Saturday, September 12, 2026
Home ಸುದ್ದಿಗಳು ಕ್ರೀಡೆ T20 World Cup: ಸೋತರೆ ಪಾಕ್ ಮನೆಗೆ; ಗೆದ್ದರೂ ಆತಂಕ ತಪ್ಪಿದ್ದಲ್ಲ! ಪಾಕಿಸ್ತಾನಕ್ಕೆ ‘ಡೂ ಆರ್...

T20 World Cup: ಸೋತರೆ ಪಾಕ್ ಮನೆಗೆ; ಗೆದ್ದರೂ ಆತಂಕ ತಪ್ಪಿದ್ದಲ್ಲ! ಪಾಕಿಸ್ತಾನಕ್ಕೆ ‘ಡೂ ಆರ್ ಡೈ’ ಪಂದ್ಯ!

T20 World Cup: ಸೋತರೆ ಪಾಕ್ ಮನೆಗೆ; ಗೆದ್ದರೂ ಆತಂಕ ತಪ್ಪಿದ್ದಲ್ಲ! ಪಾಕಿಸ್ತಾನಕ್ಕೆ 'ಡೂ ಆರ್ ಡೈ' ಪಂದ್ಯ!

ಕೊಲಂಬೊ: T20 World Cup ಕ್ರಿಕೆಟ್‌ನ ‘ಅನ್ ಪ್ರಿಡಿಕ್ಟಬಲ್’ ಪಡೆ ಪಾಕಿಸ್ತಾನಕ್ಕೆ ಈಗ ಅಕ್ಷರಶಃ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಭಾರತದ ವಿರುದ್ಧ ಸೋತು ಸುಣ್ಣವಾಗಿರುವ ಸಲ್ಮಾನ್ ಅಲಿ ಅಘಾ ಪಡೆಗೆ, ಇಂದು ನಡೆಯಲಿರುವ ನಮೀಬಿಯ ವಿರುದ್ಧದ ಪಂದ್ಯವೇ ಅಂತಿಮ ತೀರ್ಪು ನೀಡಲಿದೆ. ಒಂದು ಕಾಲದ ಚಾಂಪಿಯನ್ಸ್ ಇಂದು ಪುಟ್ಟ ರಾಷ್ಟ್ರ ನಮೀಬಿಯಾವನ್ನು ಕಂಡು ನಡುಗುವಂತಾಗಿರುವುದು ಕ್ರಿಕೆಟ್ ಲೋಕದ ವಿಪರ್ಯಾಸ!

ನಮೀಬಿಯ ನೀಡುವ ಒಂದೇ ಒಂದು ಏಟು ಸಾಕು!

T20 World Cup ಗ್ರೂಪ್ ‘A’ ನಲ್ಲಿ ಸದ್ಯದ ಪರಿಸ್ಥಿತಿ ನೋಡಿದರೆ ಪಾಕಿಸ್ತಾನದ ಹಾದಿ ಅಗ್ನಿಪರೀಕ್ಷೆಯಂತಿದೆ. ಅಮೆರಿಕದಂತಹ ಹೊಸ ತಂಡದ ಎದುರು ಮಕಾಡೆ ಮಲಗಿದ್ದ ಪಾಕಿಸ್ತಾನಕ್ಕೆ ಈಗ ನಮೀಬಿಯ ಕೂಡ ಸಿಂಹಸ್ವಪ್ನವಾಗಿ ಕಾಡುತ್ತಿದೆ.

ಲೆಕ್ಕಾಚಾರವೇನು?:

  • ನಮೀಬಿಯ ತಂಡ ಇಂದು ಕೇವಲ 1 ರನ್ ಅಥವಾ 1 ವಿಕೆಟ್ ಅಂತರದಿಂದ ಜಯ ಸಾಧಿಸಿದರೂ ಸಾಕು, ಪಾಕಿಸ್ತಾನದ ವಿಶ್ವಕಪ್ ಅಭಿಯಾನಕ್ಕೆ ಅಧಿಕೃತವಾಗಿ ‘ಮಂಗಳ ಹಾಡಬಹುದು’.
  • ಅಮೆರಿಕಕ್ಕೆ ಅದೃಷ್ಟ: ಪಾಕಿಸ್ತಾನ ಸೋತರೆ, ಅತ್ತ ನೆಟ್ ರನ್ ರೇಟ್‌ನಲ್ಲಿ (+0.787) ಬಲಿಷ್ಠವಾಗಿರುವ ಯುಎಸ್​​ಎ (USA) ನೇರವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಡಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ನಮೀಬಿಯ ಗೆಲುವನ್ನು ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಅಮೆರಿಕದ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ!

ಇದನ್ನೂ ಓದಿ: Epstein ಕಾಮಜಾಲಕ್ಕೆ ಬಲಿಯಾದಳಾ ಭಾರತೀಯ ಹೆಣ್ಣು? 2026ರ ‘ಕರಾಳತೆಯ ಫೈಲ್’ ಬಹಿರಂಗ!

ಗೆದ್ದರೂ ಮುಗಿಯದ ಆತಂಕ; ನೆಟ್ ರನ್ ರೇಟ್ ಎಂಬ ಭೂತ!

ಪಾಕಿಸ್ತಾನಕ್ಕೆ ಕೇವಲ ಗೆಲುವೊಂದೇ ಸಾಕಾಗುವುದಿಲ್ಲ. ಈಗಾಗಲೇ ಅಂಕಪಟ್ಟಿಯಲ್ಲಿ ಪಾಕಿಸ್ತಾನದ ನೆಟ್ ರನ್ ರೇಟ್ -0.403 ರಷ್ಟಿದೆ. ಒಂದು ವೇಳೆ ಪಂದ್ಯದಲ್ಲಿ ಪಾಕ್ ಅಷ್ಟಕಷ್ಟೇ ಎನ್ನುವಂತೆ ಗೆದ್ದರೆ, ಅತ್ತ ಅಮೆರಿಕದ ನೆಟ್ ರನ್ ರೇಟ್ ಅನ್ನು ಮೀರಿಸುವುದು ಕಷ್ಟವಾಗಬಹುದು. ಗೆದ್ದರೂ ಸಹ ಅಮೆರಿಕದ ಮುಂದಿನ ಪಂದ್ಯದ ಫಲಿತಾಂಶಕ್ಕಾಗಿ ಪಾಕ್ ಕಾದು ಕುಳಿತುಕೊಳ್ಳಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿದೆ.

ಪಾಕ್ ಪಡೆಯಲ್ಲಿ ನಡುಕ: ಸಲ್ಮಾನ್-ಬಾಬರ್ ಮೇಲೆ ಒತ್ತಡ!

ನಾಯಕ ಸಲ್ಮಾನ್ ಅಲಿ ಅಘಾ ಮತ್ತು ಮಾಜಿ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಫಾರ್ಮ್ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಶಾಹೀನ್ ಅಫ್ರಿದಿ ನೇತೃತ್ವದ ವೇಗದ ಪಡೆ ಮಿಂಚದಿದ್ದರೆ ನಮೀಬಿಯಾದ ಬ್ಯಾಟರ್‌ಗಳು ಆಕ್ರಮಣಕಾರಿ ಆಟವಾಡುವುದು ಖಚಿತ. ಅತ್ತ ನಮೀಬಿಯ ತಂಡಕ್ಕೆ ಕಳೆದುಕೊಳ್ಳಲು ಏನೂ ಇಲ್ಲದ ಕಾರಣ, ಅವರು ಇಂದು ಪಾಕ್ ತಂಡವನ್ನು ಬಗ್ಗುಬಡಿಯಲು ಮಾನಸಿಕವಾಗಿ ಸಜ್ಜಾಗಿದ್ದಾರೆ.

ಪಂದ್ಯದ ವಿಶೇಷತೆಗಳು:

  • ಸ್ಥಳ: ಸಿಂಹಳೀಸ್ ಸ್ಪೋರ್ಟ್ಸ್ ಮೈದಾನ (SSC), ಕೊಲಂಬೊ.
  • ಸಮಯ: ಮಧ್ಯಾಹ್ನ 3:00 ಗಂಟೆಗೆ.
  • ಫಲಿತಾಂಶ: ಮಳೆ ಬಂದು ಪಂದ್ಯ ರದ್ದಾದರೆ ಪಾಕ್‌ಗೆ 1 ಅಂಕ ಸಿಕ್ಕು ಬದುಕುಳಿಯಬಹುದು, ಆದರೆ ಸೋತರೆ ಮಾತ್ರ ಚೀಟಿ ಹರಿಯುವುದು ಖಚಿತ!

ಕೊಲಂಬೊದ ಅಖಾಡದಲ್ಲಿ ಇಂದು ನಡೆಯಲಿರುವ 35ನೇ ವಿಶ್ವಕಪ್ ಪಂದ್ಯದಲ್ಲಿ ನಮೀಬಿಯ ‘ಜೈಂಟ್ ಕಿಲ್ಲರ್’ ಆಗಿ ಹೊರಹೊಮ್ಮುತ್ತಾ? ಅಥವಾ ಪಾಕಿಸ್ತಾನ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತಾ? ಕಾದು ನೋಡಬೇಕಿದೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...