Homeಸುದ್ದಿಗಳುಕ್ರೀಡೆIND vs PAK: ಪಾಕ್ ಸೊಕ್ಕು ಮುರಿದ ಸೂರ್ಯ ಪಡೆ; 61 ರನ್ ಗೆಲುವಿನೊಂದಿಗೆ ಸೂಪರ್-8...

IND vs PAK: ಪಾಕ್ ಸೊಕ್ಕು ಮುರಿದ ಸೂರ್ಯ ಪಡೆ; 61 ರನ್ ಗೆಲುವಿನೊಂದಿಗೆ ಸೂಪರ್-8 ಗೆ ಎಂಟ್ರಿ!

ಕೊಲಂಬೋ: ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನ IND vs PAK ಹೈ-ವೋಲ್ಟೇಜ್ ಪಂದ್ಯದಲ್ಲಿ  ಟೀಮ್ ಇಂಡಿಯಾ ಪಾಕಿಸ್ತಾನವನ್ನು‌ 61 ರನ್‌ಗಳಿಂದ ಮಣಿಸಿ ಅಬ್ಬರಿಸಿದೆ. ಇಶಾನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ಪಾಕ್ ಪಡೆ ತತ್ತರಿಸಿದೆ.

IND vs PAK ಪಂದ್ಯದ ಸ್ಕೋರ್ ಕಾರ್ಡ್ (Match Summary):

ಭಾರತ: 175/7 (20 ಓವರ್‌ಗಳು)

  • ಇಶಾನ್ ಕಿಶನ್: 77 (40 ಎಸೆತ, 10 ಬೌಂಡರಿ, 3 ಸಿಕ್ಸರ್) – ಮ್ಯಾನ್ ಆಫ್ ದಿ ಮ್ಯಾಚ್
  • ಸೂರ್ಯಕುಮಾರ್ ಯಾದವ್: 32 (28 ಎಸೆತ)
  • ತಿಲಕ್ ವರ್ಮಾ: 25 (24 ಎಸೆತ)
  • ಶಿವಂ ದುಬೆ: 27 (17 ಎಸೆತ)‌
  • ರಿಂಕು ಸಿಂಗ್‌ 11 (4 ಎಸೆತ, ನಾಟ್‌ ಔಟ್)

ಪಾಕಿಸ್ತಾನ: 114/10 (18 ಓವರ್‌ಗಳು)

  • ಪಾಕ್ ಬೌಲಿಂಗ್: ಸೈಮ್ ಅಯೂಬ್ 3/25.
  • ಉಸ್ಮಾನ್ ಖಾನ್: 44 (34 ಎಸೆತ)
  • ಬಾಬರ್ ಅಜಮ್: 05 (ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಔಟ್)
  • ಶಾಹಿನ್‌ ಶಾ ಅಫ್ರೀದಿ: 23 (19 ಎಸೆತ)

ಭಾರತದ ಬೌಲಿಂಗ್ ಪರಾಕ್ರಮ:

  • ವರುಣ್ ಚಕ್ರವರ್ತಿ: 2/17 (ಮಧ್ಯಮ ಕ್ರಮಾಂಕದ ಬೆನ್ನೆಲುಬು ಮುರಿದರು)
  • ಜಸ್ಪ್ರೀತ್ ಬುಮ್ರಾ: 2/17
  • ಅಕ್ಷರ್ ಪಟೇಲ್: 2/29
  • ಹಾರ್ದಿಕ್ ಪಾಂಡ್ಯ: 2/16 (ವಿಕೆಟ್ ಮೇಡನ್ ಓವರ್!)
  • ವರುಣ್‌ ಚಕ್ರವರ್ತಿ: 2/17
  • ಕುಲ್ದೀಪ್/ತೀಲಕ್‌ ವರ್ಮಾ: ತಲಾ ಒಂದೊಂದು ವಿಕೇಟ್.

ಇದನ್ನೂ ಓದಿ: ಸೋಲುವ ಮುನ್ನವೇ ಪಾಕ್ ಅಹಂಕಾರ; ‘Not a big deal’ ಅಂದವನಿಗೆ ಬೆವರಿಳಿಸುತ್ತಾ ಟೀಮ್ ಇಂಡಿಯಾ?

IND vs PAK ಪಾಯಿಂಟ್ಸ್ ಟೇಬಲ್ ಮುಖ್ಯಾಂಶಗಳು:

ಭಾರತ ಅಗ್ರಸ್ಥಾನ: ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತ 6 ಅಂಕಗಳೊಂದಿಗೆ ಮೊದಲ ತಂಡವಾಗಿ ‘ಸೂಪರ್ 8’ ಹಂತಕ್ಕೆ ಅರ್ಹತೆ ಪಡೆದಿದೆ (Qualified).

ಪಾಕಿಸ್ತಾನಕ್ಕೆ ಆಪತ್ತು: ಇಂದಿನ ಸೋಲಿನ ನಂತರ ಪಾಕಿಸ್ತಾನದ ನೆಟ್ ರನ್ ರೇಟ್ ಭಾರಿ ಕುಸಿತ ಕಂಡಿದೆ. ಈಗ ಪಾಕ್ ತಂಡ ಮುಂದಿನ ಹಂತಕ್ಕೇರಬೇಕಾದರೆ ತನ್ನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕು ಮತ್ತು ಅಮೆರಿಕ ಸೋಲಲಿ ಎಂದು ಪ್ರಾರ್ಥಿಸಬೇಕಿದೆ.

ಇಂಡಿಯಾ ಪವರ್: ಭಾರತದ ರನ್ ರೇಟ್ (+2.450) ಇಡೀ ಗ್ರೂಪ್‌ನಲ್ಲಿ ಅತ್ಯುತ್ತಮವಾಗಿದೆ.

ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಹಾದಿಯನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಪಾಕಿಸ್ತಾನದ ಬ್ಯಾಟಿಂಗ್ ಲೈನಪ್ ಭಾರತೀಯ ಸ್ಪಿನ್ನರ್ ಹಾಗೂ ವೇಗಿಗಳ ಎದುರು ಮತ್ತೊಮ್ಮೆ ಮಕಾಡೆ ಮಲಗಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments