ಬಾಗಲಕೋಟೆಯ ರಾಜಕೀಯ ಅಂಗಳದಲ್ಲಿ ಅಧಿಕಾರದ ನೆರಳು ನೆಚ್ಚಿಕೊಂಡು, ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಮೆರೆಯುತ್ತಿರುವ ‘ಹೊಳೆಬಸು ಶೆಟ್ಟರ್’ (Holebasu Shettar)ಗೆ ನ್ಯಾಯಾಲಯದ ಅಂಗಳದಲ್ಲಿ ಚಾರಿತ್ರಿಕ ಹಾಗೂ ಅತ್ಯಂತ ಹೀನಾಯ ಮುಖಭಂಗವಾಗಿದೆ!
ಪತ್ರಿಕಾ ಸ್ವಾತಂತ್ರ್ಯವನ್ನು ಕಸಿಯಲು, ಜನಪರ ಮಾಧ್ಯಮದ ಧ್ವನಿಯನ್ನು ಅಡಗಿಸಲು ಮತ್ತು ಶಾಸಕರ ಆಡಳಿತ ಯಂತ್ರದ ಅನಧಿಕೃತ ಹಸ್ತಕ್ಷೇಪದ ಸತ್ಯ ಸಂಗತಿಗಳನ್ನು ಹೊರತರುತ್ತಿದ್ದ ಪತ್ರಕರ್ತರನ್ನು ಬೆದರಿಸಲು ಹೊಳೆಬಸು ಶೆಟ್ಟರ್ ಹೂಡಿದ್ದ ಕಪಟ ಮಾನನಷ್ಟ ಮೊಕದ್ದಮೆ ದಾವೆ (O.S. No. 799/2026) ಇಂದು ಬಾಗಲಕೋಟೆ ಸಿವಿಲ್ ನ್ಯಾಯಾಲಯದಲ್ಲಿ ಧೂಳೀಪಟಗೊಂಡಿದೆ.
‘ಅಸಲಿ ಸುದ್ದಿ’ ನ್ಯೂಸ್ ಪೋರ್ಟಲ್ನಲ್ಲಿ ಪ್ರಕಟವಾಗುತ್ತಿದ್ದ ಸತ್ಯನಿಷ್ಠ ವರದಿಗಳಿಗೆ ಹೆದರಿ, ನ್ಯಾಯಾಲಯದ ಅಸ್ತ್ರ ಬಳಸಿ ಬೆದರಿಸಲು ಹೊರಟಿದ್ದ ಹೊಳೆಬಸು ಶೆಟ್ಟರ್ (Holebasu Shettar) ಅಂಡ್ ಟೀಮ್, ಇಂದು ಕೋರ್ಟ್ನಲ್ಲಿ ಪ್ರಬಲ ದಾಖಲೆಗಳ ಸಿಂಹಸ್ವಪ್ನ ಎದುರಾಗುತ್ತಿದ್ದಂತೆಯೇ ನಡುಗಿಹೋಗಿದ್ದಾರೆ. ಕೊನೆಗೆ ತಾವೇ ಹೂಡಿದ್ದ ಕೇಸ್ ಅನ್ನು ಬೇಷರತ್ತಾಗಿ ಹಿಂತೆಗೆದುಕೊಂಡು (Dismissed as Not Pressed) ಕೋರ್ಟ್ ಬಾಗಿಲಿನಿಂದ ಕಾಲ್ಕಿತ್ತು ಓಡಿಹೋಗಿದ್ದಾರೆ!
ಇಂದು ನ್ಯಾಯಾಲಯದಲ್ಲಿ ನಡೆದಿದ್ದೇನು?
ಹೊಳೆಬಸು ಶೆಟ್ಟರ್ (Holebasu Shettar): ಬಾಗಲಕೋಟೆಯ ಹೆಚ್ಚುವರಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ (ADDL. CIVIL JUDGE AND JMFC BAGALKOT) ಇಂದು ಬಹುಚರ್ಚಿತ ದಾವೆಯ (CNR No. KABK030067872026) ಮಹತ್ವದ ವಿಚಾರಣೆ ಇತ್ತು.
ಕೋರ್ಟ್ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಪ್ರಕರಣಕ್ಕೆ ಪ್ರಮುಖ ಹಾಗೂ ಚಾರಿತ್ರಿಕ ತಿರುವು ಸಿಕ್ಕಿತು.
- ಖ್ಯಾತ ವಕೀಲರ ವಕಾಲತ್ತು ಸಲ್ಲಿಕೆ
ಪ್ರತಿವಾದಿ D-1 (ಶ್ರೀಮತಿ ಮಹಾದೇವಿ ಮೇಟಿ) ಹಾಗೂ ಪ್ರತಿವಾದಿ D-3 (‘ಅಸಲಿ ಸುದ್ದಿ’ ಸಂಪಾದಕರಾದ ಪ್ರವೀಣ ಜಿ. ಯಳ್ಳಿಗುತ್ತಿ) ಪರವಾಗಿ ಯುವ ವಕೀಲ ಹೊಳೆಬಸು ಎಸ್. ಹಾಳಕೇರಿ (ಬೆಂಗಳೂರು ವಕೀಲ) ಅವರು ನ್ಯಾಯಾಲಯದಲ್ಲಿ ಅಧಿಕೃತ ವಕಾಲತ್ತು ಸಲ್ಲಿಸಿ ರಂಗಪ್ರವೇಶ ಮಾಡಿದರು. ಹಾಗೆಯೇ ಪ್ರತಿವಾದಿ D-2 (ಪತ್ರಕರ್ತ ವಿಠ್ಠಲ ಆರ್. ಬಲಕುಂದಿ) ಪರವಾಗಿ ವಕೀಲರಾದ ಆರ್. ಆರ್. ಬಲಕುಂದಿ (RRB) ಅವರು ವಕಾಲತ್ತು ಸಲ್ಲಿಸಿ ಹಾಜರಾದರು.

- ಕಟು ಸತ್ಯಗಳ ದಾಖಲೆಗಳ ಸಿದ್ಧತೆ
ಪ್ರತಿವಾದಿಗಳ ಪರ ವಕೀಲರಾದ ಹೊಳೆಬಸು ಹಾಳಕೇರಿ ಅವರು, ಅರ್ಜಿದಾರ ಹೊಳೆಬಸು ಶೆಟ್ಟರ್ ಹೆಣೆದಿದ್ದ ಸುಳ್ಳು ಕಥೆಗಳನ್ನು ಒಂದೊಂದಾಗಿ ಬಿಚ್ಚಿಡಲು ಸಕಲ ಆಧಾರಸಹಿತ ಸಾಕ್ಷ್ಯಗಳನ್ನು ಸಿದ್ಧಪಡಿಸಿಕೊಂಡಿದ್ದರು. ‘ಅಸಲಿ ಸುದ್ದಿ’ಯಲ್ಲಿ ಪ್ರಕಟವಾದ ಪ್ರತಿಯೊಂದು ವರದಿಯೂ ನೂರಕ್ಕೆ ನೂರರಷ್ಟು ಸತ್ಯ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ ಎಂಬುದನ್ನು ಸಾಬೀತುಪಡಿಸಲು ನ್ಯಾಯಪೀಠದ ಮುಂದೆ ಸಜ್ಜಾಗಿ ನಿಂತಿದ್ದರು.
- ‘ಶೆಟ್ಟರ್’ ಪಡೆಗೆ ಎದುರಾದ ಭೀತಿ
‘ಅಸಲಿ ಸುದ್ದಿ’ ಪರ ವಕೀಲರು ದಾಖಲೆಗಳೊಂದಿಗೆ ಸಮರಕ್ಕೆ ಇಳಿಯುತ್ತಿರುವುದನ್ನು ಕಂಡ ಹೊಳೆಬಸು ಶೆಟ್ಟರ್ ಹಾಗೂ ಅವರ ವಕೀಲರಿಗೆ ತೀವ್ರ ನಡುಕ ಶುರುವಾಯಿತು. ವಿಚಾರಣೆ ಮುಂದುವರಿದರೆ ತಮಗಾಗುವ ಮುಖಭಂಗ ಅಪಾರ, ತಾವೇ ಹೆಣೆದ ಬಲೆಯಲ್ಲಿ ತಾವೇ ಬೀಳುವುದು ಖಚಿತ ಎಂದು ಮನಗಂಡರು.
- ಮೆಮೊ ಸಲ್ಲಿಸಿ ಶರಣಾದ ಶೆಟ್ಟರ್!
ಬೇರೆ ದಾರಿ ಕಾಣದೆ, ಶೆಟ್ಟರ್ ಪರ ವಕೀಲರು ನ್ಯಾಯಾಧೀಶರ ಮುಂದೆ ‘Memo to not press the suit’ (ದಾವೆಯನ್ನು ಮುಂದುವರಿಸುವುದಿಲ್ಲ ಎಂಬ ಹಿಂಪಡೆಯುವಿಕೆ ಮೆಮೊ) ಸಲ್ಲಿಸಿದರು. ಪ್ರಕರಣವನ್ನು ವಜಾಗೊಳಿಸುವಂತೆ ಕೋರ್ಟ್ಗೆ ಮನವಿ ಮಾಡಿಕೊಂಡರು.
ನ್ಯಾಯಾಲಯದ ಅಂತಿಮ ಆದೇಶ?
ಮೆಮೊವನ್ನು ಕೂಲಂಕುಷವಾಗಿ ಪರಿಶೀಲಿಸಿದ ಮಾನ್ಯ ನ್ಯಾಯಾಧೀಶರು, ಹೊಳೆಬಸು ಶೆಟ್ಟರ್ (Holebasu Shettar) ಸಲ್ಲಿಸಿದ್ದ ದಾವೆಯನ್ನು “DISMISSED AS NOT PRESSED” ಎಂದು ವಜಾಗೊಳಿಸಿ, ಪ್ರಕರಣವನ್ನು ಶಾಶ್ವತವಾಗಿ ಕ್ಲೋಸ್ (Closed the case) ಮಾಡಿ ಅಂತಿಮ ಆದೇಶ ಹೊರಡಿಸಿದರು.
ಇದನ್ನೂ ಓದಿ: ಚಹಾ ಕೊಡ್ತಿದ್ದವನು ಚೇರ್ಮನ್ ರೇಂಜ್ಗೆ ಬೆಳೆದಿದ್ದು ಹೇಗೆ? ಅಕ್ರಮಗಳ ಕಿಂಗ್ಪಿನ್ನ ಅಸಲಿ ಮುಖವಾಡ ಬಯಲು!
ಶಾಸಕರ ಹೆಸರಿನಲ್ಲಿ ಮೆರೆಯುತ್ತಿದ್ದ ‘ಪಿಎ ಶೆಟ್ಟರ್’ ಅಸಲೀಯತ್ತು!
ಈ ಪ್ರಕರಣದ ಮೂಲವನ್ನು ಹುಡುಕುತ್ತಾ ಹೋದರೆ, ಅಧಿಕಾರದ ಮದ ಮತ್ತು ಸತ್ಯವನ್ನು ಸಹಿಸದ ಸಣ್ಣತನದ್ದು ಎಂಬುದು ಸ್ಪಷ್ಟವಾಗುತ್ತದೆ.
- ಅಧಿಕಾರದ ಅನಧಿಕೃತ ಕೇಂದ್ರ:
ಬಾಗಲಕೋಟೆ ಕ್ಷೇತ್ರದಲ್ಲಿ ಶಾಸಕರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು, ಅಧಿಕೃತವಾಗಿ ಯಾವುದೇ ಸರ್ಕಾರಿ ಅಥವಾ ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ ‘ತಾನೇ ಮಹಾನಾಯಕ’ ಎಂದು ಬಿಂಬಿಸಿಕೊಳ್ಳುತ್ತಿರುವ ಹೊಳೆಬಸು ಶೆಟ್ಟರ್ ಏನ್ನುವ ವ್ಯಕ್ತಿ, ಆಡಳಿತ ಯಂತ್ರದಲ್ಲಿ ಚಕ್ರಬಡ್ಡಿ ದರ್ಬಾರ್ ನಡೆಸುತ್ತಿದ್ದರೆಂಬ ಗಂಭೀರ ಆರೋಪಗಳಿದ್ದವು.
- ಅಸಲಿ ಸುದ್ದಿಯ ಸತ್ಯದ ಘರ್ಜನೆ:
‘ಅಸಲಿ ಸುದ್ದಿ’ ನ್ಯೂಸ್ ಪೋರ್ಟಲ್ ಈ ಅನಧಿಕೃತ ದರ್ಬಾರ್ ಹಾಗೂ ಹೊಳೆಬಸು ಶೆಟ್ಟರ್ ಏನ್ನುವ ವ್ಯಕ್ತಿಯ ನೈಜ ಇತಿಹಾಸದ ಬಗ್ಗೆ ಆಧಾರಸಹಿತ ತನಿಖಾ ವರದಿಗಳನ್ನು ಪ್ರಕಟಿಸಿತ್ತು. ಜುಲೈ 3, 2026 ರಂದು ‘BTDA ಭ್ರಷ್ಟಾಚಾರದ ಮಸಣ; ಸಂತ್ರಸ್ತರ ಕಣ್ಣೀರಿನ ಮೇಲೆ ಲಂಚಬಾಕರ ದರ್ಬಾರು! 299 ಸೈಟ್ ಸ್ಕ್ಯಾಮ್ಗೆ ಸಿಗಲಿದೆಯೇ ನ್ಯಾಯ?‘ ಎಂಬ ಶೀರ್ಷಿಕೆಯಡಿಯಲ್ಲಿ ಸ್ಫೋಟಕ ವರದಿ ಮಾಡಿ, ನೊಂದ ಸಂತ್ರಸ್ತರ ಪರ ಧ್ವನಿ ಎತ್ತಿತ್ತು.
- 5 ಕೋಟಿ ನೋಟೀಸ್ ಬೆದರಿಕೆ:
ಸತ್ಯ ಹೊರಬರುತ್ತಿದ್ದಂತೆ ಕಂಗಾಲಾದ ಹೊಳೆಬಸು ಶೆಟ್ಟರ್, ‘ಅಸಲಿ ಸುದ್ದಿ’ ಸಂಪಾದಕ ಪ್ರವೀಣ ಯಳ್ಳಿಗುತ್ತಿ ಸೇರಿದಂತೆ ಇತರರಿಗೆ ಜೂನ್ 16, 2026 ರಂದು ಲೀಗಲ್ ನೋಟೀಸ್ ಕಳುಹಿಸಿ ಬರೋಬ್ಬರಿ 5 ಕೋಟಿ ರೂಪಾಯಿ ಪರಿಹಾರ ಹಾಗೂ ಕ್ಷಮಾಪಣೆಗೆ ಆಗ್ರಹಿಸಿ ಬೆದರಿಸಲು ನೋಡಿದ್ದರು.
ಕೋರ್ಟ್ನಲ್ಲಿ ದಾವೆ ಹೂಡಿಕೆ:
‘ಅಸಲಿ ಸುದ್ದಿ’ ಈ ಬೆದರಿಕೆಗೆ ಜಗ್ಗದಿದ್ದಾಗ, ಸೆಪ್ಟೆಂಬರ್ 24, 2026 ರಂದು ಸಿವಿಲ್ ಕೋರ್ಟ್ನಲ್ಲಿ O.S. No. 799/2026 ದಾವೆ ಹೂಡಿದ್ದರು. ‘ಅಸಲಿ ಸುದ್ದಿ’ ಪೋರ್ಟಲ್ನಲ್ಲಿರುವ ವರದಿಗಳನ್ನು ತೆಗೆದುಹಾಕಲು (Delete) ಹಾಗೂ ಮುಂದೆ ತಮ್ಮ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ತಡೆಆಜ್ಞೆ (Injunction) ನೀಡಲು ಕೋರಿದ್ದರು.
ಇದೀಗ ಹೊಳೆಬಸು ಶೆಟ್ಟರ್ಗೆ ಚಾರಿತ್ರಿಕ ಕಪಾಳಮೋಕ್ಷ!
ಈ ನ್ಯಾಯಾಲಯದ ಆದೇಶವನ್ನು ಕೇವಲ ಸಾಮಾನ್ಯ ಪ್ರಕರಣವೆಂದು ನೋಡಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಮತ್ತು ರಾಜಕೀಯ ನಾಯಕನ ಅಹಂನ ನಡುವಿನ ಧರ್ಮಯುದ್ಧ!
ಸತ್ಯವಿದ್ದರೆ ವಾದಿಸುತ್ತಿದ್ದರು, ಓಡುತ್ತಿರಲಿಲ್ಲ!
ಹೊಳೆಬಸು ಶೆಟ್ಟರ್ ಹೂಡಿದ ದಾವೆಯಲ್ಲಿ ಸಣ್ಣ ಪ್ರಮಾಣದ ಸತ್ಯಾಂಶವಿದ್ದರೂ, ಅವರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದರು. ಆದರೆ ‘ಅಸಲಿ ಸುದ್ದಿ’ ಪರ ವಕೀಲರು ವಕಾಲತ್ತು ಸಲ್ಲಿಸಿ ರಂಗಕ್ಕಿಳಿಯುತ್ತಿದ್ದಂತೆಯೇ, ವಿಚಾರಣೆಗೆ ಹೆದರಿ ಮೆಮೊ ನೀಡಿ ಓಡಿಹೋಗಿದ್ದು ಅವರ ಆರೋಪಗಳಲ್ಲಿದ್ದ ಸುಳ್ಳನ್ನು ನಿರೂಪಿಸುತ್ತದೆ.
- ಕೋಟಿ ಕೋಟಿ ಬೆದರಿಕೆಗೆ ಪತ್ರಿಕಾರಂಗದ ತಕ್ಕ ಪೆಟ್ಟು!
ಐದು ಕೋಟಿ ರೂಪಾಯಿ ಕೇಸ್ ಹಾಕುತ್ತೇವೆ ಎಂದು ಹೆದರಿಸಿ ಮಾಧ್ಯಮಗಳ ಬಾಯಿ ಮುಚ್ಚಿಸಬಹುದು ಎಂಬ ದುರಾಶೆಗೆ ನ್ಯಾಯಾಲಯ ಸೂಕ್ತ ಉತ್ತರ ನೀಡಿದೆ. ಬೆದರಿಕೆ ಕಾಗದಗಳಿಗೆ ‘ಅಸಲಿ ಸುದ್ದಿ’ ಎಂದಿಗೂ ಅಂಜುವುದಿಲ್ಲ ಎಂಬುದು ಸಾಬೀತಾಗಿದೆ.
- ಶಾಸಕರ ಗೌರವಕ್ಕೂ ತಂದಿಟ್ಟ ಧಕ್ಕೆ!
ತಮ್ಮನ್ನು ತಾವೇ ಪ್ರಭಾವಿ ಎಂದು ತೋರಿಸಿಕೊಳ್ಳಲು ಹೋಗಿ ಹೊಳೆಬಸು ಶೆಟ್ಟರ್ ಮಾಡಿದ ಈ ಸಾಹಸ, ಕೊನೆಗೆ ನ್ಯಾಯಾಲಯದ ಬಾಗಿಲಲ್ಲಿ ನಿಂತು ಶರಣಾಗುವ ಮೂಲಕ ಶಾಸಕರ ವಲಯದಲ್ಲೂ ಅವರಿಗೆ ನಾಚಿಕೆಗೇಡಿನ ಪರಿಸ್ಥಿತಿ ತಂದಿಟ್ಟಿದೆ.
‘ಅಸಲಿ ಸುದ್ದಿ’ ಸಂಸ್ಥೆಯ ಕಿಡಿನುಡಿ:
“ನಾವು ವರದಿ ಮಾಡುವುದು ಸಾರ್ವಜನಿಕರ ಪರವಾಗಿ ಮತ್ತು ನೂರಕ್ಕೆ ನೂರರಷ್ಟು ಸತ್ಯದ ಆಧಾರದ ಮೇಲೆ. ಅಧಿಕಾರದ ನೆರಳಿನಲ್ಲಿ ಕುಳಿತು ಸಾರ್ವಜನಿಕರನ್ನು, ಮಾಧ್ಯಮಗಳನ್ನು ಬೆದರಿಸಬಹುದು ಎಂಬ ಭ್ರಮೆಯಲ್ಲಿದ್ದವರಿಗೆ ಇಂದಿನ ಕೋರ್ಟ್ ತೀರ್ಪು ತಕ್ಕ ಪಾಠ ಕಲಿಸಿದೆ.
ನಮ್ಮ ಮೇಲೆ ಕೋಟಿ ಕೋಟಿ ರೂಪಾಯಿ ದಾವೆ ಹೂಡಿ, ಕೋರ್ಟ್ ನೋಟೀಸ್ ತೋರಿಸಿ ನಮ್ಮನ್ನು ಹೆದರಿಸಲು ನೋಡಿದರು. ಆದರೆ ನಾವು ಸತ್ಯದ ಪರವಾಗಿ ನಿಂತಿದ್ದೆವು. ಇಂದು ಕೋರ್ಟ್ನಲ್ಲಿ ನಮ್ಮ ವಕೀಲರು ದಾಖಲೆಗಳೊಂದಿಗೆ ನಿಲ್ಲುತ್ತಿದ್ದಂತೆಯೇ ಕೇಸ್ ಹಿಂಪಡೆದು ಓಡಿಹೋಗಿದ್ದಾರೆ. ಇದು ‘ಅಸಲಿ ಸುದ್ದಿ’ಯ ಧೈರ್ಯ ಹಾಗೂ ಬಾಗಲಕೋಟೆಯ ಸಂತ್ರಸ್ತರ ಜಯ!”
ಸತ್ಯಕ್ಕೆ ಸಾವಿಲ್ಲ, ‘ಅಸಲಿ ಸುದ್ದಿ’ಗೆ ಸಿಕ್ಕ ಗೆಲುವು!
ನ್ಯಾಯಾಲಯದ ಬಾಗಿಲಿನಲ್ಲಿ ನಿಂತು ಹೊಳೆಬಸು ಶೆಟ್ಟರ್ ತಾವೇ ಹೂಡಿದ ಕೇಸ್ ಅನ್ನು ಹಿಂತೆಗೆದುಕೊಂಡು ಶರಣಾಗಿರುವುದು ‘ಅಸಲಿ ಸುದ್ದಿ’ಯ ಜನಪರ ಕಾಳಜಿಗೆ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಸಿಕ್ಕ ಪ್ರಚಂಡ ಗೆಲುವು!
- ಸತ್ಯ ಸದಾ ಗೆಲ್ಲುತ್ತದೆ!
- ಅಸಲಿ ಸುದ್ದಿಯ ‘ಅಸಲಿ ಆಟ’ದ ಮುಂದೆ ಸುಳ್ಳಿನ ಆಟ ನಡೆಯುವುದಿಲ್ಲ!
- ಮಾಧ್ಯಮ ಸ್ವಾತಂತ್ರ್ಯವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ!
ಹೊಳೆಬಸು ಶೆಟ್ಟರ್ ಅವರ ಈ ಪಲಾಯನ, ಅಧಿಕಾರದ ನೆರಳಿನಲ್ಲಿ ಮೆರೆಯುವ ಪ್ರತಿಯೊಬ್ಬರಿಗೂ ನಿರಂತರ ಎಚ್ಚರಿಕೆಯ ಗಂಟೆಯಾಗಿರಲಿ!
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






