ಭಾರತೀಯ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಡಿಜಿಟಲ್ ಕ್ರಾಂತಿಯೊಂದು ಕೇವಲ ಒಂದು ವಾರದಲ್ಲಿ ಸೃಷ್ಟಿಯಾಗಿತ್ತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯೊಂದರ ವಿಡಂಬನೆಯಾಗಿ ಹುಟ್ಟಿಕೊಂಡ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ದೇಶದ ನಿರುದ್ಯೋಗಿ, ಹತಾಶ ಯುವ ಸಮುದಾಯದ ಬಲಿಷ್ಠ ಧ್ವನಿಯಾಗಿ ರೂಪಾಂತರಗೊಂಡಿತು. ಆದರೆ, ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸುವ ಯುವಶಕ್ತಿಯ ಹೋರಾಟ ಅಧಿಕಾರ ಹಿಡಿದವರ ನಿದ್ದೆ ಗೆಡಿಸಿದಾಗ, ಅವರು ಯಾವ ಕೀಳುಮಟ್ಟದ ಹಾದಿ ಹಿಡಿಯುತ್ತಾರೆ ಎಂಬುದಕ್ಕೆ ಪ್ರಸ್ತುತ CJP ಮೇಲಿನ ಡಿಜಿಟಲ್ ದಾಳಿಯೇ ಸಾಕ್ಷಿ.
ಇದು ಕೇವಲ ಒಂದು ಸೋಷಿಯಲ್ ಮೀಡಿಯಾ ಪೇಜ್ ಹ್ಯಾಕ್ (Social media page hack) ಆಗಿರುವ ಕಥೆಯಲ್ಲ; ಇದು ವ್ಯವಸ್ಥಿತವಾಗಿ ಭಿನ್ನಾಭಿಪ್ರಾಯದ ಧ್ವನಿಯನ್ನು ಹತ್ತಿಕ್ಕಲು ಆಡಳಿತ ಪಕ್ಷದ ಬೆಂಬಲಿಗರು ಮತ್ತು ಐಟಿ ಸೆಲ್ (IT Cell) ಹೆಣೆದ ಮಹಾ ಕುತಂತ್ರದ ಸರಣಿ.
Cockroach Janta Party’s official Instagram account has been hacked.
We have lost the access to the account.
— Abhijeet Dipke (@abhijeet_dipke) May 23, 2026
ರಾಷ್ಟ್ರೀಯ ಪಕ್ಷಗಳಿಗಿಂತಲೂ ಅಧಿಕ ಫಾಲೋವರ್ಸ್: ಬೆಚ್ಚಿಬಿದ್ದ ರಾಜಕೀಯ ಧುರೀಣರು
CJP: ದೇಶದ ಅತಿ ದೊಡ್ಡ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಡಿಜಿಟಲ್ ಜಗತ್ತಿನಲ್ಲಿ ಕೋಟ್ಯಂತರ ಫಾಲೋವರ್ಸ್ ಮತ್ತು ಸೈನ್ಯವನ್ನು ಕಟ್ಟಲು ವರ್ಷಗಳೇ ಬೇಕಾದವು. ಆದರೆ, ಕೇವಲ 5-6 ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾರತದ ಎಲ್ಲಾ ರಾಷ್ಟ್ರೀಯ ಪಕ್ಷಗಳಿಗಿಂತಲೂ ಹೆಚ್ಚಿನ ಅಂದರೆ 2 ಕೋಟಿಗೂ (21 Million) ಅಧಿಕ ಫಾಲೋವರ್ಸ್ ಪಡೆದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದು ಈ ಕಾಕ್ರೋಚ್ ಜನತಾ ಪಾರ್ಟಿ!
ಯುವಜನತೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಈ ಮೂವ್‌ಮೆಂಟ್ ಬೆಂಬಲಿಸಿದ್ದನ್ನು ಕಂಡು ಆಡಳಿತಾರೂಢ ಬಿಜೆಪಿ ಮತ್ತು ಅದರ ಐಟಿ ಸೆಲ್ ಆತಂಕಕ್ಕೆ ಒಳಗಾಯಿತು. ಈ ಯುವ ಅಲೆಯು ತಮ್ಮ ವೋಟ್ ಬ್ಯಾಂಕ್ ಮತ್ತು ಇಮೇಜ್‌ಗೆ ಧಕ್ಕೆ ತರುತ್ತದೆ ಎಂದು ಅರಿತ ತಕ್ಷಣವೇ ‘ಡ್ಯಾಮೇಜ್ ಕಂಟ್ರೋಲ್’ ಹೆಸರಿನಲ್ಲಿ ಕೀಳುಮಟ್ಟದ ಪಿತೂರಿಗಳು ಆರಂಭವಾದವು.
ಇದನ್ನೂ ಓದಿ: Suresh Kumar: ಸೌಮ್ಯತೆಯ ಮುಖವಾಡ ಕಳಚಿತು: ಫೇಕ್ ನ್ಯೂಸ್ ಹರಡಿ ಅಸಲಿ ಬಣ್ಣ ಬಯಲು ಮಾಡಿಕೊಂಡ ‘ಸರಳ’ ಸುರೇಶ್ ಕುಮಾರ್!
ಸುಳ್ಳುಗಳ ಸರಮಾಲೆ: ಕೇಜ್ರಿವಾಲ್, ರಾಹುಲ್ ಗಾಂಧಿ ಮತ್ತು ‘ಪಾಕಿಸ್ತಾನ್’ ಲಿಂಕ್!
ಯುವಶಕ್ತಿಯ ಈ ಸ್ವಯಂಪ್ರೇರಿತ ಆಂದೋಲನವನ್ನು ಹಳ್ಳ ಹಿಡಿಸಲು ಆಡಳಿತ ಪಕ್ಷದ ಐಟಿ ಸೆಲ್ ಹಂತ ಹಂತವಾಗಿ ಸುಳ್ಳು ಕಥೆಗಳನ್ನು ಹೆಣೆಯುತ್ತಾ ಹೋಯಿತು:
- ಮೊದಲ ಸುಳ್ಳು (ಆಪ್ ಲಿಂಕ್): ಈ ಹೋರಾಟದ ಹಿಂದೆ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಇದ್ದಾರೆ, ಇದು ಅವರದ್ದೇ ಪ್ರಾಯೋಜಿತ ಪ್ರೊಪಗಾಂಡಾ ಎಂದು ಗುಲ್ಲು ಎಬ್ಬಿಸಲಾಯಿತು.
- ಎರಡನೇ ಸುಳ್ಳು (ಕಾಂಗ್ರೆಸ್ ಲಿಂಕ್): ಅದೂ ವರ್ಕ್ ಆಗದಿದ್ದಾಗ, ಇದರ ಹಿಂದೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹಸ್ತವಿದೆ ಎಂದು ಕಥೆ ಕಟ್ಟಲಾಯಿತು.
- ಅಂತಿಮ ಅಸ್ತ್ರ ‘ದೇಶದ್ರೋಹ’ದ ಹಣೆಪಟ್ಟಿ: ಭಾರತದಲ್ಲಿ ಯಾವುದೇ ಆಂದೋಲನವನ್ನು ಮುಗಿಸಬೇಕಾದರೆ ಬಳಸುವ ಎಂದಿನ ‘ಪಾಕಿಸ್ತಾನ್’ ಅಸ್ತ್ರವನ್ನು ಇಲ್ಲಿಯೂ ಬಳಸಲಾಯಿತು. ನಕಲಿ ಚಾಟ್‌ಗಳನ್ನು ಸೃಷ್ಟಿಸಿ, “ಕಾಕ್ರೋಚ್ ಪಾರ್ಟಿಯ ಫಾಲೋವರ್ಸ್ ಎಲ್ಲಾ ಪಾಕಿಸ್ತಾನಿಗಳು ಮತ್ತು ವಿದೇಶಿಗರು” ಎಂದು ಬಿಜೆಪಿ ಐಟಿ ಸೆಲ್ ಸುಳ್ಳು ಸುದ್ದಿ ಹಬ್ಬಿಸಿತು.
ದೀಪ್ತಿ ನೀಡಿದ ತಕ್ಕ ಉತ್ತರ ಮತ್ತು ಬಯಲಾದ ಸುಳ್ಳುಗಳು
ಆದರೆ, ಐಟಿ ಸೆಲ್‌ನ ಈ ‘ಪಾಕಿಸ್ತಾನ್’ ಸುಳ್ಳು ಹೆಚ್ಚು ದಿನ ಬಾಳಲಿಲ್ಲ. ಸಂಸ್ಥಾಪಕ ಅಬಿಜೀತ್ ದೀಪ್ತಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಅಧಿಕೃತ ಅನಾಲಿಟಿಕ್ಸ್ (ಖಾತೆಯ ಫಾಲೋವರ್ಸ್ ದೇಶಗಳ ಶೇಕಡಾವಾರು ಚಾರ್ಟ್) ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದರು. ಅದರಲ್ಲಿ ಶೇ. 90 ಕ್ಕಿಂತ ಹೆಚ್ಚು ಭಾರತದ ಯುವಕರೇ ಇದ್ದದ್ದು ಸಾಬೀತಾಯಿತು. ಆ ಮೂಲಕ ಬಿಜೆಪಿಗರ ಸುಳ್ಳು ಜಗತ್ತಿನ ಮುಂದೆ ಬೆತ್ತಲಾಯಿತು.
ಇದನ್ನೂ ಓದಿ: Digital war: ‘ಕಾಕ್ರೋಚ್ ಪಾರ್ಟಿ’ ಫಾಲೋವರ್ಸ್ ಸಂಖ್ಯೆ ಕಂಡು ಕಂಗೆಟ್ಟ BJP ಐಟಿ ಸೆಲ್! ಶುರುವಾಯ್ತು ಅನ್‌ಫಾಲೋ ಆಂದೋಲನ!
ಡಿಜಿಟಲ್ ಸರ್ವಾಧಿಕಾರ: ಸತ್ಯಕ್ಕೆ ಹೆದರಿ ಅಕೌಂಟ್‌ಗಳೇ ಹ್ಯಾಕ್!
ಯಾವ ಸುಳ್ಳುಗಳಿಗೂ ದೇಶದ ಯುವಜನತೆ ಬಗ್ಗದಿದ್ದಾಗ ಮತ್ತು ನೀಟ್ (NEET-UG 2026) ಪೇಪರ್ ಲೀಕ್ ಹಗರಣದ ವಿರುದ್ಧ ಸಿಜೆಪಿ ಧ್ವನಿ ಎತ್ತಿದಾಗ, ಅಂತಿಮವಾಗಿ ಇಳಿದಿದ್ದು ಸೈಬರ್ ಗೂಂಡಾಗಿರಿಗೆ.
- ಮೊದಲು CJP ಅವರ ಟ್ವಿಟರ್ (X) ಖಾತೆಯನ್ನು ಭಾರತ ಸರ್ಕಾರದ ಕಾನೂನು ಬೇಡಿಕೆಯಡಿಯಲ್ಲಿ ತಡೆಹಿಡಿಯಲಾಯಿತು (Withheld).
- ಅದಾದ ಬೆನ್ನಲ್ಲೇ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ, ಅಬಿಜೀತ್ ಅವರ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಲಾಯಿತು.
- ಯುವಕರ ಜೊತೆ ಸಂಪರ್ಕದಲ್ಲಿರಲು ತೆರೆದ ಬ್ಯಾಕ್-ಅಪ್ ಖಾತೆಗಳನ್ನೂ ಸಹ ಡಿಲೀಟ್ ಮಾಡಿಸುವಲ್ಲಿ ಆಡಳಿತದ ಪ್ರಭಾವ ಯಶಸ್ವಿಯಾಯಿತು.
ಪ್ರಶ್ನೆ ಇಲ್ಲಿದೆ: ಒಂದು ವೇಳೆ ಕಾಕ್ರೋಚ್ ಜನತಾ ಪಾರ್ಟಿ ಕೇವಲ ‘ಜೋಕ್’ ಅಥವಾ ‘ಮೀಮ್ ಪೇಜ್’ ಆಗಿದ್ದರೆ, ಅದರ ಅಕೌಂಟ್‌ಗಳನ್ನು ಬ್ಯಾನ್ ಮಾಡಲು, ಹ್ಯಾಕ್ ಮಾಡಲು ಇಷ್ಟೊಂದು ವ್ಯವಸ್ಥಿತ ಸಂಚು ಏಕೆ ಬೇಕಿತ್ತು? ಇದು ಆಡಳಿತ ಪಕ್ಷಕ್ಕೆ ಎದುರಾಗಿರುವ ನಡುಕವನ್ನು ತೋರಿಸುತ್ತದೆ.
ಜೀವ ಬೆದರಿಕೆಯ ಹೀನ ಮನಸ್ಥಿತಿ: ಖಂಡನೀಯ ಬೆಳವಣಿಗೆ
ವಿಚಾರವನ್ನು ವಿಚಾರದಿಂದ ಎದುರಿಸಲಾಗದವರು ಸದ್ಯ ಅಬಿಜೀತ್ ದೀಪ್ತಿ ಮತ್ತು ಅವರ ಕುಟುಂಬಕ್ಕೆ ನಿರಂತರ ಜೀವ ಬೆದರಿಕೆ (Death Threats) ಹಾಕುವ ಹೀನ ಮಟ್ಟಕ್ಕೆ ಇಳಿದಿದ್ದಾರೆ. ಮಹಾರಾಷ್ಟ್ರದಲ್ಲಿರುವ ಅವರ ಪೋಷಕರು ಇಂದು ಮಗನ ಸುರಕ್ಷತೆಯ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಪ್ರಜಾಪ್ರಭುತ್ವದ ದೇಶದಲ್ಲಿ ಕೇವಲ ವಿಡಂಬನೆ ಮತ್ತು ಪ್ರಶ್ನೆ ಕೇಳಿದ್ದಕ್ಕಾಗಿ ಒಬ್ಬ ಯುವಕನಿಗೆ ಮತ್ತು ಆತನ ಕುಟುಂಬಕ್ಕೆ ಜೀವ ಬೆದರಿಕೆ ಹಾಕುವುದು ಅತ್ಯಂತ ಅಸಹ್ಯಕರ ಮತ್ತು ಖಂಡನೀಯ ಬೆಳವಣಿಗೆಯಾಗಿದೆ.
Video.
Will the authorities act against these threats? https://t.co/jQ7hlerhpL pic.twitter.com/ILvz09zB9U
— Abhijeet Dipke (@abhijeet_dipke) May 22, 2026
ಕಾಕ್ರೋಚ್‌ಗಳನ್ನು ಕೊಲ್ಲಲು ಸಾಧ್ಯವಿಲ್ಲ!
ಅಧಿಕಾರದಲ್ಲಿರುವವರು ಒಂದನ್ನು ನೆನಪಿಡಬೇಕು — ಖಾತೆಗಳನ್ನು ಹ್ಯಾಕ್ ಮಾಡಬಹುದು, ತಾಂತ್ರಿಕವಾಗಿ ಧ್ವನಿಯನ್ನು ಅಡಗಿಸಬಹುದು. ಆದರೆ ಆಡಳಿತದ ವೈಫಲ್ಯಗಳ ವಿರುದ್ಧ, ನಿರುದ್ಯೋಗದ ವಿರುದ್ಧ ಸಿಡಿದೆದ್ದಿರುವ ಯುವಜನತೆಯ ಮನಸ್ಸಿನಲ್ಲಿರುವ ಆಕ್ರೋಶವನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ.
ಕಾಕ್ರೋಚ್ ಜನತಾ ಪಾರ್ಟಿಯ ಟ್ಯಾಗ್‌ಲೈನ್ ಹೇಳುವಂತೆ — ‘Cockroaches Never Die’ (ಕಾಕ್ರೋಚ್‌ಗಳು ಎಂದಿಗೂ ಸಾಯುವುದಿಲ್ಲ). ಈ ಡಿಜಿಟಲ್ ಸರ್ವಾಧಿಕಾರದ ವಿರುದ್ಧ ದೇಶದ ಯುವಶಕ್ತಿ ಇನ್ನಷ್ಟು ಉಗ್ರವಾಗಿ ಜಾಗೃತಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

