Holebasu Shettar: ಬೆಳೆಯಬೇಕು ಅನ್ನುವುದಕ್ಕೆ ಶ್ರಮ ಬೇಕು, ಜೊತೆಗೆ ಅದೃಷ್ಟವೂ ಇರಬೇಕು ಎನ್ನುತ್ತಾರೆ. ಆದರೆ, ಯಾವುದೇ ಶ್ರಮವಿಲ್ಲದೆ ರಾತ್ರೋರಾತ್ರಿ ಕೋಟ್ಯಧಿಪತಿಯಾಗಬೇಕೆಂದರೆ ಅಡ್ಡದಾರಿ ಮತ್ತು ಅಕ್ರಮದ ನಂಟಿರಬೇಕು! ಇದಕ್ಕೆ ಜೀವಂತ ಮತ್ತು ಜ್ವಲಂತ ಉದಾಹರಣೆಯೇ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೂ ತನಗೂ ಯಾವುದೇ ಸಂಬಂಧವೇ ಇಲ್ಲದಿದ್ದರೂ, ಅಲ್ಲಿ ಬೀಡುಬಿಟ್ಟು ಲೂಟಿ ಹೊಡೆಯುತ್ತಿರುವ ಒಬ್ಬ ಅಕ್ರಮಕೋರನ ಅಸಲಿ ಮುಖವಾಡ.
ʻಬಡವರ ಹುಡುಗʼ ಎನ್ನುವ ಒಂದೇ ಒಂದು ಕಾರಣಕ್ಕೆ 90ರ ದಶಕದಲ್ಲಿ ದಿವಂಗತ ಮಾಜಿ ಸಚಿವ ಎಚ್.ವೈ. ಮೇಟಿ ಅವರ ಬಳಿ ಕಾಲಾಳಾಗಿ, ಕಸ ಗುಡಿಸಲು ಬಂದವನೇ ಈ ಹೊಳೆಬಸು ಶೆಟ್ಟರ್. ಅಂದು ಈತನ ದಯನೀಯ ಪರಿಸ್ಥಿತಿಯನ್ನು ನೋಡಿ ಮರುಗಿದ ಮೇಟಿಯವರು, ಆತನನ್ನು ತಮ್ಮ ಸ್ವಂತ ಮನೆಯ ಮಗನಂತೆ ಸಾಕಿ ಸಲಹಿದರು. ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಸೇರಿದ ಹೊಳೆಬಸು, ನಂತರ ತನ್ನ ನರಿ ಬುದ್ಧಿ ಮತ್ತು ಅಪರಿಮಿತ ದುರಾಸೆಗಳಿಗೆ ಅದೇ ಕಚೇರಿಯನ್ನು ವೇದಿಕೆಯನ್ನಾಗಿ ಬಳಸಿಕೊಂಡಿದ್ದು ಈಗ ಇತಿಹಾಸ.
ಬಡತನದ ಮುಖವಾಡ: ಚಹಾ, ಚುರುಮುರಿ ಸರಬರಾಜಿನಿಂದ ‘ಮೋಜು-ಮಸ್ತಿ’ಯ ವ್ಯವಸ್ಥೆಯವರೆಗೆ!
ಅಂದಿನ ಗುಳೇದಗುಡ್ಡ ಮತಕ್ಷೇತ್ರದ ಗೂಡೂರು, ಕಮತಗಿ ಹಾಗೂ ಗುಳೇದಗುಡ್ಡ ಪಟ್ಟಣದ ಮುಗ್ಧ ಜನತೆ ಮತ್ತು ಮುಖಂಡರು “ಬಡವರ ಮಗ ಬೆಳೆಯಲಿ” ಎಂದು ಈತನಿಗೆ (Holebasu Shettar) ಪ್ರೋತ್ಸಾಹ ನೀಡಿದರು. ಆದರೆ, ಇದನ್ನೇ ತನ್ನ ಬಂಡವಾಳ ಮಾಡಿಕೊಂಡ ಈತ, ಸರ್ಕಾರದ ಸೌಲಭ್ಯಗಳನ್ನು ಅಕ್ರಮವಾಗಿ ತನ್ನ ಜೇಬಿಗೆ ಇಳಿಸಿಕೊಳ್ಳಲು ಆರಂಭಿಸಿದ. ಆರಂಭದಲ್ಲಿ ಎಚ್.ವೈ. ಮೇಟಿಯವರ ಕಚೇರಿ ಕಸ ಗುಡಿಸುವುದು, ಬಂದ ಅತಿಥಿಗಳಿಗೆ ಚಹಾ-ಚುರುಮುರಿ ಕೊಡುವುದಷ್ಟೇ ಈತನ ಕೆಲಸವಾಗಿತ್ತು. ಆದರೆ, ರಾತ್ರಿಯಾಗುತ್ತಿದ್ದಂತೆ ರಾಜಕಾರಣಿಗಳ “ಮೋಜು-ಮಸ್ತಿ”ಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸುವ ಬ್ರೋಕರ್ ಕೆಲಸಕ್ಕೆ ಈತ ಕೈಹಾಕಿದ!
ಮೇಟಿಯವರ ಚುನಾವಣಾ ತಂತ್ರಗಾರಿಕೆಯಲ್ಲಾಗಲಿ ಅಥವಾ ರಾಜಕೀಯ ಮುತ್ಸದ್ದಿತನದಲ್ಲಾಗಲಿ ಈತನ ಪಾತ್ರ ಶೂನ್ಯ (ಜೀರೋ). ಆದರೆ, ಹೊರಜಗತ್ತಿಗೆ ಮಾತ್ರ “ನಾನಿಲ್ಲದಿದ್ದರೆ ಮೇಟಿಯವರೇ ಇಲ್ಲ” ಎಂಬಂತೆ ಬಿಂಬಿಸಿಕೊಂಡು, ರಾಜಕಾರಣದ ತೆರೆಮರೆಯಲ್ಲಿ ವರ್ಗಾವಣೆ ದಂಧೆಯ ಕುಖ್ಯಾತ ಕಿಂಗ್ ಪಿನ್ ಆಗಿ ರೂಪಾಂತರಗೊಂಡ.
ಇದನ್ನೂ ಓದಿ: Media Masala: KPCC ಗೆ ಅಬಕಾರಿ ಮಿನಿಸ್ಟರ್ ದೋಖಾ? ಆಪ್ತ ಪತ್ರಕರ್ತ ಶಾಮೀಲು!
ನಾಯಕನ ವೀಕ್‌ನೆಸ್ ಇವನಿಗೆ ಪ್ಲಸ್ ಪಾಯಿಂಟ್!
1989ರಿಂದ 2023ರ ವರೆಗೆ ಹತ್ತಕ್ಕೂ ಹೆಚ್ಚು ಚುನಾವಣೆಗಳನ್ನು ಎದುರಿಸಿದ ಮೇಟಿಯವರು, ಯಾವುದೇ ಸಂದರ್ಭದಲ್ಲೂ ಈತನಿಗೆ (Holebasu Shettar) ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಬಿಟ್ಟಿರಲಿಲ್ಲ. ಆದರೆ, ಕಾಲ ಉರುಳಿದಂತೆ ಮೇಟಿಯವರ ಪ್ರತಿಯೊಂದು ಮೈನಸ್ ಪಾಯಿಂಟ್‌ಗಳನ್ನು (ದುರ್ಬಲತೆಗಳನ್ನು) ಹೊಳೆಬಸು ತನ್ನ ಕುತಂತ್ರಕ್ಕೆ ದಾಳವಾಗಿ ಬಳಸಿಕೊಂಡ. ಅವರ ವೈಯಕ್ತಿಕ ವಿಚಾರಗಳಲ್ಲೂ ಮೂಗು ತೂರಿಸಿ ಬ್ಲ್ಯಾಕ್‌ಮೇಲ್ ತಂತ್ರ ಶುರು ಮಾಡಿದ. ವಯೋಸಹಜ ಕಾರಣಗಳಿಂದಾಗಿ 2023ರ ಬಳಿಕ ಮೇಟಿಯವರು ಅನಿವಾರ್ಯವಾಗಿ ಇವನ ಮೇಲೆ ಅವಲಂಬಿತರಾಗಬೇಕಾಯಿತು. ಇದನ್ನೇ ಕಾಯುತ್ತಿದ್ದ ಹೊಳೆಬಸು, ಕ್ಷೇತ್ರದ ಪ್ರತಿಯೊಂದು ಅಧಿಕಾರ ಮತ್ತು ಅಭಿವೃದ್ಧಿ ವಿಚಾರದಲ್ಲೂ ಸರ್ವಾಧಿಕಾರಿಯಂತೆ ವರ್ತಿಸಲು ಆರಂಭಿಸಿದ.
ಸಿದ್ದರಾಮಯ್ಯನವರ ಆಪ್ತ ವಲಯಕ್ಕೆ ನುಗ್ಗಿದ್ದು ಹೇಗೆ?
ಎಚ್.ವಾಯ್. ಮೇಟಿಯವರ ಬೆನ್ನಹಿಂದೆ ನಿಂತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪರ್ಕ ಗಿಟ್ಟಿಸಿಕೊಂಡ ಈತ, ಅವರು ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರಕ್ಕೆ ಬಂದಾಗಲೆಲ್ಲಾ ಅವರ ವೈಯಕ್ತಿಕ ಸೇವೆಗೆ ನಿಂತು ನಂಬಿಕೆ ಗಳಿಸಿದ. ಅಲ್ಲಿಂದ ಸಿದ್ದರಾಮಯ್ಯನವರ ಬೆಂಗಳೂರಿನ ನಿವಾಸಕ್ಕೂ ಲಗ್ಗೆ ಇಟ್ಟನು.
ಅದೇ ಸಮಯದಲ್ಲಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಡುವೆ ರಾಜಕೀಯ ಯುದ್ಧ ತಾರಕಕ್ಕೇರಿತ್ತು. ಇದನ್ನೇ ಸುವರ್ಣಾವಕಾಶ ಮಾಡಿಕೊಂಡ ಹೊಳೆಬಸು, ಸಿದ್ದರಾಮಯ್ಯನವರ ಪರವಾಗಿ ನಿಂತು ಎಚ್.ಡಿ. ದೇವೇಗೌಡರ ಪ್ರತಿಕೃತಿಯನ್ನು ರಸ್ತೆಯಲ್ಲಿ ಧಹಿಸಿ, ಆಕ್ರೋಶದ ಘೋಷಣೆಗಳನ್ನು ಕೂಗಿದ. ದೊಡ್ಡ ನಾಯಕರ ನಿಂದನೆಯೇ ಈತನಿಗೆ ಅದೃಷ್ಟದ ಬಾಗಿಲು ತೆರೆಯಿತು! ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಈತ, 2013ರಿಂದ 2018ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭರ್ಜರಿ ಬಾಡೂಟ ಸವಿದಿದ್ದಷ್ಟೇ ಅಲ್ಲದೆ, ಶಾಲೆ, ಬಿಸಿಯೂಟ, ಅಕ್ಷರ ದಾಸೋಹಗಳ ಹೆಸರಿನಲ್ಲಿ ತೆರೆಮರೆಯಲ್ಲಿ ಮಹಾ ಕರ್ಮಕಾಂಡವನ್ನೇ ನಡೆಸಿದ. ಸಿಎಂ ಆಪ್ತನೆಂಬ ಹಣೆಪಟ್ಟಿ ಬಳಸಿ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ಹಣದ ಕುಳ ಆದನು.
ಇದನ್ನೂ ಓದಿ: RB Timmapur: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ (Part 2)
ಬಾದಾಮಿಯಿಂದ ಒದ್ದು ಓಡಿಸಿದರು, ಈಗ ಬಾಗಲಕೋಟೆಗೆ ಒಕ್ಕರಿಸಿದ್ದಾನೆ!
ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದ ಶಾಸಕರಾಗಿದ್ದಾಗ ಈ ಹೊಳೆಬಸು ಶೆಟ್ಟರ್‌ನ ಹಾವಳಿ ಮಿತಿಮೀರಿತ್ತು. ಇವನ ಅಸಹ್ಯಕರ ನಡವಳಿಕೆ ಮತ್ತು ಕರಾಳ ಮುಖವನ್ನು ಕಂಡು ಬೇಸತ್ತ ಬಾದಾಮಿಯ ಪ್ರಭಾವಿ ಚಿಮ್ಮನಕಟ್ಟಿ ಕುಟುಂಬದವರು ಮತ್ತು ಸ್ಥಳೀಯರು ಇವನನ್ನು ಅಲ್ಲಿಂದ ‘ಕಿಕ್ ಔಟ್’ ಮಾಡಿ ಓಡಿಸಿದರು.
ಬಾದಾಮಿಯಿಂದ ಒದ್ದು ಓಡಿಸಿದ ತಕ್ಷಣ ಈತ ಒಕ್ಕರಿಸಿದ್ದು ಬಾಗಲಕೋಟೆಗೆ! ಮೇಟಿಯವರ ವಯೋಸಹಜ ಸ್ಥಿತಿಯ ದುರುಪಯೋಗ ಪಡಿಸಿಕೊಂಡು ಇಡೀ ಕ್ಷೇತ್ರದ ಜವಾಬ್ದಾರಿಯನ್ನು ತನ್ನ ಕೈಗೆ ತಕ್ಕೊಂಡ ಈತ, ಸ್ಥಳೀಯ ನಾಯಕರನ್ನು ಮತ್ತು ಪ್ರಾಮಾಣಿಕ ಕಾರ್ಯಕರ್ತರನ್ನು ತನ್ನ ಮನೆಯ ಆಳುಗಳಿಗಿಂತ ಕೀಳಾಗಿ ನಡೆಸಿಕೊಳ್ಳಲು ಆರಂಭಿಸಿದ. ಕ್ಷೇತ್ರದ ಜನತೆ ಕೇವಲ ಮೇಟಿಯವರ ಮೇಲಿನ ಗೌರವಕ್ಕೆ ಇಷ್ಟು ದಿನ ಸಹಿಸಿಕೊಂಡಿದ್ದರು. ಆದರೆ ಈಗ ಮೇಟಿಯವರ ಪುತ್ರ ಉಮೇಶ್ ಮೇಟಿ ಶಾಸಕರಾಗಿರುವ ಅವಧಿಯಲ್ಲೂ ಈ ಹೊಳೆಬಸು ತನ್ನ ಹಳೆ ಚಾಳಿಯನ್ನು ಮುಂದುವರಿಸಿ, ಪ್ರತಿಯೊಂದರಲ್ಲೂ ಮೂಗು ತೂರಿಸುತ್ತಿದ್ದಾನೆ.
ಕಟ್ಟೆ ಒಡೆದ ಸಹನೆ: ಅಧಿಕಾರಿಗಳಿಗೆ ಚಪ್ಪಲಿ ಸೇವೆ ಗ್ಯಾರಂಟಿ!
“ಮೇಟಿಯವರ ಪರಮಾಪ್ತ” ಎಂಬ ಒಂದೇ ಒಂದು ಸುಳ್ಳು ಹಣೆಪಟ್ಟಿಯನ್ನು ನಂಬಿ ಬಾಗಲಕೋಟೆಯ ಕೆಲವು ಅಧಿಕಾರಿಗಳು ಈ ಅಕ್ರಮಕೋರ ಹೊಳೆಬಸು ಶೆಟ್ಟರ್‌ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಯನ್ನು ಮೂಲೆಗೆ ತಳ್ಳಿ, ಲೂಟಿಕೋರನಿಗೆ ಮಣಿಯುತ್ತಿರುವ ಅಧಿಕಾರಿಗಳಿಗೆ ಮತ್ತು ಇವನ ಅಕ್ರಮ ದಂಧೆಗೆ ಸ್ಥಳೀಯ ಸಾರ್ವಜನಿಕರ ಸಹನೆಯ ಕಟ್ಟೆ ಒಡೆದಿದೆ. ಜನಸಾಮಾನ್ಯರು ಮತ್ತು ಕಾರ್ಯಕರ್ತರು ಈಗ ಇವನ ಕರಾಮತ್ತಿಗೆ ಬೀದಿಯಲ್ಲೇ ‘ತಕ್ಕ ಶಾಸ್ತಿ’ ಮಾಡಲು ಸನ್ನದ್ಧರಾಗಿದ್ದಾರೆ! ಇವನ ಪಾಪದ ಕೊಡ ತುಂಬಿ ಬಂದಿದ್ದು, ಅಕ್ರಮ ಸಾಮ್ರಾಜ್ಯ ಪತನವಾಗುವ ದಿನ ಹತ್ತಿರದಲ್ಲೇ ಇದೆ.
ಇನ್ನೂ ಮುಗಿದಿಲ್ಲ!
ಈತನ ಅಕ್ರಮ ಜಾಲ, ತೆರೆಮರೆಯ ಕರಾಳ ದಂಧೆಗಳು ಹಾಗೂ ಯಾರ್ಯಾರ ಜೊತೆ ಈತ ನಂಟು-ಗಂಟು ಇಟ್ಟುಕೊಂಡು ಬಾಗಲಕೋಟೆಯನ್ನು ಲೂಟಿ ಹೊಡೆಯುತ್ತಿದ್ದಾನೆ ಎಂಬ ಇಂಚಿಂಚು ಮಾಹಿತಿಯ ಪೂರ್ಣ ಲೇಖನವನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ… ‘ಶೆಟ್ಟರ್’ ಅಕ್ರಮ ಸಾಮ್ರಾಜ್ಯದ ಅಸಲಿ ಬುತ್ತಿ ಶೀಘ್ರದಲ್ಲೇ ಬಿಚ್ಚಿಕೊಳ್ಳಲಿದೆ!
📌 ವಿಶೇಷ ಸೂಚನೆ: ಈ ಮೇಲಿನ ಲೇಖನವನ್ನು ಸ್ವತಃ ಶಾಸಕ ಹೆಚ್.ವೈ. ಮೇಟಿಯವರ ಅತ್ಯಂತ ನಿಕಟ ಹಾಗೂ ಆಪ್ತ ಬಳಗದವರು ನೀಡಿದ ನಂಬಿಕಸ್ಥ ಮತ್ತು ಖಚಿತ ಮಾಹಿತಿಯ ಆಧಾರದ ಮೇಲೆಯೇ ಸಿದ್ಧಪಡಿಸಲಾಗಿದೆ.

