RSS: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಗೃಹ ಸಚಿವರ ಪಟ್ಟ ಅಲಂಕರಿಸಿದ ತಕ್ಷಣವೇ ಇಷ್ಟೊಂದು ಸೈದ್ಧಾಂತಿಕ ತಲ್ಲಣ ಮತ್ತು ಕಾನೂನಾತ್ಮಕ ಕಂಪನ ಸೃಷ್ಟಿಸಿದ ಉದಾಹರಣೆಗಳು ತೀರಾ ವಿರಳ. ಪ್ರಿಯಾಂಕ್ ಖರ್ಗೆ (Priyank Kharge) ಅವರು ರಾಜ್ಯದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೇವಲ 48 ಗಂಟೆಗಳ ಒಳಗಾಗಿ ಇಡೀ ಬಲಪಂಥೀಯ ವಲಯದಲ್ಲಿ (Right-wing sector) ಎದ್ದಿರುವ ಬಿರುಗಾಳಿಯೇ ಇದಕ್ಕೆ ಸಾಕ್ಷಿ. ದಶಕಗಳಿಂದಲೂ ತಮಗ್ಯಾರೂ ಪ್ರಶ್ನೆ ಮಾಡುವವರೇ ಇಲ್ಲ, ತಾವೇ ಕಾನೂನಿಗಿಂತ ಮಿಗಿಲು ಎಂದು ಬೀಗುತ್ತಿದ್ದ ದೇಶದ ಅತಿ ದೊಡ್ಡ ಹಿಡನ್ ಅಜೆಂಡಾದ ಸಂಘಟನೆಯಾದ ಆರ್‌ಎಸ್‌ಎಸ್ (RSS) ವಿರುದ್ಧ ಪ್ರಿಯಾಂಕ್ ಖರ್ಗೆ ನೇರವಾಗಿಯೇ ಸೈದ್ಧಾಂತಿಕ ಮತ್ತು ಕಾನೂನಾತ್ಮಕ ಸಮರ ಸಾರಿದ್ದಾರೆ. ಇದು ಕೇವಲ ರಾಜಕೀಯ ಹೇಳಿಕೆಯಲ್ಲ, ವ್ಯವಸ್ಥೆಯ ಹೆಸರಿನಲ್ಲಿ ನಡೆಯುತ್ತಿದ್ದ ಲೀಗಲ್ ವಂಚನೆಗೆ ಇಟ್ಟಿರುವ ದೊಡ್ಡ ಬ್ರೇಕ್!
ಬೆದರಿಕೆಗೆ ಮಣಿಯದ ಗೃಹ ಸಚಿವ; ಮುಖವಾಡ ಕಳಚಿದ 24 ಗಂಟೆಗಳು!
ಪ್ರಿಯಾಂಕ್ ಖರ್ಗೆ ಅವರು ಗೃಹ ಇಲಾಖೆಯ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ಬಲಪಂಥೀಯ ಜಾಲ ಜಾಗೃತಗೊಂಡಿತು. ಸೋಶಿಯಲ್ ಮೀಡಿಯಾಗಳಲ್ಲಿ ಸಚಿವರ ವಿರುದ್ಧ ನಿಂದನೆ, ಜಾತಿ ನಿಂದನೆ ಹಾಗೂ ನೇರ ಜೀವ ಬೆದರಿಕೆಗಳ ಸರಣಿಯೇ ಶುರುವಾಯಿತು. ಸಾಮಾನ್ಯವಾಗಿ ಇಂತಹ ಬೆದರಿಕೆಗಳು ಬಂದಾಗ ರಾಜಕಾರಣಿಗಳು ರಾಜತಾಂತ್ರಿಕ ನಡೆ ಇಡುತ್ತಾರೆ ಅಥವಾ ಮೌನಕ್ಕೆ ಶರಣಾಗುತ್ತಾರೆ. ಆದರೆ, ಪ್ರಿಯಾಂಕ್ ಖರ್ಗೆ ಈ ಸಾಲಿನ ನಾಯಕರಲ್ಲ. ತಮಗೆ ಬೆದರಿಕೆ ಹಾಕಿದ ಉಡುಪಿಯ ಕಾರ್ಕಳ ಮೂಲದ ಸುಧೀರ್ ಬಂಗೇರ ಎಂಬ ವ್ಯಕ್ತಿಯನ್ನು ಪೊಲೀಸರು 24 ಗಂಟೆಯೊಳಗೆ ಬಿಎನ್‌ಎಸ್ (BNS) ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ರಾತ್ರೋರಾತ್ರಿ ಅರೆಸ್ಟ್ ಮಾಡಿ ಜೈಲಿಗಟ್ಟುವಂತೆ ಮಾಡುವ ಮೂಲಕ ಗೃಹ ಇಲಾಖೆಯ ಖದರ್ ಏನೆಂಬುದನ್ನು ತೋರಿಸಿಕೊಟ್ಟರು.
ಅಷ್ಟಕ್ಕೇ ನಿಲ್ಲದ ಖರ್ಗೆ, ಈ ಬೆದರಿಕೆಯ ಸೈದ್ಧಾಂತಿಕ ಮೂಲ ಎಲ್ಲಿದೆ ಎಂಬುದನ್ನು ನೇರವಾಗಿಯೇ ಸಾರ್ವಜನಿಕರ ಮುಂದಿಟ್ಟರು. “ನಾನು ಗೃಹ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 48 ಗಂಟೆಗಳು ಕೂಡ ಆಗಿಲ್ಲ, ನಿಮ್ಮಲ್ಲಿನ ಭಯ ಮತ್ತು ಆತಂಕ ಎದ್ದು ಕಾಣಿಸುತ್ತಿದೆ. ಆರ್‌ಎಸ್‌ಎಸ್ ಅನ್ನು ಬಳಸಿಕೊಂಡು ನನ್ನನ್ನು ನಿಂದಿಸುವ, ಹೆದರಿಸುವ ಕೆಲಸಕ್ಕೆ ಕೈಹಾಕಬೇಡಿ. ಮೊದಲು ನಿಮ್ಮ ‘ಬಾಡಿ ಆಫ್ ಇಂಡಿವಿಜುವಲ್ಸ್’ಗೆ ತಮ್ಮ ರಿಜಿಸ್ಟ್ರೇಷನ್ ಡಾಕ್ಯುಮೆಂಟ್ಸ್ ರೆಡಿ ಇಟ್ಟುಕೊಳ್ಳಲು ಹೇಳಿ” ಎಂದು ಪ್ರಿಯಾಂಕ್ ಖರ್ಗೆ ಕೊಟ್ಟಿರುವ ಕೌಂಟರ್ ಸದ್ಯದ ರಾಜಕೀಯದ ಅತ್ಯಂತ ಪ್ರಬುದ್ಧ ಹಾಗೂ ಖಾರವಾದ ನಡೆಯಾಗಿದೆ. ಈ ಒಂದು ಹೇಳಿಕೆ ಇಡೀ ಸಂಘ ಪರಿವಾರದ ನಿದ್ದೆಗೆಡಿಸಿದೆ.
Dear @BJP4Karnataka, ಯಾಕಿಷ್ಟು ಚಿಂತೆಗೊಳಗಾಗಿದ್ದೀರಿ?
ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು 48 ಗಂಟೆಗಳು ಕೂಡ ಆಗಿಲ್ಲ, ನಿಮ್ಮ ಭಯ, ನಿಮ್ಮಲ್ಲಿನ ಆತಂಕ, ನಿಮ್ಮಲ್ಲಿನ ದುಗುಡ ಎಲ್ಲವೂ ವ್ಯಕ್ತವಾಗುತ್ತಿದೆ ಮತ್ತು ಈಗಾಗಲೇ RSSನ್ನು ಬಳಸಿಕೊಂಡು ನನ್ನನ್ನು ನಿಂದಿಸುತ್ತಿದ್ದೀರಿ ಹಾಗೂ ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ.
ನೀವು… https://t.co/8D5mbXhVVs pic.twitter.com/HZse43GpDw— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 7, 2026
ಆನ್ ಪೇಪರ್ ಹೊಣೆಗೇಡಿತನ; ಆರ್‌ಎಸ್‌ಎಸ್‌ನ ‘ನೆರಳಿನ’ ಆಟಕ್ಕೆ ಲೀಗಲ್ ಬ್ರೇಕ್!
ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ (RSS) ಕುರಿತಾಗಿ ಎತ್ತಿರುವ ಪ್ರಶ್ನೆ ಎಷ್ಟು ತಾರ್ಕಿಕ ಮತ್ತು ಸಂವಿಧಾನಬದ್ಧವಾಗಿದೆ ಎಂದರೆ, ಇದಕ್ಕೆ ಉತ್ತರಿಸಲಾಗದೆ ಬಲಪಂಥೀಯ ಚಿಂತಕರು ತಡಕಾಡುತ್ತಿದ್ದಾರೆ. ಭಾರತದ ಕಾನೂನಿನ ಪ್ರಕಾರ ಯಾವುದೇ ಒಂದು ಎನ್‌ಜಿಒ (NGO), ಟ್ರಸ್ಟ್ ಅಥವಾ ಸಾರ್ವಜನಿಕ ಸಂಸ್ಥೆ ಅಧಿಕೃತವಾಗಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸಬೇಕಾದರೆ ಅಥವಾ ಸಾರ್ವಜನಿಕವಾಗಿ ಕಾರ್ಯಾಚರಣೆ ಮಾಡಬೇಕಾದರೆ 1860ರ ಸೊಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ ಅಥವಾ 1882ರ ಇಂಡಿಯನ್ ಟ್ರಸ್ಟ್ ಆಕ್ಟ್ ಅಡಿಯಲ್ಲಿ ಕಡ್ಡಾಯವಾಗಿ ನೊಂದಣಿಯಾಗಿರಬೇಕು. ಆದರೆ ಆಶ್ಚರ್ಯವೆಂದರೆ, ಶತಮಾನದ ಇತಿಹಾಸ ಹೊಂದಿರುವ, ದೇಶದ ರಾಜಕಾರಣವನ್ನೇ ನಿಯಂತ್ರಿಸುವ ಆರ್‌ಎಸ್‌ಎಸ್ ಮಾತ್ರ ಇವೆರಡರ ಅಡಿಯಲ್ಲೂ ಅಧಿಕೃತವಾಗಿ ನೊಂದಣಿಯಾಗಿಲ್ಲ!
ಕೋರ್ಟ್ ಹಾಗೂ ಇನ್‌ಕಮ್ ಟ್ಯಾಕ್ಸ್ ಇಲಾಖೆಯ ಮುಂದೆ ತಾನೊಂದು ಕೇವಲ “ಬಾಡಿ ಆಫ್ ಇಂಡಿವಿಜುವಲ್ಸ್” (ವ್ಯಕ್ತಿಗಳ ಗುಂಪು) ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್, ಆನ್ ಪೇಪರ್ ಯಾವುದೇ ಲೀಗಲ್ ಹೊಣೆಗಾರಿಕೆಯನ್ನು ಹೊರುವುದಿಲ್ಲ. ಆದರೆ ಸೈದ್ಧಾಂತಿಕವಾಗಿ ಎಬಿವಿಪಿ (ABVP), ರಾಷ್ಟ್ರೀಯ ಸೇವಾ ಭಾರತಿ, ಭಾರತೀಯ ಮಜದೂರ್ ಸಂಘ (BMS), ಕಿಸಾನ್ ಸಂಘ, ಅಖಿಲ ಭಾರತೀಯ ಅಧಿವಕ್ತ ಪರಿಷತ್‌ನಂತಹ ಸಾವಿರಾರು ನೊಂದಾಯಿತ ಸಂಸ್ಥೆಗಳನ್ನು ನಿಯಂತ್ರಿಸುತ್ತದೆ. ಇವೆಲ್ಲವೂ ಲೀಗಲ್ ಆಗಿ ರಿಜಿಸ್ಟರ್ ಆಗಿವೆ ಮತ್ತು ಆರ್ಥಿಕ ವ್ಯವಹಾರಗಳೆಲ್ಲವೂ ಈ ಅಧೀನ ಸಂಸ್ಥೆಗಳ ಮೂಲಕವೇ ನಡೆಯುತ್ತವೆ. ಆದರೆ ಈ ಸಂಸ್ಥೆಗಳ ಸೈದ್ಧಾಂತಿಕ ಬಾಸ್ ಮಾತ್ರ ಆರ್‌ಎಸ್‌ಎಸ್! ಈ ರೀತಿಯ ‘ಆನ್ ಪೇಪರ್ ಆಟ’ ಹಾಗೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ವ್ಯವಸ್ಥೆಯನ್ನು ನೇರವಾಗಿ ಪ್ರಶ್ನಿಸಿರುವುದೇ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಧೈರ್ಯಕ್ಕೆ ಸಾಕ್ಷಿ. “ರಾಜ್ಯದಲ್ಲಿ ಕೆಲಸ ಮಾಡ್ತಾ ಇದ್ದೀರಾ ಅಂದಮೇಲೆ ರಿಜಿಸ್ಟರ್ ಆಗಲೇಬೇಕು. ಫಂಡಿಂಗ್ ಎಲ್ಲಿಂದ ಬರ್ತಾ ಇದೆ ಅಂತ ಪಬ್ಲಿಕ್‌ಗೆ ಲೆಕ್ಕ ಕೊಡಲೇಬೇಕು” ಎನ್ನುವ ಖರ್ಗೆ ಅವರ ವಾದ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕೇಳಬೇಕಾದ ಪ್ರಶ್ನೆಯಾಗಿದೆ.
‘ಟ್ರಾನ್ಸ್ಪರೆನ್ಸಿ ಲಾ’ (ಪಾರದರ್ಶಕತೆ ಕಾಯ್ದೆ): ಖರ್ಗೆ ಹೆಣೆದಿರುವ ಮಾಸ್ಟರ್ ಪ್ಲಾನ್!
ರಾಷ್ಟ್ರೀಯ ಸಂಘಟನೆಯೊಂದನ್ನು (RSS) ನಿಷೇಧಿಸುವ (BAN) ಅಂತಿಮ ಅಧಿಕಾರ ಇರುವುದು ಕೇಂದ್ರ ಸರ್ಕಾರದ ಯುಎಪಿಎ (UAPA) ಕಾಯ್ದೆಯಡಿ ಮಾತ್ರ. ಇತಿಹಾಸದಲ್ಲಿ ಮೂರು ಬಾರಿ (1948ರ ಗಾಂಧಿ ಹತ್ಯೆಯ ವೇಳೆ, 1975ರ ತುರ್ತು ಪರಿಸ್ಥಿತಿ ಮತ್ತು 1992ರ ಬಾಬರಿ ಮಸೀದಿ ಧ್ವಂಸದ ವೇಳೆ) ಆರ್‌ಎಸ್‌ಎಸ್ ಬ್ಯಾನ್ ಆಗಿದ್ದೂ ಕೇಂದ್ರ ಸರ್ಕಾರಗಳಿಂದಲೇ ಹೊರತು ರಾಜ್ಯ ಸರ್ಕಾರಗಳಿಂದಲ್ಲ. ಈ ಕಾನೂನಾತ್ಮಕ ಮಿತಿಯ ಅರಿವು ಪ್ರಿಯಾಂಕ್ ಖರ್ಗೆ ಅವರಿಗೆ ಚೆನ್ನಾಗಿಯೇ ಇದೆ. ಹಾಗಾಗಿಯೇ ಅವರು ಕೇವಲ ‘ಬ್ಯಾನ್’ ಎಂಬ ಭಾವನಾತ್ಮಕ ರಾಜಕಾರಣದ ಹಿಂದೆ ಬೀಳದೆ, ಅತ್ಯಂತ ಚಾಣಾಕ್ಷತನದ ಲೀಗಲ್ ಅಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಸಂವಿಧಾನದ ಆರ್ಟಿಕಲ್ 246ರ ಪ್ರಕಾರ ರಾಜ್ಯದ ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ರಾಜ್ಯ ಸರ್ಕಾರದ ಕಂಟ್ರೋಲ್‌ನಲ್ಲಿ ಬರುತ್ತದೆ. ಇದನ್ನೇ ಬಳಸಿಕೊಂಡು ಮುಂಬರುವ ಮುಂಗಾರು ಅಧಿವೇಶನಕ್ಕೂ ಮುನ್ನವೇ ರಾಜ್ಯ ಸರ್ಕಾರ ‘ಟ್ರಾನ್ಸ್ಪರೆನ್ಸಿ ಲಾ’ (ಪಾರದರ್ಶಕತೆ ಕಾಯ್ದೆ) ತರಲು ಗೃಹ ಸಚಿವಾಲಯದ ಮಟ್ಟದಲ್ಲಿ ವೇದಿಕೆ ಸಿದ್ಧಪಡಿಸುತ್ತಿದೆ. ಈ ಕಾನೂನು ಜಾರಿಗೆ ಬಂದರೆ, ಯಾವುದೇ ಕಣ್ಣಿಗೆ ಕಾಣದ ಸಂಘಟನೆಗಳು ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಬೇಕಾದರೆ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು, ತಮ್ಮ ಪದಾಧಿಕಾರಿಗಳ ವಿವರ ನೀಡಬೇಕು ಮತ್ತು ಆರ್ಥಿಕ ಮೂಲಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾಗುತ್ತದೆ. ಆರ್‌ಎಸ್‌ಎಸ್ ಅನ್ನು ಕಾನೂನಿನ ಚೌಕಟ್ಟಿನೊಳಗೆ ತಂದು ನಿಲ್ಲಿಸಲು ಹೊರಟಿರುವ ಈ ನಡೆ ನಿಜಕ್ಕೂ ಬಲಪಂಥೀಯರ ನಿದ್ದೆ ಗೆಡಿಸಿದೆ. ನೆರಳಿನಲ್ಲೇ ನಿಂತು ಯುದ್ಧ ಮಾಡುತ್ತಿದ್ದವರಿಗೆ ಈಗ ನೇರ ಬೆಳಕಿಗೆ ಬರುವ ಅನಿವಾರ್ಯತೆಯನ್ನು ಖರ್ಗೆ ಸೃಷ್ಟಿಸುತ್ತಿದ್ದಾರೆ.
ಇದನ್ನೂ ಓದಿ: DK Shivakumar: ವೋಟ್ ಹಾಕಿದ ಜನರೇನು ನಿಮ್ಮ ಎಂಜಲು ತಿನ್ನುವ ಗುಲಾಮರೇ? ‘ಕನಕಪುರ ಬಂಡೆ’ಯ ಅಹಂಕಾರಕ್ಕೆ ಜನರ ಸ್ವಾಭಿಮಾನವೇ ಬಲಿ!
ಇದು ದ್ವೇಷದ ರಾಜಕಾರಣವಲ್ಲ, ಸಂವಿಧಾನದ ಪರಮ ರಕ್ಷಣೆ!
ವಿರೋಧ ಪಕ್ಷಗಳು ಮತ್ತು ಬಲಪಂಥೀಯ ಟ್ರೋಲ್ ಪಡೆಗಳು ಇದನ್ನು ಎಂದಿನಂತೆ “ದ್ವೇಷದ ರಾಜಕಾರಣ” ಅಥವಾ “ಹಿಂದೂ ವಿರೋಧಿ ನಡೆ” ಎಂದು ಬಿಂಬಿಸಲು ಸಕಲ ಪ್ರಯತ್ನ ಮಾಡುತ್ತಿವೆ. ಆದರೆ, ಗೃಹ ಸಚಿವರಾಗಿ ಪ್ರಿಯಾಂಕ್ ಖರ್ಗೆ ಅವರು ಮಾಡುತ್ತಿರುವುದು ಸಂವಿಧಾನಬದ್ಧ ಕರ್ತವ್ಯವನ್ನು ಮಾತ್ರ. ಕಾನೂನಿಗಿಂತ ಮಿಗಿಲಾದವರು ಈ ದೇಶದಲ್ಲಿ ಯಾರೂ ಇರಲು ಸಾಧ್ಯವಿಲ್ಲ. ದೇಶದ ದಲಿತರು, ಹಿಂದುಳಿದವರು ಅಥವಾ ಅಲ್ಪಸಂಖ್ಯಾತರ ಸಂಘಟನೆಗಳಿಗೊಂದು ಕಾನೂನು, ಇನ್‌ಕಮ್ ಟ್ಯಾಕ್ಸ್‌ನಿಂದ ತಪ್ಪಿಸಿಕೊಳ್ಳಲು ಬಯಸುವ ಆರ್‌ಎಸ್‌ಎಸ್‌ಗೊಂದು ವಿನಾಯಿತಿ ಇರಲು ಹೇಗೆ ಸಾಧ್ಯ? ಯಾರು 24 ಗಂಟೆಯೂ ದೇಶಭಕ್ತಿಯ ಪಾಠ ಮಾಡುತ್ತಾರೋ, ಅವರು ಮೊದಲು ದೇಶದ ಕಾನೂನಿಗೆ ಗೌರವ ಕೊಟ್ಟು ತಾವೂ ನೊಂದಣಿ ಮಾಡಿಕೊಳ್ಳಲಿ, ತಮ್ಮ ನೂರಾರು ಕೋಟಿ ಫಂಡಿಂಗ್‌ನ ಲೆಕ್ಕವನ್ನು ಸಾರ್ವಜನಿಕವಾಗಿ ಇಡಲಿ ಎಂಬ ಖರ್ಗೆ ಅವರ ನೇರ ನಿಲುವು ಯಾರು ತಾನೇ ತಪ್ಪು ಅನ್ನಲು ಸಾಧ್ಯ?
ಹಿಂದಿನ ಸರ್ಕಾರಗಳು ಆರ್‌ಎಸ್‌ಎಸ್‌ನ ಚಟುವಟಿಕೆಗಳಿಗೆ ಸರ್ಕಾರಿ ಜಾಗಗಳನ್ನು ನೀಡಿದಾಗ ಹೈಕೋರ್ಟ್ ತಡೆ ನೀಡಿದ್ದ ಉದಾಹರಣೆಗಳೂ ಇವೆ. ಆದರೆ ಈಗ ಪ್ರಿಯಾಂಕ್ ಖರ್ಗೆ ಅವರು ಇಡೀ ವ್ಯವಸ್ಥೆಯನ್ನೇ ಕಾನೂನಿನ ಚೌಕಟ್ಟಿಗೆ ತರುತ್ತಿದ್ದಾರೆ. ಜೀವ ಬೆದರಿಕೆಗಳು, ಸೈಬರ್ ದಾಳಿಗಳು ಅಥವಾ ಹಳೆಯ ಹೆದರಿಸುವ ತಂತ್ರಗಳಿಗೆ ಕಿಂಚಿತ್ತೂ ಕಣ್ಮುಚ್ಚದೆ, ವ್ಯವಸ್ಥಿತವಾಗಿ ಕಾನೂನಿನ ಚೌಕಟ್ಟಿನಲ್ಲೇ ಆರ್‌ಎಸ್‌ಎಸ್‌ನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರ ಈ ಧೈರ್ಯ ಮತ್ತು ಲೀಗಲ್ ಸ್ಟ್ರ್ಯಾಟಜಿ ಸದ್ಯದ ಕರ್ನಾಟಕ ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ, ಪ್ರಬುದ್ಧ ಮತ್ತು ಅನಿವಾರ್ಯ ಹೆಜ್ಜೆಯಾಗಿದೆ. ನೆರಳಿನಲ್ಲೇ ನಿಂತು ರಾಜಕೀಯ ಚದುರಂಗದಾಟ ಆಡುತ್ತಿದ್ದವರಿಗೆ ಈಗ ಕಾನೂನಿನ ಅಸಲಿ ಬೆಳಕನ್ನು ಎದುರಿಸುವ ಅನಿವಾರ್ಯತೆ ಎದುರಾಗಿದೆ!

