು ಮತ್ತು ನನ್ನ ಅಹಿಂದ ಅಸ್ಮಿತೆಯನ್ನು ತುಳಿದು ಆಡಳಿತ ನಡೆಸುತ್ತೇವೆ ಎನ್ನುವ ಭ್ರಮೆ ಇದ್ದರೆ ಅದನ್ನು ಇಂದೇ ಕೈಬಿಡಿ” ಎಂದು ಸಿದ್ದರಾಮಯ್ಯ ತಮ್ಮ ಮೌನ ಹಾಗೂ ಸತತ ಗೈರುಹಾಜರಿಯ ಮೂಲಕವೇ ಡಿಕೆಗೆ ‘ಖಡಕ್ ಎಚ್ಚರಿಕೆ’ ರವಾನಿಸಿದ್ದಾರೆ.
ಸತತ 4 ಪ್ರಮುಖ ಕಾರ್ಯಕ್ರಮಗಳಿಂದ ಗೈರು: ಕಾಕತಾಳೀಯವಾ? ಸರ್ಜಿಕಲ್ ಸ್ಟ್ರೈಕ್?
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಆಯೋಜಿಸಿದ ಪ್ರತಿಯೊಂದು ಮಹತ್ವದ ವೇದಿಕೆಯಲ್ಲೂ ಸಿದ್ದರಾಮಯ್ಯ (Siddaramaiah) ಗೈರಾಗುವ ಮೂಲಕ ನೂತನ ಸಿಎಂಗೆ ಪೆಟ್ಟು ನೀಡಿದ್ದಾರೆ. ಸಿದ್ದರಾಮಯ್ಯ ಅವರ ಈ ಸಾಲು ಸಾಲು ‘ಆಬ್ಸೆಂಟ್’ ನಡೆಗಳ ಹಿಂದೆ ಪಕ್ಕಾ ಲೆಕ್ಕಾಚಾರವಿದೆ:
- ಸಚಿವರ ಪ್ರಮಾಣವಚನಕ್ಕೆ ಕತ್ತರಿ: ಸಂಪುಟ ರಚನೆಯ ಸಂಭ್ರಮದ ಕ್ಷಣದಲ್ಲೇ ಸಿದ್ದರಾಮಯ್ಯ ಕಡೆಗಣ್ಣಿನಿಂದಲೂ ನೋಡದೆ ದೂರ ಉಳಿದು ಹೈಕಮಾಂಡ್‌ಗೆ ಮೊದಲ ಶಾಕ್ ನೀಡಿದರು.
- ಕೆಪಿಸಿಸಿ ಭವನಕ್ಕೆ ನೋ ಎಂಟ್ರಿ: ಕೆಪಿಸಿಸಿ ಅಧ್ಯಕ್ಷರು ತಾವೇ ಖುದ್ದಾಗಿ ಮನೆ ಬಾಗಿಲಿಗೆ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದರೂ, ಸಿದ್ದರಾಮಯ್ಯ ಕೆಪಿಸಿಸಿ ಭವನದ ಕಡೆ ತಲೆಹಾಕಲಿಲ್ಲ.
- ಅಧಿವೇಶನದ ಮೊದಲ ದಿನವೇ ಆಬ್ಸೆಂಟ್: ಸದನದ ನಾಯಕನಾಗಿ ಶಾಸಕರ ಬಲ ಪ್ರದರ್ಶಿಸಲು ಕಾದಿದ್ದ ಡಿಕೆಶಿಗೆ ಸಿದ್ದರಾಮಯ್ಯ ಮೊದಲ ದಿನವೇ ಸಭೆಗೆ ಬಾರದೆ ಬಹಿರಂಗವಾಗಿಯೇ ಪೆಟ್ಟು ಕೊಟ್ಟರು.
- ಸಿಎಲ್‌ಪಿ ಸಭೆಗೆ ಬಹಿಷ್ಕಾರದ ಸವಾಲು: ನೂತನ ಸಿಎಂ ಕರೆದ ಮೊದಲ ಶಾಸಕಾಂಗ ಪಕ್ಷದ (CLP) ಸಭೆಗೆ ಸಿದ್ದರಾಮಯ್ಯ ಮತ್ತು ಅವರ ಪಡೆ ಗೈರಾಗುವ ಮೂಲಕ ಹೊಸ ಅಧಿಕಾರದ ಅಡಿಪಾಯವನ್ನೇ ಅಲ್ಲಾಡಿಸಿದ್ದಾರೆ.
ಇದನ್ನೂ ಓದಿ: ಸ್ವಾರ್ಥ ಪತ್ರಕರ್ತರು-ಆಪ್ತರ ಮಾತು ಕೇಳಿ ಕೆಟ್ರಾ ತಿಮ್ಮಾಪುರ? ಸಚಿವ ಪಟ್ಟವೂ ಹೋಯ್ತು, ಭವಿಷ್ಯಕ್ಕೆ ‘ಟಿಕೆಟ್’ ಕಂಠಕವೂ ಬಂತು!
ಸಿಎಲ್‌ಪಿ ಸಭೆಯಲ್ಲಿ 47 ಶಾಸಕರ ರೆಬೆಲ್ ಸದ್ದು! ಡಿಕೆಶಿ ನಾಯಕತ್ವಕ್ಕೇ ಬಿತ್ತು ದೊಡ್ಡ ಪೆಟ್ಟು!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆದಿದ್ದ ಮೊದಲ ಸಿಎಲ್‌ಪಿ ಸಭೆ ಅವರ ಆಡಳಿತದ ಶಕ್ತಿಯನ್ನು ತೋರಿಸುವ ಬದಲು, ಅವರ ಆಂತರಿಕ ದೌರ್ಬಲ್ಯವನ್ನು ಬೆತ್ತಲಾಗಿಸಿದೆ. ಸಿದ್ದರಾಮಯ್ಯ (Siddaramaiah) ಅವರೊಬ್ಬರೇ ಅಲ್ಲ, ಅವರೊಂದಿಗೆ ಸರಿ ಸುಮಾರು 47ಕ್ಕೂ ಹೆಚ್ಚು ಶಾಸಕರು ಸಭೆಯನ್ನು ಬಹಿಷ್ಕರಿಸಿ ಬಂಡಾಯದ ತೀವ್ರತೆಯನ್ನು ತಲುಪಿಸಿದ್ದಾರೆ. ಸಭೆಯಲ್ಲಿ ಹಾಜರಿದ್ದದ್ದು ಕೇವಲ 30 ರಿಂದ 37 ಶಾಸಕರು ಮಾತ್ರ!
ಅದರಲ್ಲೂ ಹಾಜರಿದ್ದ 33 ಜನರು ಸಚಿವ ಸ್ಥಾನ ಉಳಿಸಿಕೊಳ್ಳುವ ಅನಿವಾರ್ಯತೆಗೆ ಬಂದವರಷ್ಟೇ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಗುಪ್ತ ಮತದಾನದ ಮೂಲಕ ನಡೆಸಿದ್ದರೆ, ಡಿಕೆಶಿ ಸಿಎಂ ಆಗುವುದು ಇರಲಿ, ಕನಿಷ್ಠ ರೇಸ್‌ನಲ್ಲೂ ಇರುತ್ತಿರಲಿಲ್ಲ. ಇಂದಿಗೂ 60 ರಿಂದ 80 ಶಾಸಕರ ಅಸಲಿ ಬಲ ಸಿದ್ದರಾಮಯ್ಯ ಬೆನ್ನಿಗಿದೆ ಎಂಬುದನ್ನು ಈ ಗೈರುಹಾಜರಿ ಸಾಬೀತುಪಡಿಸಿದೆ.
ಸಿದ್ದರಾಮಯ್ಯ ಆಪ್ತನ ಮೇಲಿನ ಡಿಕೆಶಿ ಆಕ್ರೋಶ ಮತ್ತು ಸಾಗುತ್ತಿರುವ ಬಿಕ್ಕಟ್ಟು:
ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಅತ್ಯಾಪ್ತ ಶಾಸಕರೊಬ್ಬರ ಮೇಲೆಯೇ ನೇರವಾಗಿ ತೀವ್ರವಾಗಿ ರೇಗಾಡಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಸಿದ್ದರಾಮಯ್ಯ ಬಣದವರನ್ನು ಈ ರೀತಿ ಗದರಿಸುವ ಮತ್ತು ಕಠಿಣವಾಗಿ ನಡೆಸಿಕೊಳ್ಳುವ ಧೋರಣೆಯನ್ನು ಪ್ರದರ್ಶಿಸಿದ್ದು ಡಿಕೆಶಿ ಇಟ್ಟ ದೊಡ್ಡ ರಾಜಕೀಯ ಯಡವಟ್ಟು ಎಂದೇ ವಿಶ್ಲೇಷಿಸಲಾಗುತ್ತಿದೆ. ನಾಯಕತ್ವದ ಹುದ್ದೆಯಲ್ಲಿದ್ದುಕೊಂಡು ಸಿದ್ದರಾಮಯ್ಯ ಅವರ ಆಪ್ತರನ್ನೇ ಗುರಿಯಾಗಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಈ ಘಟನೆಯು ಆಡಳಿತ ಪಕ್ಷದೊಳಗಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಸೈಲೆಂಟ್ ಆಗಿದ್ದ ಬಂಡಾಯಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಶಾಸಕರ ಆಕ್ರೋಶ, ನಾಯಕರ ‘ಫ್ಯೂಡಲ್’ ಧೋರಣೆ ಮತ್ತು ಸಚಿವ ಸ್ಥಾನದ ಯಡವಟ್ಟು!
ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೈಕಮಾಂಡ್ ಮತ್ತು ಡಿಕೆಶಿ ಮಾಡಿದ ಯಡವಟ್ಟುಗಳು ಶಾಸಕರ ಕೋಪವನ್ನು ನೆತ್ತಿಗೇರಿಸಿವೆ. ಪಕ್ಷಕ್ಕಾಗಿ ಬೆವರು ಹರಿಸಿದ ಹಿರಿಯ ನಾಯಕರಿಗೆ ಹಾಗೂ ಅರ್ಹ ಶಾಸಕರಿಗೆ ಸಚಿವ ಸ್ಥಾನವಾಗಲಿ, ಕನಿಷ್ಠ ನಿಗಮ-ಮಂಡಳಿ ಸ್ಥಾನಮಾನಗಳನ್ನಾಗಲಿ ನೀಡದೆ ಕಡೆಗಣಿಸಲಾಗಿದೆ. ಅಸಮಾಧಾನಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮುನ್ನವೇ ಪೂರ್ಣ ಪ್ರಮಾಣದ ಸಂಪುಟ ರಚಿಸಿ ತಮ್ಮವರನ್ನೇ ತುಂಬಿಕೊಂಡಿದ್ದು ಶಾಸಕರ ಕಣ್ಣನ್ನು ಕೆಂಪಾಗಿಸಿದೆ.
ಸಭೆ-ಸಮಾರಂಭಗಳಲ್ಲಿ ಶಾಸಕರನ್ನು ಹಾಗೂ ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ‘ಫ್ಯೂಡಲ್ ಧೋರಣೆ’ ಮತ್ತು ಏಕಪಕ್ಷೀಯ ನಿರ್ಧಾರಗಳು ಶಾಸಕರ ಸಹನೆಯ ಗಡಿ ದಾಟಿಸಿವೆ. ಈ ಗೈರುಹಾಜರಿ ಕೇವಲ ಸಿದ್ದರಾಮಯ್ಯ ಅವರದ್ದಲ್ಲ, ಅದು ನಿರ್ಲಕ್ಷ್ಯಕ್ಕೊಳಗಾದ ಪ್ರತಿಯೊಬ್ಬ ಶಾಸಕನ ಅಸಮಾಧಾನದ ಸ್ಫೋಟ.
ಮಾಸ್ ಲೀಡರ್ ಸಿದ್ದರಾಮಯ್ಯ ಹಾಗೂ ‘ಅಹಿಂದ’ ಸಾಮರ್ಥ್ಯದ ಅಸಲಿ ತಾಕತ್ತು!
ಅಧಿಕಾರ ಮತ್ತು ಹಣದ ಬಲದಿಂದ ತಾತ್ಕಾಲಿಕವಾಗಿ ಕುರ್ಚಿ ಹಿಡಿಯಬಹುದು, ಆದರೆ ‘ಜನರನ್ನು ಮತ್ತು ಮತಗಳನ್ನು ಸೆಳೆಯುವ ಸಾಮರ್ಥ್ಯ’ (Vote Pulling Power) ಇರುವ ಮಾಸ್ ಲೀಡರ್ ಇಲ್ಲದಿದ್ದರೆ ಸರ್ಕಾರ ನೆಲಕಚ್ಚುತ್ತದೆ. ಸಿದ್ದರಾಮಯ್ಯ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಈ ರಾಜ್ಯದ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಶಕ್ತಿ ಹಾಗೂ 113+ ಮ್ಯಾಜಿಕ್ ಸಂಖ್ಯೆಯನ್ನು ತರಬಲ್ಲ ಏಕೈಕ ಜನನಾಯಕ.
ಸಿದ್ದರಾಮಯ್ಯ ಅವರನ್ನು ಬದಿಗಿಟ್ಟು ಅಥವಾ ಹತ್ತಿಕ್ಕಿ ಕಾಂಗ್ರೆಸ್ ರಾಜ್ಯದಲ್ಲಿ ಒಂದು ಹೆಜ್ಜೆಯನ್ನೂ ಮುನ್ನಿಡಲು ಸಾಧ್ಯವಿಲ್ಲ. ಮಾಧ್ಯಮಗಳ ಮುಂದೆ, “ನಾನೇನು ಸುಮ್ಮನೆ ಕೂತಿಲ್ಲ, ಸಿಎಂ ಅಲ್ಲದಿದ್ದರೂ ಇಡೀ ರಾಜ್ಯಾದ್ಯಂತ ಅಹಿಂದ ಸಂಘಟನೆ ಮತ್ತು ಹೋರಾಟವನ್ನು ಮತ್ತೆ ಆರಂಭಿಸುತ್ತೇನೆ” ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಡಿಕೆಶಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಜೆಡಿಎಸ್ ನಾಯಕರಿದ್ದ ಹೋಟೆಲ್‌ಗೆ ಸಿದ್ದರಾಮಯ್ಯ ಭೇಟಿ ನೀಡಿರುವುದು ಮತ್ತು ದೇವೇಗೌಡರ ತೀವ್ರ ಹೋರಾಟದ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ನಡೆ ನೂತನ ಸರ್ಕಾರದ ಅಸ್ತಿತ್ವಕ್ಕೆ ಕಂಟಕವಾಗಲಿದೆ.
ಜೆಡಿಎಸ್ ಹೋಟೆಲ್ ಭೇಟಿ ಮತ್ತು ಬಿಡದಿ ಹೋರಾಟದ ಹಿಂದಿನ ಮಾಸ್ಟರ್ ಪ್ಲಾನ್:
ಸಿದ್ದರಾಮಯ್ಯ ಅವರ ಪ್ರತಿಯೊಂದು ನಡೆಯೂ ಈಗ ನೂತನ ಸಿಎಂ ಹಾಗೂ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಜೆಡಿಎಸ್ ನಾಯಕರು ಅತ್ಯಂತ ಮಹತ್ವದ ಸಭೆ ನಡೆಸುತ್ತಿದ್ದ ಅದೇ ಹೋಟೆಲ್‌ಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಬಂದ ನಂತರವೇ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎದ್ದಿದೆ. ಅವರು ಹೋಟೆಲ್‌ನಿಂದ ಹೊರಬಂದ ಬೆನ್ನಲ್ಲೇ ಬಿಡದಿ ಹೋರಾಟದ ತೀವ್ರತೆ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡ ಕುದ್ದು ಅಂಗಳಕ್ಕಿಳಿದು ಅಬ್ಬರಿಸಲು ಹಾದಿಯಾಯಿತು. ಇದು ಕೇವಲ ಕಾಕತಾಳೀಯ ಭೇಟಿಯೋ ಅಥವಾ ಜೆಡಿಎಸ್ ನಾಯಕರ ಜೊತೆಗೂಡಿ ಹೊಸ ಸರ್ಕಾರಕ್ಕೆ ಚೆಕ್‌ಮೇಟ್ ನೀಡಲು ಹೆಣೆದ ಮಾಸ್ಟರ್ ತಂತ್ರವೋ ಎನ್ನುವ ಅನುಮಾನ ಡಿಕೆಶಿ ಪಾಳಯದಲ್ಲಿ ತೀವ್ರ ನಡುಕ ಹುಟ್ಟಿಸಿದೆ.
ಇದನ್ನೂ ಓದಿ: Encounter: ಕಾವೇರಿ ವನ್ಯಧಾಮದ ‘ನರಬೇಟೆ’? ತಪ್ಪಿಸಿಕೊಂಡಿದ್ದ ಸಾಕ್ಷಿ ಪ್ರತ್ಯಕ್ಷ; ಅರಣ್ಯ ಇಲಾಖೆಯ ಕ್ರೌರ್ಯ ಬೆತ್ತಲೆ!
ದೆಹಲಿಯಲ್ಲಿ ತಲ್ಲಣ: ಹೈಕಮಾಂಡ್‌ಗೆ ನೆತ್ತಿಗೇರಿದ ಬಿಸಿತುಪ್ಪ!
ಸಿದ್ದರಾಮಯ್ಯ ಅವರ ಈ ಸೈಲೆಂಟ್ ಸರ್ಜಿಕಲ್ ಸ್ಟ್ರೈಕ್ ಹಾಗೂ 47 ಶಾಸಕರ ಬಂಡಾಯದ ಬಿಸಿ ಈಗ ದೆಹಲಿ ಕಾಂಗ್ರೆಸ್ ಅಧಿನಾಯಕರನ್ನು ಬೆಚ್ಚಿಬೀಳಿಸಿದೆ. ಸಿಡಬ್ಲ್ಯೂಸಿ (CWC) ಸಭೆಯ ನೆಪದಲ್ಲಿ ದೆಹಲಿಗೆ ತಲುಪಿರುವ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಹೈಕಮಾಂಡ್ ನಾಯಕರು ಹರಸಾಹಸ ಪಡುತ್ತಿದ್ದಾರೆ.
ತಮ್ಮ ರಾಜೀನಾಮೆ ವೇಳೆಯಲ್ಲಿ ಸಿದ್ದರಾಮಯ್ಯ ಕೇಳಿದ್ದ ಸಮಯವನ್ನು ನೀಡದೆ ಏಕಾಏಕಿ ತೀರ್ಮಾನ ತಳೆದಿದ್ದ ಹೈಕಮಾಂಡ್‌ಗೆ ಈಗ ಸಿದ್ದರಾಮಯ್ಯ ಅವರ ಕೋಪವನ್ನು ಎದುರಿಸಲು ಹಾದಿ ಕಾಣುತ್ತಿಲ್ಲ. 2028ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸರ್ಕಾರ ತರುತ್ತೇನೆ ಎಂದು ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಡಿಕೆ ಶಿವಕುಮಾರ್ ಅವರಿಗೆ, ಸಿದ್ದರಾಮಯ್ಯ ಬೆಂಬಲವಿಲ್ಲದೆ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಉಳಿಸಿಕೊಳ್ಳುವುದು ಅಸಾಧ್ಯ ಎನ್ನುವ ಸತ್ಯ ಈಗ ಅರಿವಾಗುತ್ತಿದೆ.
ಅನುದಾನ ಸಿಗದೆ ಶಾಸಕರು ಪರದಾಡುತ್ತಿದ್ದಾರೆ, ರಾಜ್ಯದ ಜನರ ರಸ್ತೆ, ಆಸ್ಪತ್ರೆ ಹಾಗೂ ಮಳೆ ಪರಿಹಾರದಂತಹ ಜ್ವಲಂತ ಸಮಸ್ಯೆಗಳನ್ನು ಗಾಳಿಗೆ ತೂರಿ ನಾಯಕರು ಅಧಿಕಾರದ ಕುರ್ಚಿ ಕಾಳಗದಲ್ಲಿ ಮಗ್ನರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಈ ಸತತ 4 ಗೈರುಹಾಜರಿ ಹಾಗೂ 47 ಶಾಸಕರ ರೆಬೆಲ್ ಸಂದೇಶ ಕೇವಲ ಸಣ್ಣ ತುಣುಕಷ್ಟೇ. ಸಿದ್ದರಾಮಯ್ಯ ಅವರ ಈ ಮೌನ ಮತ್ತು ಎಚ್ಚರಿಕೆ ಮುಂಬರುವ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭಾರಿ ‘ಕ್ಷಿಪ್ರ ಕ್ರಾಂತಿ’ ಹಾಗೂ ಸರ್ಕಾರದ ಪತನದ ಹಾದಿಗೆ ನಾಂದಿ ಹಾಡಲಿದೆ!
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






