India Vs Pakistan Match: ಕ್ರಿಕೆಟ್ ಲೋಕದ ಅತ್ಯಂತ ರೋಚಕ ಹಣಾಹಣಿ ಎನಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಡೀ ವಿಶ್ವವೇ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದರೆ, ಪಾಕಿಸ್ತಾನದ ಆರಂಭಿಕ ಆಟಗಾರ ಶಾಹಿಬ್‌ಜಾದ ಫರ್ಹಾನ್ ಮಾತ್ರ ಅಹಂಕಾರದ ಮಾತುಗಳನ್ನಾಡಿದ್ದಾರೆ. ಭಾರತದ ವಿರುದ್ಧದ ಪಂದ್ಯ ತನಗೇನೂ ‘ದೊಡ್ಡ ವಿಷಯವಲ್ಲ’ (Not a big deal) ಎಂದು ಹೇಳುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉದ್ಧಟತನದ ಪರಮಾವಧಿ: ಫರ್ಹಾನ್ ಹೇಳಿದ್ದೇನು?
ಟಿ20 ವಿಶ್ವಕಪ್‌ನ ಈ ಮಹತ್ವದ ಪಂದ್ಯ India Vs Pakistan Matchನ ಬಗ್ಗೆ ಮಾತನಾಡಿದ ಫರ್ಹಾನ್, “ಭಾರತದ ವಿರುದ್ಧ ಆಡುವುದು ನಮಗೆ ಸಾಮಾನ್ಯ ಪಂದ್ಯವಿದ್ದಂತೆ. ಇದರಲ್ಲಿ ವಿಶೇಷವೇನೂ ಇಲ್ಲ. ನಾವು ಈ ಹಿಂದೆಯೂ ಅವರ ವಿರುದ್ಧ ಆಡಿದ್ದೇವೆ, ಹಾಗಾಗಿ ಇದು ನಮಗೆ ದೊಡ್ಡ ವಿಚಾರವೇನಲ್ಲ,” ಎಂದಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧ ಪ್ರಯಾಸದ ಜಯ ಮತ್ತು ಯುಎಸ್ಎ ವಿರುದ್ಧದ ಗೆಲುವಿನ ಅಮಲಿನಲ್ಲಿರುವ ಪಾಕ್ ಆಟಗಾರರು, ಭಾರತದ ಬೌಲಿಂಗ್ ಬೆನ್ನೆಲುಬು ಜಸ್ಪ್ರೀತ್ ಬುಮ್ರಾ ಅವರನ್ನೇ ಟಾರ್ಗೆಟ್ ಮಾಡುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ‘ನಾ ಖಾವುಂಗಾ’ ಎನ್ನುತ್ತ ಸಾವಿರಾರು ಕೋಟಿ ಹಣ ಗುಳುಂ? ಮೋದಿಯವರ ‘ಸೀಕ್ರೆಟ್’ ಆಟ ಬಯಲು!
ಪಾಕ್ ಅಹಂಕಾರಕ್ಕೆ ಅಂಕಿಅಂಶಗಳ ಚಾಟೇಟು:
ಫರ್ಹಾನ್ ಪಾಲಿಗೆ ಇದು ‘ಸಾಮಾನ್ಯ ಪಂದ್ಯ’ವಾಗಿರಬಹುದು, ಆದರೆ ಇತಿಹಾಸದ ದಾಖಲೆಗಳು ಪಾಕಿಸ್ತಾನದ ಬೆವರಿಳಿಸುವುದು ಖಚಿತ:
- ಟಿ20 ವಿಶ್ವಕಪ್ ಇತಿಹಾಸ: ಈವರೆಗೆ ನಡೆದ 8 ಹಣಾಹಣಿಗಳಲ್ಲಿ ಭಾರತ 7-1 ಅಂತರದಿಂದ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ.
- ಒಟ್ಟು ಟಿ20 ಮುಖಾಮುಖಿ: ಒಟ್ಟು 13 ಪಂದ್ಯಗಳಲ್ಲಿ ಭಾರತ 9 ಬಾರಿ ಗೆದ್ದು ಬೀಗಿದ್ದರೆ, ಪಾಕ್ ಗೆದ್ದಿರುವುದು ಕೇವಲ 3 ಬಾರಿ ಮಾತ್ರ.
ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎ ವಿರುದ್ಧ ಗೆದ್ದ ತಕ್ಷಣ ಭಾರತವನ್ನು ಲಘುವಾಗಿ ಪರಿಗಣಿಸಿರುವ ಪಾಕಿಸ್ತಾನಕ್ಕೆ, ಭಾನುವಾರ ಮಹಾಶಿವರಾತ್ರಿಯಂದೇ ಟೀಮ್ ಇಂಡಿಯಾ ಮೈದಾನದಲ್ಲಿ ತಕ್ಕ ಪಾಠ ಕಲಿಸಲಿದೆಯೇ ಎಂದು ಕಾದು ನೋಡಬೇಕಿದೆ.
ಈ ಅಂಕಿಅಂಶಗಳೇ ಹೇಳುತ್ತವೆ, ಮೈದಾನದಲ್ಲಿ ಭಾರತದ ಎದುರು ನಿಲ್ಲುವುದು ಪಾಕಿಸ್ತಾನಕ್ಕೆ ಅಷ್ಟು ಸುಲಭದ ಮಾತಲ್ಲ ಎಂದು. ಇಷ್ಟೆಲ್ಲಾ ಸೋಲಿನ ಇತಿಹಾಸ ಬೆನ್ನಿಗಿದ್ದರೂ ಫರ್ಹಾನ್ ಅವರ ಇಂತಹ ಹೇಳಿಕೆ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ.
ಇದನ್ನೂ ಓದಿ: ಭಾರತದ ವಿರುದ್ಧ ಪಂದ್ಯ ಆಡದಿದ್ದರೆ ಪಾಕ್‌ಗೆ ಸಂಕಷ್ಟ; ವಿಶ್ವಕಪ್‌ನಿಂದಲೇ ಗೇಟ್‌ಪಾಸ್ ಸಾಧ್ಯತೆ?
ಸೂರ್ಯಕುಮಾರ್ ಮಾತಿಗೆ ಕಿಡಿ
ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಈ ಹಿಂದೆ “ಭಾರತ-ಪಾಕ್ ಪಂದ್ಯ ಒನ್-ಸೈಡೆಡ್ ಆಗಿರಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಮಾತನ್ನು ಅಲ್ಲಗಳೆದ ಫರ್ಹಾನ್, “ನಾವು ಪ್ರತಿ ಪಂದ್ಯದಲ್ಲೂ ಫೈಟ್ ನೀಡಿದ್ದೇವೆ, ಈ ಬಾರಿಯೂ ನೀಡುತ್ತೇವೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಮಹಾಶಿವರಾತ್ರಿಯಂದೇ ಹೈವೋಲ್ಟೇಜ್ ಕದನ
ಕಾಕತಾಳೀಯ ಎಂಬಂತೆ ಈ ಬಾರಿ ಭಾನುವಾರ ‘ಮಹಾಶಿವರಾತ್ರಿ’ ಹಬ್ಬದಂದೇ ಈ ಪಂದ್ಯ ನಡೆಯುತ್ತಿದೆ. ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ‘ಅಹಂ’ ಪ್ರದರ್ಶಿಸಿದ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಮೈದಾನದಲ್ಲೇ ಉತ್ತರ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

