Wednesday, October 28, 2026
Home ವಿಶ್ಲೇಷಣೆ ಬಾಗಲಕೋಟೆ DHO ಭ್ರಷ್ಟಾಚಾರದ ‘ಅಸಲಿ’ ಮುಖ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು...

ಬಾಗಲಕೋಟೆ DHO ಭ್ರಷ್ಟಾಚಾರದ ‘ಅಸಲಿ’ ಮುಖ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ ‘ಸುವರ್ಣ’ ಸುಳ್ಳು!

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

ಬಾಗಲಕೋಟೆ / ಅಸಲಿ ಸುದ್ದಿ ವಿಶೇಷ ತನಿಖಾ ವರದಿ: ಜಿಲ್ಲೆಯ ಸಮಸ್ತ ಬಡ ರೋಗಿಗಳ ಆರೋಗ್ಯ ರಕ್ಷಣೆಯ ಹೊಣೆ ಹೊರಬೇಕಾದ, ಸರ್ಕಾರದಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಉನ್ನತ ವೈದ್ಯಾಧಿಕಾರಿಯೊಬ್ಬರು, ತಮ್ಮದೇ ಕುಟುಂಬದ ಖಾಸಗಿ ಆಸ್ಪತ್ರೆಯ ಧನದಾಹಕ್ಕಾಗಿ ಸರ್ಕಾರಿ ಆದೇಶಗಳನ್ನು, ಕಾನೂನುಗಳನ್ನು ಹಾಗೂ ಸೇವಾ ನಿಯಮಗಳನ್ನು ಗಾಳಿಗೆ ತೂರಿರುವುದು ಈಗ ಸಾಕ್ಷ್ಯಾಧಾರ ಸಮೇತ ಬಯಲಾಗಿದೆ!

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಡಾ. ಸುವರ್ಣ ಕುಲಕರ್ಣಿ ಅವರ ಸುತ್ತ ಹೆಣೆದಿರುವ ಈ ‘ಮಹಾ ಆಸ್ಪತ್ರೆ ಹಗರಣ’ ಹಾಗೂ ಅವರು ಮಾಧ್ಯಮಗಳ ಮುಂದೆ ಸಾರಾಸಾಗಟವಾಗಿ ನುಡಿದ ಸುಳ್ಳಿನ ಕರಾಳ ಮುಖವನ್ನು ‘ಅಸಲಿ ಸುದ್ದಿ’ ಸಾಕ್ಷ್ಯಗಳ ಸಮೇತ ಅನಾವರಣಗೊಳಿಸುತ್ತಿದೆ.

ಮಾಧ್ಯಮಗಳ ಎದುರು ‘ಒಪಿಡಿ’ ನಾಟಕ: ಸ್ವತಃ ನೀಡಿದ ಹೇಳಿಕೆಯಲ್ಲೇ ಸಿಕ್ಕಿಬಿದ್ದ DHO!

ಇತ್ತೀಚೆಗೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂದ DHO ಡಾ. ಸುವರ್ಣ ಕುಲಕರ್ಣಿ ಅವರು ಅತ್ಯಂತ ಉಡಾಫೆಯಿಂದ, “ನನ್ನ ಗಂಡನ ಹೆಸರಲ್ಲಿ ಆಸ್ಪತ್ರೆ ಇದೆ. ನಾನು ಸರ್ಕಾರಿ ಕರ್ತವ್ಯದ ಅವಧಿ ಮುಗಿದ ನಂತರ ಅಲ್ಲಿ ಕೇವಲ ಒಪಿಡಿ (OPD – ಹೊರರೋಗಿ ತಪಾಸಣೆ) ಮಾತ್ರ ನೋಡುತ್ತಿದ್ದೆ, ಬೇರೇನೂ ಮಾಡುತ್ತಿರಲಿಲ್ಲ” ಎಂದು ಹೇಳಿಕೆ ನೀಡಿದ್ದರು.

ಆದರೆ ‘ಅಸಲಿ ಸುದ್ದಿ’ಗೆ ಲಭ್ಯವಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಅಧಿಕೃತ ದಾಖಲೆಗಳು ಹಾಗೂ ತಪಾಸಣಾ ಪೋರ್ಟಲ್‌ನ ದರ ಪಟ್ಟಿಗಳು ಡಿಹೆಚ್‌ಒ ಮೇಡಂ ಅವರ ಪೊಳ್ಳು ವಾದಕ್ಕೆ ಕಪಾಳಮೋಕ್ಷ ಮಾಡಿವೆ:

  • ಒಪಿಡಿಯಲ್ಲಿ 30,000 ರೂ. ಶಸ್ತ್ರಚಿಕಿತ್ಸೆ ಶುಲ್ಕವೇ?: KPME ಪೋರ್ಟಲ್‌ನಲ್ಲಿರುವ ‘ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್’ನ ಅಧಿಕೃತ ದರ ಪಟ್ಟಿಯಲ್ಲಿ ಡಾ. ಸುವರ್ಣ ಕುಲಕರ್ಣಿ (KMC Reg No: 51585) ಅವರ ಹೆಸರಿನ ಎದುರು “ಶಸ್ತ್ರಚಿಕಿತ್ಸೆ ಶುಲ್ಕ” (Surgery Fee) ರೂ. 30,000/- ಹಾಗೂ “ಸಂದರ್ಶನ ಶುಲ್ಕ” ರೂ. 250/- ಎಂದು ಸ್ಪಷ್ಟವಾಗಿ ದಾಖಲಾಗಿದೆ.

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

  • ಸಾರ್ವಜನಿಕರ ನೇರ ಪ್ರಶ್ನೆ: ಕೇವಲ ಹೊರರೋಗಿಗಳನ್ನು (OPD) ನೋಡಿ ಕಷಾಯ, ಮಾತ್ರೆ ಬರೆದುಕೊಡುವ ವೈದ್ಯರು ರೋಗಿಯಿಂದ 30,000/- ರೂಪಾಯಿ ಶಸ್ತ್ರಚಿಕಿತ್ಸೆ ಶುಲ್ಕ ವಸೂಲಿ ಮಾಡಲು ಸಾಧ್ಯವೇ? ಒಪಿಡಿಯಲ್ಲಿ ಗರ್ಭಕೋಶ ತೆಗೆಯುವ (Hysterectomy) ಹಾಗೂ ಸಿಸೇರಿಯನ್ (LSCS) ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಾಧ್ಯವೇ? ಮಾಧ್ಯಮಗಳ ಮುಂದೆ “ಒಪಿಡಿ ಮಾತ್ರ ನೋಡುತ್ತಿದ್ದೆ” ಎಂದು ಸುಳ್ಳು ಹೇಳಿ ಬಾಗಲಕೋಟೆಯ ಜನತೆಯನ್ನು ಹಾಗೂ ಸರ್ಕಾರವನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವುದು ಅಕ್ಷಮ್ಯ ಅಪರಾಧವಲ್ಲವೇ?
  • ಮಾಧ್ಯಮ ವೀಡಿಯೊ: DHO ಡಾ. ಸುವರ್ಣ ಕುಲಕರ್ಣಿ ಅವರು “ಒಪಿಡಿ ಮಾತ್ರ ನೋಡುತ್ತಿದ್ದೆ” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
  • KPME ಅಧಿಕೃತ ದರ ಪಟ್ಟಿ: ಡಾ. ಸುವರ್ಣ ಕುಲಕರ್ಣಿ ಹೆಸರಿನಲ್ಲಿ ಶಸ್ತ್ರಚಿಕಿತ್ಸೆ ಶುಲ್ಕ 30,000 ರೂ. ದಾಖಲಾಗಿರುವ ‘KPME Treatment Charges & Surgery Fee List’.

ಇದನ್ನೂ ಓದಿ: ಭ್ರೂಣಹತ್ಯೆ ದಾಳಿ ಹಿಂದೆ ನಡೆದಿತ್ತಾ ಬ್ಲ್ಯಾಕ್ ಮೇಲ್ ತಂತ್ರ? ತನಿಖೆಯಾದ್ರೆ ಯುಟ್ಯೂಬರ್ಸ್ ಸೇರಿದಂತೆ ಶಂಕಿತ ವರದಿಗಾರರಿಗೆ ಸಂಕಷ್ಟ ಫಿಕ್ಸ್!

‘ಇನ್‌ಪೇಷೆಂಟ್ ಚಿಕಿತ್ಸೆ ಕಟ್ಟುನಿಟ್ಟಾಗಿ ನಿಷೇಧ’: ಸರ್ಕಾರಿ ಆದೇಶದ ಬೆನ್ನಿಗೆ ಚೂರಿ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸರ್ಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್ ಕುರಿತು ಹೊರಡಿಸಿರುವ ಸ್ಪಷ್ಟ ಆದೇಶ ಹೀಗೆ ಹೇಳುತ್ತದೆ:

“ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದು (In-Patient Department / IPD Treatment) ಅಥವಾ ಶಸ್ತ್ರಚಿಕಿತ್ಸೆ ನಡೆಸುವುದು ಅವರ ಸರ್ಕಾರಿ ಕರ್ತವ್ಯ ನಿರ್ವಹಣೆಗೆ ನೇರ ಅಡ್ಡಿಯಾಗುವುದರಿಂದ, ಅದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ (strictly prohibited)”.

ಪ್ರತಿಯೊಬ್ಬ ಕಾಯಂ ಸರ್ಕಾರಿ ವೈದ್ಯರು ಸರ್ಕಾರಕ್ಕೆ “ನಾವು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ, ಶಸ್ತ್ರಚಿಕಿತ್ಸೆ ಮಾಡುವುದಿಲ್ಲ, ಕೇವಲ ನಿಯಮಿತ ಪ್ರಾಕ್ಟೀಸ್ ಮಾಡುತ್ತೇವೆ” ಎಂದು ಮುಚ್ಚಳಿಕೆ (Bond) ಬರೆದುಕೊಟ್ಟಿರುತ್ತಾರೆ. ತಿಂಗಳಿಗೆ ಸರ್ಕಾರದಿಂದ ಸುಮಾರು ಎರಡೂವರೆ ಲಕ್ಷ ರೂಪಾಯಿಗೂ ಹೆಚ್ಚು ವೇತನ ಪಡೆಯುವ DHO ಡಾ. ಸುವರ್ಣ ಕುಲಕರ್ಣಿ ಅವರು, ಸರ್ಕಾರಿ ಆದೇಶ ಹಾಗೂ ತಾವು ಕೊಟ್ಟ ಬಾಂಡ್ ಎರಡನ್ನೂ ಗಾಳಿಗೆ ತೂರಿ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಗಳನ್ನು ಸೇರಿಸಿಕೊಂಡು ಶಸ್ತ್ರಚಿಕಿತ್ಸೆಯ ದಂಧೆ ನಡೆಸುತ್ತಿರುವುದು ಕಾನೂನುಬಾಹಿರವಾಗಿದೆ.

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

ಸರ್ಕಾರಿ ಆದೇಶ: ‘Indian Express’ ಪ್ರಕಟಿತ ಹಾಗೂ ಸರ್ಕಾರಿ ನಿಯಮಾವಳಿಗಳ ಪ್ರಕಾರ “Treatment of in-patients (IPD) or proposed in-patients as part of private practice by government doctors is strictly prohibited” ಎಂದು ಉಲ್ಲೇಖಿಸಿರುವ ಆದೇಶದ ಪ್ರತಿ.

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

ಸ್ಕ್ಯಾನಿಂಗ್ ಯಂತ್ರಗಳ ಇಮೇಲ್ ಲಾಗಿನ್‌ನಲ್ಲೇ ಸಿಕ್ಕಿಬಿದ್ದ ಆಡಳಿತ ವೈಫಲ್ಯ!

ಸರ್ಕಾರಿ ಅಧಿಕಾರಿಯಾಗಿರುವ DHO ಡಾ. ಸುವರ್ಣ ಕುಲಕರ್ಣಿ ಅವರ ಅಕ್ರಮ ಆಡಳಿತದ ಮತ್ತೊಂದು ಬಲವಾದ ಸಾಕ್ಷ್ಯ ಸ್ಕ್ಯಾನಿಂಗ್ ಯಂತ್ರಗಳ ನೋಂದಣಿಯಲ್ಲಿ ಸಿಕ್ಕಿಬಿದ್ದಿದೆ:

ಯಂತ್ರಗಳ ಅಧಿಕೃತ ವಿವರ (ಕ್ರ.ಸಂ. 82 ಮತ್ತು 83):

  • HITACHI ALOKA – PROSOUND (SSD 4000SV)
  • Ultrasound (SSD F-31 – M00460LI)

ನೋಂದಾಯಿತ ಇಮೇಲ್ ಐಡಿ ಹಾಗೂ ಸಂಪರ್ಕ:

drsuvarnakulkarni01@gmail.com (ಸಂಖ್ಯೆ: 9916844586).

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

ಖಾಸಗಿ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳು ಸ್ವತಃ DHO ಡಾ. ಸುವರ್ಣ ಕುಲಕರ್ಣಿ ಅವರ ವೈಯಕ್ತಿಕ ಇಮೇಲ್ ಐಡಿ ಮೂಲವೇ ಲಾಗಿನ್ ಆಗಿ ನೋಂದಾಯಿಸಲ್ಪಟ್ಟಿವೆ. PCPNDT (ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ) ಕಾಯ್ದೆಯಡಿ ಜಿಲ್ಲೆಯ ಎಲ್ಲಾ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ತಪಾಸಣೆ ಮಾಡಿ, ಅಕ್ರಮ ತಡೆಯಬೇಕಾದ ಜಿಲ್ಲಾ ಮುಖ್ಯಸ್ಥರೇ (DHO), ತಮ್ಮ ಸ್ವಂತ ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರಗಳ ಲಾಗಿನ್ ಐಡಿ ಹೊಂದಿ, ಗರ್ಭಿಣಿಯರ ಸ್ಕ್ಯಾನಿಂಗ್ ನಡೆಸಿ ಲಾಭ ಮಾಡಿಕೊಳ್ಳುತ್ತಿರುವುದು ಹಿತಾಸಕ್ತಿಗಳ ನೇರ ಸಂಘರ್ಷಕ್ಕೆ ಅತ್ಯಂತ ದೊಡ್ಡ ಸಾಕ್ಷಿಯಾಗಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಭ್ರೂಣ ಪತ್ತೆ ಆರೋಪ’: ಸ್ಕ್ಯಾನಿಂಗ್ ಇತಿಹಾಸ ಪರಿಶೀಲಿಸಲು ಆಗ್ರಹ!

ಇದೆಲ್ಲಕ್ಕಿಂತ ಅತ್ಯಂತ ದಿಗಿಲುಗೊಳಿಸುವ ಸಂಗತಿಯೆಂದರೆ, ಸಾಮಾಜಿಕ ಮಾಧ್ಯಮಗಳಲ್ಲಿ (Social Media) “ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾನೂನುಬಾಹಿರವಾಗಿ ಲಿಂಗ ಪತ್ತೆ / ಭ್ರೂಣ ಪತ್ತೆ (Sex Determination) ಮಾಡಲಾಗುತ್ತದೆ” ಎಂಬ ಅತ್ಯಂತ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ!

PCPNDT ಕಾಯ್ದೆಯಡಿ ಇಡೀ ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ತಡೆಯಬೇಕಾದ ಜಿಲ್ಲಾ ಮಟ್ಟದ ಮುಖ್ಯ ತಪಾಸಣಾ ಅಧಿಕಾರಿಯೇ DHO ಸುವರ್ಣ ಕುಲಕರ್ಣಿ. ಆದರೆ ತಮ್ಮದೇ ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರಗಳನ್ನು ತಮ್ಮ ವೈಯಕ್ತಿಕ ಇಮೇಲ್ ಐಡಿಯಲ್ಲಿ ಚಾಲನೆ ಮಾಡುತ್ತಿರುವುದು ಈ ಎಲ್ಲಾ ಅನುಮಾನಗಳಿಗೆ ಹಾಗೂ ಗಂಭೀರ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

‘ಅಸಲಿ ಸುದ್ದಿ’ಯ ಸ್ಪಷ್ಟ ಆಗ್ರಹ:

ಸಾಮಾಜಿಕ ಮಾಧ್ಯಮಗಳಲ್ಲಿ ಎದ್ದಿರುವ ಈ ಗಂಭೀರ ಅನುಮಾನ ಮತ್ತು ಆರೋಪಗಳನ್ನು ತಕ್ಷಣವೇ ಪರಿಹರಿಸಬೇಕಿದ್ದಲ್ಲಿ, ಉನ್ನತ ಮಟ್ಟದ ತನಿಖಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ವಿಶೇಷ ತಂಡವು ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೇಲೆ ತಕ್ಷಣವೇ ಏಕಾಏಕಿ ದಾಳಿ ನಡೆಸಬೇಕು!

ಆಸ್ಪತ್ರೆಯಲ್ಲಿರುವ HITACHI ALOKA (PROSOUND SSD 4000SV) ಹಾಗೂ Ultrasound (SSD F-31) ಯಂತ್ರಗಳಲ್ಲಿರುವ ಡಿಜಿಟಲ್ ಡೇಟಾವನ್ನು ಯಾವುದೇ ಕಾರಣಕ್ಕೂ ಅಳಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಯಂತ್ರಗಳ ‘ಸ್ಕ್ಯಾನಿಂಗ್ ಹಿಸ್ಟರಿ’, ಇಮೇಜ್ ಲಾಗ್ ಹಾಗೂ ಹಳೆಯ ರೋಗಿಗಳ ಡಿಜಿಟಲ್ ದಾಖಲೆಗಳನ್ನು ತಕ್ಷಣವೇ ವಶಕ್ಕೆ ಪಡೆದು ವಿಧಿವಿಜ್ಞಾನ ಮತ್ತು ತಾಂತ್ರಿಕ ಪರಿಶೀಲನೆಗೆ ಒಳಪಡಿಸಬೇಕು. ಆ ಮೂಲಕ ಸಾರ್ವಜನಿಕರಲ್ಲಿ ಎದ್ದಿರುವ ಭ್ರೂಣ ಪತ್ತೆಯ ಕರಾಳ ಅನುಮಾನಕ್ಕೆ ತಕ್ಷಣವೇ ಮುಕ್ತಿ ಹಾಡಬೇಕು.

  • PCPNDT / ರೇಡಿಯಾಲಜಿ ನೋಂದಣಿ ಲಾಗ್ ಪ್ರತಿ: ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರಗಳ ಎದುರು DHO ವೈಯಕ್ತಿಕ ಇಮೇಲ್ ಐಡಿ (drsuvarnakulkarni01@gmail.com) ಹಾಗೂ ಯಂತ್ರದ ಮಾದರಿ ಸಂಖ್ಯೆಗಳಿರುವ ಅಧಿಕೃತ ಪಟ್ಟಿ.

ಆಯುರ್ವೇದ ವೈದ್ಯರ ಹೆಸರಲ್ಲಿ ‘ಅಲೋಪತಿ’ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನೋಂದಣಿ!

ದಾಖಲೆಗಳ ಪ್ರಕಾರ, ನವನಗರದ ಸೆಕ್ಟರ್ 56 ರಲ್ಲಿರುವ ‘ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್’ ಅನ್ನು ‘ಆಲೋಪತಿ ಲೆವೆಲ್-2 ಹಾಸ್ಪಿಟಲ್’ (30 ಹಾಸಿಗೆಗಳು) ಎಂದು KPME ಕಾಯ್ದೆಯಡಿ ನೋಂದಾಯಿಸಲಾಗಿದೆ. ಈ ಆಸ್ಪತ್ರೆಯ ಮಾಲೀಕರು ಹಾಗೂ ನಿರ್ವಾಹಕರು ಡಾ. ವಿವೇಕಾನಂದ ಎನ್. ಕುಲಕರ್ಣಿ. ಆದರೆ, ಅವರ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿದಾಗ ಕಾದಿದೆ ಅಸಲಿ ಆಘಾತ!

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

  • ಮಾಲೀಕರ ಪದವಿ: ಡಾ. ವಿವೇಕಾನಂದ ಕುಲಕರ್ಣಿ ಅವರು ಹೊಂದಿರುವ ಪದವಿ BAMS, MD (ಕಾಯಚಿಕಿತ್ಸಾ) — ಅಂದರೆ ಅವರು ಆಯುರ್ವೇದ ವೈದ್ಯರು!
  • ಅಲೋಪತಿ ನೋಂದಣಿ ಸಿಕ್ಕಿದ್ದು ಹೇಗೆ?: ಕರ್ನಾಟಕ ಮೆಡಿಕಲ್ ಕೌನ್ಸಿಲ್ (KMC) ನಿಯಮಾವಳಿಗಳ ಪ್ರಕಾರ MBBS/MD (ಅಲೋಪತಿ) ಪದವೀಧರರಿಗೆ ಮಾತ್ರ ಅಲೋಪತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನೋಂದಣಿ ಹಾಗೂ KMC ನೋಂದಣಿ ಸಂಖ್ಯೆ ದೊರೆಯುತ್ತದೆ. ಒಬ್ಬ ಆಯುರ್ವೇದ ವೈದ್ಯರ ಮಾಲೀಕತ್ವದ ಆಸ್ಪತ್ರೆಗೆ ‘ಅಲೋಪತಿ ಲೆವೆಲ್-2 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ಎಂಬ ಪೂರ್ಣ ಪ್ರಮಾಣದ ಅನುಮತಿ ಸಿಕ್ಕಿದ್ದಾದರೂ ಹೇಗೆ?
  • ಅಧಿಕಾರ ದುರುಪಯೋಗ: ಸರ್ಕಾರಿ ಹುದ್ದೆಯಲ್ಲಿದ್ದ ಪತ್ನಿ ಡಾ. ಸುವರ್ಣ ಕುಲಕರ್ಣಿ (MBBS, DGO – KMC Reg: 51585) ಅವರ ಅಲೋಪತಿ ವೈದ್ಯಕೀಯ ಪದವಿ, KMC ಸಂಖ್ಯೆ ಹಾಗೂ ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ಆಯುರ್ವೇದ ವೈದ್ಯರ ಹೆಸರಿನಲ್ಲಿ ಈ ಅಲೋಪತಿ ಆಸ್ಪತ್ರೆಯನ್ನು ನೋಂದಾಯಿಸಿ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಕ್ಕೆ ಈ ದಾಖಲೆಗಳು ಪುಷ್ಟಿ ನೀಡುತ್ತಿವೆ.
  • KPME ನೋಂದಣಿ ಪ್ರಮಾಣಪತ್ರ: Reg No: BGK00531ALHL2 ನಮೂದಾಗಿರುವ ‘Kulkarni Multi Speciality Hospital’ ನ ಅಧಿಕೃತ ಪ್ರಮಾಣಪತ್ರ.
  • ಆಯುರ್ವೇದ ಬೋರ್ಡ್ ಪ್ರಮಾಣಪತ್ರ: ಡಾ. ವಿವೇಕಾನಂದ ಎನ್. ಕುಲಕರ್ಣಿ ಅವರ BAMS & MD (Kayachikitsa) ಕರ್ನಾಟಕ ಆಯುರ್ವೇದಿಕ್ & ಯುನಾನಿ ಪ್ರಾಕ್ಟೀಷನರ್ಸ್ ಬೋರ್ಡ್ ನೋಂದಣಿ ಪತ್ರ (Reg No: 12112).
  • DHO ಅವರ KMC ಪ್ರಮಾಣಪತ್ರ: ಡಾ. ಸುವರ್ಣ ಕುಲಕರ್ಣಿ ಅವರ MBBS, DGO ಪದವಿಯ KMC ನೋಂದಣಿ ಸಂಖ್ಯೆ 51585 ಪತ್ರ.

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

NOC, ಲೈಸೆನ್ಸ್, ಕರಾರುಪತ್ರಗಳಲ್ಲೆಲ್ಲಾ DHO ಅವರದೇ ಹೆಸರು!

“ಆಸ್ಪತ್ರೆ ನನ್ನ ಗಂಡನದ್ದು” ಎಂದು ನುಣುಚಿಕೊಳ್ಳಲು ಯತ್ನಿಸುವ DHO ಮೇಡಂ, ಆಸ್ಪತ್ರೆಯ ಪ್ರತಿಯೊಂದು ಸರ್ಕಾರಿ ಅನುಮೋದನೆಗಳಲ್ಲೂ ತಾವೇ ಮಾಲೀಕರಂತೆ ಮುಂಚೂಣಿಯಲ್ಲಿದ್ದಾರೆ:

  • ಅಗ್ನಿಶಾಮಕ ಇಲಾಖೆಯ NOC: ಸರ್ಕಾರಿ ಅಗ್ನಿಶಾಮಕ ಇಲಾಖೆಯಿಂದ (KSFES) ಪಡೆದ ನಿರಾಕ್ಷೇಪಣಾ ಪತ್ರ ಡಾ. ಸುವರ್ಣ ವಿ. ಕುಲಕರ್ಣಿ ಅವರ ಹೆಸರಿನಲ್ಲೇ ಇದೆ.
  • ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅನುಮತಿ: ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಯ ಅಧಿಕೃತ ಲೈಸೆನ್ಸ್ ಅನ್ನು ಡಾ. ಸುವರ್ಣ ಕುಲಕರ್ಣಿ ಅವರ ಹೆಸರಿಗೆ ನೀಡಲಾಗಿದೆ.

  • ಬಾಡಿಗೆ ಕರಾರು (Rent Agreement): ಗಂಡ ಡಾ. ವಿವೇಕಾನಂದ ಕುಲಕರ್ಣಿ ಹಾಗೂ ಪತ್ನಿ ಡಾ. ಸುವರ್ಣ ಕುಲಕರ್ಣಿ ಅವರ ನಡುವೆ ತಿಂಗಳಿಗೆ ರೂ.20,000 ಬಾಡಿಗೆಯ ಕರಾರು ಪತ್ರ ಮಾಡಿಕೊಳ್ಳಲಾಗಿದೆ.

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

ತಮ್ಮದೇ ಕುಟುಂಬದ ಆಸ್ಪತ್ರೆಗೆ ಸರ್ಕಾರಿ ಇಲಾಖೆಗಳಿಂದ ತಮ್ಮ ಹೆಸರಿನಲ್ಲೇ ಅನುಮೋದನೆ ಪಡೆದುಕೊಂಡು, ಬಿಲ್ ವಸೂಲಿ ಮಾಡುತ್ತಾ, ಮಾಧ್ಯಮಗಳ ಮುಂದೆ ಮಾತ್ರ “ನನಗೂ ಆಸ್ಪತ್ರೆಗೂ ಸಂಬಂಧವಿಲ್ಲ, ಒಪಿಡಿ ಮಾತ್ರ ನೋಡುತ್ತಿದ್ದೆ” ಎಂದು ಹೇಳುವುದು ಎಷ್ಟು ಮಟ್ಟಿಗೆ ಸರಿ?

  • Fire Dept NOC: ಅಗ್ನಿಶಾಮಕ ಇಲಾಖೆಯಿಂದ ಡಾ. ಸುವರ್ಣ ವಿ. ಕುಲಕರ್ಣಿ ಹೆಸರಿಗೆ ನೀಡಲಾದ No Objection Certificate.

ಬಾಗಲಕೋಟೆ DHO ಭ್ರಷ್ಟಾಚಾರದ 'ಅಸಲಿ' ಮುಖಪಟ: ಸರ್ಕಾರಿ ಸಂಬಳ, ಖಾಸಗಿ ದಂಧೆ! ದಾಖಲೆ ಸಮೇತ ಬಯಲಾಯ್ತು ಮೇಡಂ 'ಸುವರ್ಣ' ಸುಳ್ಳು!

  • KSPCB Authorization (Form-III): ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಡಾ. ಸುವರ್ಣ ಕುಲಕರ್ಣಿ ಹೆಸರಿಗೆ ನೀಡಿರುವ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಅನುಮೋದನೆ ಪತ್ರ.
  • Rent Agreement e-Stamp Paper: ಡಾ. ವಿವೇಕಾನಂದ ಕುಲಕರ್ಣಿ ಹಾಗೂ ಡಾ. ಸುವರ್ಣ ಕುಲಕರ್ಣಿ ನಡುವಿನ ಬಾಡಿಗೆ ಕರಾರು ಪತ್ರ.

ಸರ್ಕಾರಿ ವೈದ್ಯರ ಜಾಲ ಮತ್ತು ‘ಬಾದಾಮಿ’ಯ ಕನೆಕ್ಷನ್!

ಇದೀಗ ಹೊರಬಿದ್ದಿರುವ ಮತ್ತೊಂದು ಆತಂಕಕಾರಿ ಸಂಗತಿಯೆಂದರೆ, ಈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಪಟ್ಟಿಯಲ್ಲಿರುವ ಡಾ. ರಾಜೇಂದ್ರ ಸಿ. ನಾಗವಿ (KMC Reg: 33335) ಎಂಬ ಸರ್ಜನ್ ವೈದ್ಯರು ಬಾದಾಮಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯಂ ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ!

ಸರ್ಕಾರಿ ಸೇವೆಯಲ್ಲಿರುವ ಬಾದಾಮಿಯ ವೈದ್ಯರೊಬ್ಬರನ್ನು ಕರೆತಂದು, DHO ಅವರ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ, ಅವರಿಗೂ ರೂ. 30,000 ಶಸ್ತ್ರಚಿಕಿತ್ಸೆ ಶುಲ್ಕದ ಬಿಲ್ ಹಾಕಿರುವುದು ಸರ್ಕಾರಿ ವೈದ್ಯರ ನಡುವಿನ ಅಂತರಂಗದ ಅಕ್ರಮ ಕೌಟುಂಬಿಕ ಜಾಲವನ್ನು ಅನಾವರಣಗೊಳಿಸಿದೆ.

  • KMC Registration & Surgery Bill: ಡಾ. ರಾಜೇಂದ್ರ ಸಿ. ನಾಗವಿ (KMC Reg: 33335) ಅವರ ಹೆಸರು ಹಾಗೂ ಅವರ ಶಸ್ತ್ರಚಿಕಿತ್ಸೆ ಶುಲ್ಕ 30,000 ರೂ. ನಮೂದಾಗಿರುವ ಬಿಲ್ ಪ್ರತಿ.

ಇದನ್ನೂ ಓದಿ:‌ DHO ಅಮಾನತಿನ ಅಸಲಿ ಸತ್ಯ! ಸಿಇಒ ಉದ್ಧಟತನ ಮತ್ತು ರಾಜಕೀಯ ಶಕ್ತಿಗಳ ಜಂಟಿ ಶಡ್ಯಂತ್ರ?

ಜಿ.ಪಂ. ಸಿಇಒ ಮತ್ತು ಆರೋಗ್ಯ ಇಲಾಖೆ ಆಯುಕ್ತರ ಮೌನವೇಕೆ?

ಇಷ್ಟೆಲ್ಲಾ ಸಕ್ಷಮ ಸಾಕ್ಷ್ಯಾಧಾರಗಳು, ಕೆಪಿಎಂಇ ಬಿಲ್ ಪ್ರತಿಯ ಸಾಕ್ಷಿ, ಸ್ಕ್ಯಾನಿಂಗ್ ಲಾಗಿನ್ ಐಡಿ ಹಾಗೂ ಸರ್ಕಾರಿ ಆದೇಶ ಉಲ್ಲಂಘನೆಯ ದಾಖಲೆಗಳು ಕಣ್ಣಮುಂದಿದ್ದರೂ ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಹಾಗೂ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆಯೇ?

ಆರೋಗ್ಯ ಕಮಿಷನರ್ ಹಾಗೂ ಸಚಿವಾಲಯದ ಮೇಲ್ಮಟ್ಟದ ಅಧಿಕಾರಿಗಳ ಪ್ರಭಾವ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಮೌನ ವಹಿಸಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗುತ್ತಿದೆ.

ಸಾರ್ವಜನಿಕರ ಸ್ಪಷ್ಟ ಆಗ್ರಹ:

ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ, ಸರ್ಕಾರಿ ಸೇವಾ ನಿಯಮ (KCSR) ಹಾಗೂ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಖಾಸಗಿ ಆಸ್ಪತ್ರೆಯಲ್ಲಿ ಇನ್‌ಪೇಷೆಂಟ್ ಶಸ್ತ್ರಚಿಕಿತ್ಸೆ ನಡೆಸಿದ DHO ಡಾ. ಸುವರ್ಣ ಕುಲಕರ್ಣಿ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು.

  • ಸಾಮಾಜಿಕ ಮಾಧ್ಯಮಗಳಲ್ಲಿ ಭ್ರೂಣ ಪತ್ತೆಯ ಗಂಭೀರ ಆರೋಪ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ವಿಶೇಷ ತಂಡದಿಂದ ಆಸ್ಪತ್ರೆಗೆ ದಾಳಿ ನಡೆಸಿ ಸ್ಕ್ಯಾನಿಂಗ್ ಮೆಷಿನ್ ಹಿಸ್ಟರಿ ತನಿಖೆ ಮಾಡಬೇಕು.
  • ಒಬ್ಬ ಆಯುರ್ವೇದ ವೈದ್ಯರ ಹೆಸರಿನಲ್ಲಿ ಅಕ್ರಮವಾಗಿ ಅಲೋಪತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಡೆಸಿ, PCPNDT ಕಾಯ್ದೆ ಉಲ್ಲಂಘಿಸಿ ಸ್ಕ್ಯಾನಿಂಗ್ ನಡೆಸುತ್ತಿರುವ ‘ಕುಲಕರ್ಣಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್’ನ KPME ನೋಂದಣಿಯನ್ನು ರದ್ದುಗೊಳಿಸಬೇಕು.
  • ಆರೋಗ್ಯ ಸಚಿವರು ಹಾಗೂ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಈ ಇಡೀ ಅಕ್ರಮ ಜಾಲದ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಆದೇಶಿಸಬೇಕು.
ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...