Friday, September 11, 2026
Home ವಿಶ್ಲೇಷಣೆ Siddaramaiah:‌ ಅಹಿಂದದ ಘರ್ಜನೆ v/s ಫ್ಯೂಡಲ್ ಗರ್ವ; ಅರಸು-ಬಂಗಾರಪ್ಪ ಇತಿಹಾಸ ಮರೆತ ಕಾಂಗ್ರೆಸ್‌ಗೆ ಕಾದಿದೆ ಅಂತಿಮ...

Siddaramaiah:‌ ಅಹಿಂದದ ಘರ್ಜನೆ v/s ಫ್ಯೂಡಲ್ ಗರ್ವ; ಅರಸು-ಬಂಗಾರಪ್ಪ ಇತಿಹಾಸ ಮರೆತ ಕಾಂಗ್ರೆಸ್‌ಗೆ ಕಾದಿದೆ ಅಂತಿಮ ಶ್ರದ್ಧಾಂಜಲಿ!

Siddaramaiah:‌ ಅಹಿಂದದ ಘರ್ಜನೆ v/s ಫ್ಯೂಡಲ್ ಗರ್ವ: ಅರಸು-ಬಂಗಾರಪ್ಪ ಇತಿಹಾಸ ಮರೆತ ಕಾಂಗ್ರೆಸ್‌ಗೆ ಕಾದಿದೆ ಅಂತಿಮ ಶ್ರದ್ಧಾಂಜಲಿ!

Siddaramaiah: ಕರ್ನಾಟಕದ ರಾಜಕೀಯ ಅಂಗಳದಲ್ಲಿ ಈಗ ನಡೆಯುತ್ತಿರುವುದು ಕೇವಲ ಅಧಿಕಾರದ ಹಸುವಲ್ಲ; ಅದು ಪ್ರಬಲ ‘ಫ್ಯೂಡಲ್ (Feudal)’ ಅಹಂಕಾರ ಮತ್ತು ದಶಕಗಳಿಂದ ಶೋಷಣೆಗೆ ಒಳಗಾದ ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ಜನಾಂಗದ ಸ್ವಾಭಿಮಾನದ ನಡುವಿನ ನೇರ ಸಮರ! ಇತಿಹಾಸದ ಕಹಿ ಸತ್ಯಗಳನ್ನು ಮರೆತು, ಅಹಿಂದ ವರ್ಗದ ಶಕ್ತಿಯನ್ನು ಹಗುರವಾಗಿ ಪರಿಗಣಿಸಲು ಹೊರಟಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಭವಿಷ್ಯದಲ್ಲಿ ಕಾದಿರುವುದು ಅಂತಿಮ ರಾಜಕೀಯ ಶ್ರದ್ಧಾಂಜಲಿ.

“ನಾನು ಫುಟ್ಬಾಲ್ ಆಟಗಾರನಲ್ಲ, ಚೆಸ್ ಆಟಗಾರ!”: ಡಿಕೆಶಿ ಗರ್ವದ ನೇರ ಮಾತುಗಳು

ಅಧಿವೇಶನದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಆಡಿದ ಮಾತುಗಳೇ ಅವರ ‘ಫ್ಯೂಡಲ್’ ಮನಸ್ಥಿತಿಯನ್ನು ಜಗಜ್ಜಾಹೀರುಗೊಳಿಸಿವೆ. ಶಾಸಕಾಂಗ ಸಭೆ ಮತ್ತು ಅಧಿವೇಶನದ ಚರ್ಚೆಗಳ ವೇಳೆ ಅತ್ಯಂತ ಗರ್ವದಿಂದ ಮಾತನಾಡಿದ ಡಿಕೆಶಿ, “ನಾನು ರಾಜಕಾರಣದಲ್ಲಿ ಫುಟ್ಬಾಲ್ ಆಡೋನಲ್ಲ, ಚೆಸ್ ಆಡೋನು! 2028ಕ್ಕೆ ಏನು ಮಾಡಬೇಕು ಅನ್ನೋದು ನನಗೆ ಗೊತ್ತಿದೆ… ಒನ್ ಮ್ಯಾನ್ಸ್ ಕರೇಜ್ ಮೇಕ್ಸ್ ಮೆಜಾರಿಟಿ (ಒಬ್ಬನ ಧೈರ್ಯವೇ ಬಹುಮತ ತರುತ್ತದೆ). ನನ್ನ ಬಳಿ 136 ಶಾಸಕರಿದ್ದಾರೆ, ಇನ್‌ಕ್ಲೂಡಿಂಗ್ ಸಿದ್ದರಾಮಯ್ಯ (Siddaramaiah)!” ಎಂದು ಅತ್ಯಂತ ಸಲೀಸಾಗಿ ಹೇಳಿರುವುದು ಇಡೀ ರಾಜ್ಯ ರಾಜಕಾರಣವನ್ನು ಬೆಚ್ಚಿಬೀಳಿಸಿದೆ.

ತಾನೇ ಬೋರ್ಡ್ ಮೇಲಿನ ಕಾಯಿಗಳನ್ನು ಆಡಿಸುವ ಪಕ್ಕಾ ಚೆಸ್ ಪ್ಲೇಯರ್, ತಾನೇ ಪಕ್ಷದ ಸರ್ವಾಧಿಕಾರಿ, ಮತ್ತು ಅಹಿಂದ ನಾಯಕ ಸಿದ್ದರಾಮಯ್ಯನೂ ಸೇರಿದಂತೆ ಇಡೀ ಶಾಸಕ ವೃಂದ ತನ್ನ ಪಾದದಡಿಯಲ್ಲಿದೆ ಎನ್ನುವ ಶೈಲಿಯಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್ ಅವರಿಗೆ, ತಾನೇನು ಮಾತನಾಡುತ್ತಿದ್ದೇನೆ ಹಾಗೂ ಆ ಮಾತಿನ ಹಿಂದೆ ಇರುವ ಸೈದ್ಧಾಂತಿಕ ಪರಿಣಾಮವೇನು ಎನ್ನುವ ಕನಿಷ್ಠ ಎಚ್ಚರವೂ ಇಲ್ಲವೇನೋ ಎನ್ನುವ ತೀವ್ರ ವಿಶ್ಲೇಷಣೆಗಳು ಈಗ ರಾಜಕೀಯ ಪಂಡಿತರ ವಲಯದಲ್ಲಿ ನಡೆಯುತ್ತಿವೆ.

  • ಅಹಿಂದ ನಾಯಕನಿಗೆ ಎಸೆಯಲಾದ ಸವಾಲು: ಕೋಟ್ಯಂತರ ಶೋಷಿತ ಸಮುದಾಯಗಳ ಸರ್ವಸಮ್ಮತ ನಾಯಕ, ಮಾಸ್ ಲೀಡರ್ ಸಿದ್ದರಾಮಯ್ಯನವರನ್ನೇ “ನನ್ನ ಹಿಂದೆ ಇರುವ 136 ಜನರಲ್ಲಿ ಒಬ್ಬರು” ಎಂದು ತನ್ನ ಜೇಬಿನಲ್ಲಿಟ್ಟುಕೊಂಡು ಮಾತನಾಡುವ ಈ ಧಾಟಿಯು, ಅಹಿಂದ ವರ್ಗದ ಜನಾಂಗೀಯ ಸ್ವಾಭಿಮಾನಕ್ಕೆ ನೇರವಾಗಿ ಎಸೆದ ಸವಾಲು.
  • ಭ್ರಮೆಯ ರಾಜಕಾರಣ: ‘ತಾನೊಬ್ಬನೇ ಚೆಸ್ ಆಟಗಾರ, ತಾನಿದ್ದರೆ ಮಾತ್ರ ಕಾಂಗ್ರೆಸ್, ತಾನೊಬ್ಬನೇ ಶಾಸಕರನ್ನ ಗೆಲ್ಲಿಸಿಕೊಂಡು ಬಂದಿರುವುದು’ ಎನ್ನುವ ಅತಿಯಾದ ಫ್ಯೂಡಲ್ ಅಹಂನಲ್ಲಿ ತೇಲುತ್ತಿರುವ ಡಿಕೆಶಿಗೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಅಹಿಂದ ಮತಬ್ಯಾಂಕ್ ಇಲ್ಲದಿದ್ದರೆ ಕಾಂಗ್ರೆಸ್‌ನ ಅಸ್ತಿತ್ವವೇ ಶೂನ್ಯ ಎನ್ನುವ ಸರಳ ಸತ್ಯ ಮರೆತುಹೋಗಿದೆ.

ಇದನ್ನೂ ಓದಿ: Siddaramaiah ಸೈಲೆಂಟ್ ಸರ್ಜಿಕಲ್ ಸ್ಟ್ರೈಕ್: ಡಿಕೆಗೆ ಡೆಡ್ಲಿ ವಾರ್ನಿಂಗ್ ಕೊಟ್ರಾ ಮಾಜಿ ಸಿಎಂ? ‘ಮೌನ’ ಬಂಡಾಯದ ಹಿಂದೆ ಬಿಗ್ ಗೇಮ್ ಪ್ಲಾನ್!

ಇತಿಹಾಸದ ಪುಟಗಳು: ಅಹಿಂದ ನಾಯಕರನ್ನು ತುಳಿದು ಧೂಳಿಪಟವಾಗಿದ್ದ ಕಾಂಗ್ರೆಸ್!

ಕರ್ನಾಟಕದ ರಾಜಕೀಯ ಇತಿಹಾಸವನ್ನು ಒಮ್ಮೆ ತಿರುವಿ ನೋಡಿದರೆ ಕಾಂಗ್ರೆಸ್ ಹೈಕಮಾಂಡ್‌ನ ಅಸಲಿ ಚಹರೆ ಬಯಲಾಗುತ್ತದೆ. ಕೆಳಸಮುದಾಯದ ನಾಯಕರು ಬೆಳೆದು ಸ್ವತಂತ್ರ ಧ್ವನಿಯಾಗಲು ತೊಡಗಿದಾಗಲೆಲ್ಲ ಅವರನ್ನು ಹೊಸಕಿ ಹಾಕುವುದು ಕಾಂಗ್ರೆಸ್‌ನ ಹಳೆಯ ಚಾಳಿ. ಇದೀಗ ಸಿದ್ದರಾಮಯ್ಯ (Siddaramaiah) ಸರದಿಯಂತೆ ಕಾಣುತ್ತಿದೆ…

  • ಡಿ. ದೇವರಾಜ್ ಅರಸು ಅನುಭವಿಸಿದ ದ್ರೋಹ: ದೇಶದಲ್ಲೇ ಕಾಂಗ್ರೆಸ್ ನುಚ್ಚುನೂರಾಗಿದ್ದಾಗ ಕರ್ನಾಟಕದ ಮೂಲಕ ಮರುಜನ್ಮ ನೀಡಿದ್ದುದೇವರಾಜ್ ಅರಸು. ಭೂಸುಧಾರಣೆಯ ಮೂಲಕ ಶೋಷಿತರಿಗೆ ಧ್ವನಿಯಾದ ಕ್ರಾಂತಿಕಾರಿ ನಾಯಕನನ್ನು ಕಾಂಗ್ರೆಸ್ ನಿರ್ದಾಕ್ಷಿಣ್ಯವಾಗಿ ಉಚ್ಚಾಟಿಸಿತು. ಅರಸು ಅವರನ್ನು ಮೂಲೆಗುಂಪು ಮಾಡಿದ ಮರುಕ್ಷಣವೇ ಕಾಂಗ್ರೆಸ್ ತನ್ನ ಗಟ್ಟಿ ತಳಪಾಯವಾದ ಹಿಂದುಳಿದ ವರ್ಗಗಳ ಬೆಂಬಲವನ್ನು ಕಳೆದುಕೊಂಡು ದಿಕ್ಕುತಪ್ಪಿ ನಿಂತಿತು.
  • S. ಬಂಗಾರಪ್ಪ ಅವರ ಮೇಲಿನ ಗದಾಪ್ರಹಾರ: ಹಿಂದುಳಿದ ಈಡಿಗ/ಬಿಲ್ಲವ ಸಮುದಾಯದ ಜನಪ್ರಿಯ ನಾಯಕ, ಕನ್ನಡಿಗರ ಪರವಾಗಿ ಸಿಎಂ ಹುದ್ದೆಯನ್ನೇ ತೃಣಸಮಾನವಾಗಿ ಕಂಡ ಸಾರೇಕೊಪ್ಪ ಬಂಗಾರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅವಮಾನಿಸಿದಾಗ, ಇಡೀ ಹಿಂದುಳಿದ ವರ್ಗ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿತು. 58 ಸ್ಥಾನಗಳಿಗೆ ಕುಸಿದು ಕಾಂಗ್ರೆಸ್ ನಗೆಪಾಟಲು ಅನುಭವಿಸಿತು.

ಈ ಇಬ್ಬರೂ ದಿಗ್ಗಜರನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್ ಅನುಭವಿಸಿದ ಪೆಟ್ಟು ಸಣ್ಣದನ್ನಲ್ಲ. ಇಂದು ಸಿದ್ದರಾಮಯ್ಯನವರ ವಿಷಯದಲ್ಲೂ ಕಾಂಗ್ರೆಸ್ ಅದೇ ಹಳೆಯ ಅಪಾಯಕಾರಿ ಅಗ್ನಿಪರೀಕ್ಷೆಗೆ ಕೈಹಾಕುತ್ತಿದೆ!

ಸಿದ್ದರಾಮಯ್ಯ: ಕೇವಲ ನಾಯಕನಲ್ಲ, ಅಹಿಂದ ಅಸ್ತಿತ್ವದ ಸಂಕೇತ!

ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಬಂದ ಸಿದ್ದರಾಮಯ್ಯ, ಸತ್ತಂತಿದ್ದ ಕಾಂಗ್ರೆಸ್‌ಗೆ ‘ಅಹಿಂದ’ ಎನ್ನುವ ಮರುಜೀವ ನೀಡಿದರು. ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’ಗಳಂತಹ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಆಗಿರಲಿಲ್ಲ, ಬದಲಿಗೆ ಫ್ಯೂಡಲ್ ಶಕ್ತಿಗಳ ವಿರುದ್ಧ ಸಿದ್ಧಾಂತದ ಸಮರವಾಗಿದ್ದವು.

ಇತ್ತೀಚೆಗೆ ದೇವರಾಜ್ ಅರಸು ಅವರ ದಾಖಲೆಯನ್ನೇ ಮುರಿದು ಸುದೀರ್ಘ ಕಾಲ ಸಿಎಂ ಆಗಿ ಆಡಳಿತ ನಡೆಸಿದ ಸಿದ್ದರಾಮಯ್ಯ, ರಾಜ್ಯದ ತಳಸಮುದಾಯಗಳ ಕಣ್ಣಲ್ಲಿ ಕೇವಲ ನಾಯಕನಾಗಿ ಉಳಿದಿಲ್ಲ, ಬದಲಿಗೆ ಅವರ ಅಸ್ತಿತ್ವದ ಗ್ಯಾರಂಟಿಯಾಗಿದ್ದಾರೆ. ಹೈಕಮಾಂಡ್ ಹಾಗೂ ಪಕ್ಷದೊಳಗಿನ ಫ್ಯೂಡಲ್ ಶಕ್ತಿಗಳು ತಮ್ಮನ್ನು ನಿಯಂತ್ರಿಸಲು ಗೇಮ್ ಪ್ಲಾನ್ ಮಾಡುತ್ತಿದ್ದಂತೆಯೇ, ಸಿದ್ದರಾಮಯ್ಯ ಮತ್ತೆ ಅಹಿಂದ ಸಂಘಟನೆಗೆ ಚಾಲನೆ ನೀಡಿದ್ದಾರೆ. ಈ ನಿಗೂಢ ಹಾಗೂ ಖಡಕ್ ನಡೆ ಈಗ ದೆಹಲಿ ನಾಯಕರ ನಿದ್ದೆಗೆಡಿಸಿರುವುದಂತೂ ನಿರಾಕರಿಸಲಾಗದ ಸತ್ಯ.

ರಾಷ್ಟ್ರೀಯ ಮಾಧ್ಯಮಗಳ ವಿಶ್ಲೇಷಣೆ ಮತ್ತು ರಾಜಕೀಯ ಭವಿಷ್ಯ

ಸಿದ್ದರಾಮಯ್ಯ ಅವರ ರಾಜಕೀಯ ನಡೆ ಮತ್ತು ಅವರ ಶಕ್ತಿಯ ಕುರಿತು ಕೇವಲ ಪ್ರಾದೇಶಿಕ ವಾಹಿನಿಗಳು ಅಥವಾ ನ್ಯೂಸ್ ಪೋರ್ಟಲ್‌ಗಳು ಮಾತ್ರ ಮಾತನಾಡ್ತಿಲ್ಲ; ದೆಹಲಿಯ ರಾಷ್ಟ್ರೀಯ ಮಾಧ್ಯಮಗಳಾದ India Today ಹಾಗೂ The Times of India ದಂತಹ ದೈತ್ಯ ಸಂಸ್ಥೆಗಳಲ್ಲೂ ಬಿಸಿ ಬಿಸಿ ವಿಶ್ಲೇಷಣೆಗಳು ನಡೆಯುತ್ತಿವೆ.

ರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ:

  1. ಆತ್ಮಹತ್ಯಾತ್ಮಕ ನಿರ್ಧಾರ: ಸಿದ್ದರಾಮಯ್ಯ ಅವರನ್ನು ಕಡೆಗಣಿಸುವುದು ಅಥವಾ ಕಟ್ಟಿಹಾಕುವುದು ಎಂದರೆ ಕಾಂಗ್ರೆಸ್ ತನ್ನ ಕೈಯಾರ ತನ್ನ ಕುತ್ತಿಗೆಯನ್ನು ಹತಾರಕ್ಕೆ ಒಡ್ಡುವುದು ಒಂದೇ!
  2. ಸಿದ್ದರಾಮಯ್ಯರ ಮಾಸ್ ಪವರ್: ಹೈಕಮಾಂಡ್ ಹಾಗೂ ಡಿಕೆ ಶಿವಕುಮಾರ್ ಏನೇ ಚೆಸ್ ಆಟ ಆಡಿದರೂ, ಸಿದ್ದರಾಮಯ್ಯ ಅಹಿಂದ ಚಳವಳಿಯ ಮೂಲಕ ಇಡೀ ರಾಜ್ಯದ ಮತಬ್ಯಾಂಕ್ ಅನ್ನು ತಮಗಷ್ಟೇ ಅಲ್ಲದೆ ಬೇರೆಡೆಗೆ ತಿರುಗಿಸುವ ಅಸಾಧಾರಣ ತಾಕತ್ತು ಹೊಂದಿದ್ದಾರೆ.
  3. ನಿಯಂತ್ರಣಕ್ಕೆ ಸಿಗದ ಅಲೆ: ಫ್ಯೂಡಲ್ ನಾಯಕರ ಕೈಗೆ ಪಕ್ಷದ ಚುಕ್ಕಾಣಿ ಪೂರ್ಣವಾಗಿ ಸಿಕ್ಕರೆ, ತಳಮಟ್ಟದ 79% ಇರುವ ಜನಾಂಗೀಯ ಬೆಂಬಲ ಶಾಶ್ವತವಾಗಿ ಕಾಂಗ್ರೆಸ್ ಕೈಜಾರಲಿದೆ.

ಇದನ್ನೂ ಓದಿ: RB Timmapur: ಸ್ವಾರ್ಥ ಪತ್ರಕರ್ತರು-ಆಪ್ತರ ಮಾತು ಕೇಳಿ ಕೆಟ್ರಾ ತಿಮ್ಮಾಪುರ? ಸಚಿವ ಪಟ್ಟವೂ ಹೋಯ್ತು, ಭವಿಷ್ಯಕ್ಕೆ ‘ಟಿಕೆಟ್’ ಕಂಠಕವೂ ಬಂತು!

ಹೈಕಮಾಂಡ್‌ಗೆ ಕಾದಿದೆ ಬೂದಿಯಾಗುವ ಭವಿಷ್ಯ!

ಇತಿಹಾಸವನ್ನು ಮರೆತವರು ಇತಿಹಾಸದ ಕಸದ ಬುಟ್ಟಿಗೆ ಸೇರುತ್ತಾರೆ. ದೇವರಾಜ್ ಅರಸು ಮತ್ತು ಬಂಗಾರಪ್ಪ ಅವರನ್ನು ಮೂಲೆಗುಂಪು ಮಾಡಿ ಅನುಭವಿಸಿದ ದುರಂತಗಳು ಕಾಂಗ್ರೆಸ್‌ಗೆ ನೆನಪಿರಬೇಕಿತ್ತು. ಅಹಿಂದದ ಶಕ್ತಿಯನ್ನು ಪರೀಕ್ಷಿಸಲು ಹೊರಟರೆ ಕಾಂಗ್ರೆಸ್ ಚೂರು ಚೂರಾಗಿ ಧೂಳಿಪಟವಾಗುವುದು ನಿಶ್ಚಿತ.

ಇಂದು ರಾಜ್ಯದಲ್ಲಿ ಸ್ಪಷ್ಟವಾಗಿ ‘ಅಹಿಂದ ಶಕ್ತಿ v/s ಫ್ಯೂಡಲ್ ಅಹಂ’ ನಡುವೆ ಕದನ ಕುತೂಹಲ ಏರ್ಪಟ್ಟಿದೆ. ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಜಾಗೃತಗೊಂಡು ಈ ಫ್ಯೂಡಲ್ ಮನಸ್ಥಿತಿಯನ್ನು ಹದ್ದುಬಸ್ತಿನಲ್ಲಿಡದಿದ್ದರೆ, ಸಿದ್ದರಾಮಯ್ಯ ಅವರ ರಾಜಕೀಯ ಚಕ್ರವ್ಯೂಹದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನೇ ಕಳೆದುಕೊಂಡು ಸಂಪೂರ್ಣ ಬೂದಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ!

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...