Thursday, September 10, 2026
Home ಲೈಫ್‌ ಸ್ಟೈಲ್‌ Weight Loss Tips: ತೂಕ ಇಳಿಸಬೇಕೆ? ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು ಗೊತ್ತಾ? ಇಲ್ಲಿದೆ ಕಂಪ್ಲೀಟ್...

Weight Loss Tips: ತೂಕ ಇಳಿಸಬೇಕೆ? ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡಯಟ್ ಪ್ಲಾನ್!

Weight Loss Tips: ತೂಕ ಇಳಿಸಬೇಕೆ? ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡಯಟ್ ಪ್ಲಾನ್!

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಸಿಕೊಳ್ಳುತ್ತಿದ್ದಾರೆ. ತೂಕ ಇಳಿಸುವ (Weight Loss) ಭರದಲ್ಲಿ ಅನ್ನವನ್ನು ಬಿಟ್ಟು ಚಪಾತಿಯ ಮೊರೆ ಹೋಗುತ್ತಾರೆ. Chapatiಯಲ್ಲಿ ಕೇವಲ ಕಾರ್ಬೋಹೈಡ್ರೇಟ್ ಇರುತ್ತದೆ, ಇದು ತೂಕ ಹೆಚ್ಚಿಸುತ್ತದೆ ಎಂಬ ತಪ್ಪು ಕಲ್ಪನೆಯೂ ಕೆಲವರಲ್ಲಿದೆ. ಆದರೆ ವಾಸ್ತವದಲ್ಲಿ, ಚಪಾತಿಯು ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿದ್ದು, ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಫಿಟ್ ಆಗಿರಲು ಇದುವೇ ಅತ್ಯುತ್ತಮ ಆಯ್ಕೆ.

ಹಾಗಾದರೆ, ದಿನಕ್ಕೆ ಎಷ್ಟು ಚಪಾತಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು? ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಪಾತಿಯಲ್ಲಿರುವ ಪೌಷ್ಟಿಕಾಂಶಗಳೇನು?

ಸಾಮಾನ್ಯ ಗಾತ್ರದ ಒಂದು ಚಪಾತಿದಲ್ಲಿ ಸರಿಸುಮಾರು:

  • ಕ್ಯಾಲೋರಿ: 70-80 kcal
  • ಕಾರ್ಬೋಹೈಡ್ರೇಟ್: 15 ಗ್ರಾಂ
  • ಪ್ರೋಟೀನ್: 3 ಗ್ರಾಂ
  • ಫೈಬರ್: ಸಣ್ಣ ಪ್ರಮಾಣದಲ್ಲಿರುತ್ತದೆ (ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ)

ಇದನ್ನೂ ಓದಿ: Ghislaine Maxwell: ಪಾಪ ಕೂಪದ ಕ್ವೀನ್; ಎಫ್‌ಸ್ಟೀನ್ ಸಾಮ್ರಾಜ್ಯದ ಅಸಲಿ ಸೂತ್ರಧಾರಿ ಈಕೆಯೇ!

ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು?

Weight Loss Tips: ಇದು ನಿಮ್ಮ ವಯಸ್ಸು, ತೂಕ, ಎತ್ತರ ಮತ್ತು ನೀವು ದಿನವಿಡೀ ಮಾಡುವ ದೈಹಿಕ ಶ್ರಮದ ಮೇಲೆ ಅವಲಂಬಿತವಾಗಿರುತ್ತದೆ.

  • 55–65 ಕೆಜಿ ತೂಕದವರು: ನೀವು ಆಫೀಸ್ ಕೆಲಸ ಅಥವಾ ಮನೆಯಲ್ಲೇ ಕುಳಿತು ಮಾಡುವ ಕೆಲಸ ಮಾಡುತ್ತಿದ್ದರೆ, ದಿನಕ್ಕೆ 3 ರಿಂದ 4 ಚಪಾತಿ ಸಾಕು.
  • 65–75 ಕೆಜಿ ತೂಕದವರು: ಮಧ್ಯಮ ದೈಹಿಕ ಶ್ರಮ ಹೊಂದಿರುವವರು ದಿನಕ್ಕೆ 4 ರಿಂದ 5 ಚಪಾತಿ ಸೇವಿಸಬಹುದು.
  • 75 ಕೆಜಿಗಿಂತ ಹೆಚ್ಚು ತೂಕದವರು: ನೀವು ಕಠಿಣ ವ್ಯಾಯಾಮ ಅಥವಾ ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದರೆ ದಿನಕ್ಕೆ 5 ರಿಂದ 6 ಚಪಾತಿ ಸೇವಿಸುವುದು ಅಗತ್ಯ, ಏಕೆಂದರೆ ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ.

ತೂಕ ಇಳಿಸುವವರಿಗೆ ‘ಸ್ಪೆಷಲ್’ ಟಿಪ್ಸ್

ತೂಕ ಇಳಿಸಿಕೊಳ್ಳುವ ಗುರಿ ಹೊಂದಿರುವವರು ದಿನಕ್ಕೆ 3-4 ಚಪಾತಿ ಮೀರದಂತೆ ಸೇವಿಸುವುದು ಉತ್ತಮ. ಒಂದು ಹೊತ್ತಿನ ಊಟದಲ್ಲಿ ಕೇವಲ 2 ಚಪಾತಿ ತಿಂದರೆ ಸುಮಾರು 160 ಕ್ಯಾಲೋರಿ ಮತ್ತು ಅಗತ್ಯ ಕಾರ್ಬೋಹೈಡ್ರೇಟ್ ಸಿಗುತ್ತದೆ.

ನೆನಪಿರಲಿ: ಚಪಾತಿ ಜೊತೆಗೆ ನೀವು ಸೇವಿಸುವ ಪದಾರ್ಥಗಳು ಕೂಡ ಅಷ್ಟೇ ಮುಖ್ಯ. ಕೇವಲ ಚಪಾತಿ ತಿನ್ನುವ ಬದಲು ಅದರೊಂದಿಗೆ ಬೇಳೆ ಕಾಳುಗಳ ಸಾರು, ಮೊಸರು, ಪನ್ನೀರ್ ಅಥವಾ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳಿ. ಇದರಿಂದ ದೇಹಕ್ಕೆ ಹೆಚ್ಚಿನ ಪ್ರೋಟೀನ್ ಸಿಗುತ್ತದೆ ಮತ್ತು ಜೀರ್ಣಕ್ರಿಯೆ ಸುಗಮವಾಗಿ ಹಸಿವು ಬೇಗ ಆಗುವುದಿಲ್ಲ.

ಇದನ್ನೂ ಓದಿ: ಕರಿಬಸೊಪ್ಪು ಆಯ್ತು, ಈಗ ವಂತೂರು ಸಂತೂರು! ಹೆಸರು ಬದಲಿಸುವುದರಲ್ಲಿ ರಕ್ಷಿತಾ ನಂಬರ್ 1!

ಚಪಾತಿ ಇನ್ನೂ ಹೆಲ್ದೀ ಆಗಬೇಕೆ?

ಬರೀ ಗೋಧಿ ಹಿಟ್ಟಿನ ಬದಲು ಜೋಳ, ರಾಗಿ ಅಥವಾ ಬಾಜ್ರಾದಂತಹ ಸಿರಿಧಾನ್ಯಗಳ ಹಿಟ್ಟನ್ನು ಬೆರೆಸಿ ಚಪಾತಿ ಮಾಡಿದರೆ ಅದು ನಿಮ್ಮ ದೇಹಕ್ಕೆ ಹೆಚ್ಚಿನ ಫೈಬರ್ ನೀಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದಲ್ಲದೆ, ತೂಕವನ್ನು ವೇಗವಾಗಿ ಇಳಿಸಲು ಸಹಕಾರಿ.

ಊಟದಲ್ಲಿ ಚಪಾತಿಯ ಸಂಖ್ಯೆಗಿಂತ ನಿಮ್ಮ ಪ್ಲೇಟ್‌ನಲ್ಲಿ ಎಷ್ಟು ಪೌಷ್ಟಿಕಾಂಶಗಳಿವೆ ಎಂಬುದು ಮುಖ್ಯ. ಅತಿಯಾಗಿ ತಿನ್ನದೆ, ಮಿತವಾಗಿ ಸೇವಿಸಿ ಆರೋಗ್ಯವಂತರಾಗಿರಿ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...