Homeವಿಶ್ಲೇಷಣೆSwamiji Scandal: ಖಾವಿ ಮರೆಯಲ್ಲಿ ಕಾಮದ ಉನ್ಮಾದ; ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ಸ್ವಾಮಿ ವಿಲವಿಲ!

Swamiji Scandal: ಖಾವಿ ಮರೆಯಲ್ಲಿ ಕಾಮದ ಉನ್ಮಾದ; ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ಸ್ವಾಮಿ ವಿಲವಿಲ!

ಕರ್ನಾಟಕದ ಮಣ್ಣಿನಲ್ಲಿ ಮಠ-ಮಾನ್ಯಗಳಿಗೆ ಮತ್ತು ಖಾವಿಧಾರಿಗಳಿಗೆ ದೈವದ ಸ್ಥಾನವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪವಿತ್ರವಾದ ಖಾವಿಯ ಮರೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು (Swamiji Scandal) ಭಕ್ತ ಸಮೂಹವನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದ ಪ್ರಬಲ ಸ್ವಾಮಿಯ ಸುತ್ತ ಕೇಳಿಬರುತ್ತಿರುವ ಅನಾಚಾರದ ಸುದ್ದಿಗಳು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಬದಲಾಗಿ ಇಡೀ ಮಠಾಧೀಶರ ಪರಂಪರೆಗೆ ಅಂಟಿದ ಕಳಂಕದಂತಿದೆ. ಅಂದು ಬೀದಿಗೆ ಇಳಿದು ಜನರಿಗಾಗಿ ಹೋರಾಡಿದ ‘ಆ’ ಪ್ರಬಲ ಸ್ವಾಮೀಜಿ ಇಂದು ಹೆಣ್ಣಿನ ವಿಚಾರದಲ್ಲಿ ರಸ್ತೆಯಲ್ಲಿ ಫಜೀತಿಯಾಗುತ್ತಿರುವುದು ವಿಪರ್ಯಾಸದ ಸಂಗತಿ.

ಹೋರಾಟದ ಹಾದಿಯಿಂದ ಅಧಃಪತನದತ್ತ

Swamiji Scandal: ಒಂದು ದಶಕದ ಹಿಂದೆ ಈ ಸ್ವಾಮೀಜಿಯ ವರ್ಚಸ್ಸು ಹೇಗಿತ್ತೆಂದರೆ, ಇವರ ಒಂದು ಕರೆಗೆ ಲಕ್ಷಾಂತರ ಜನರು ಸೇರುತ್ತಿದ್ದರು. ರಾಜ್ಯದ ರಾಜಧಾನಿಯಲ್ಲಿ ಇವರು ನಡೆಸಿದ ಪಾದಯಾತ್ರೆಗಳು, ಸರ್ಕಾರದ ವಿರುದ್ಧ ಇವರು ತೊಡೆತಟ್ಟಿದ ರೀತಿ ನೋಡಿ ಇಡೀ ನಾಡು ಇವರನ್ನು ‘ಕ್ರಾಂತಿ ಪುರುಷ’ ಎಂದೇ ಭಾವಿಸಿತ್ತು. ಸಮಾಜದ ಹಿತಕ್ಕಾಗಿ, ಮೀಸಲಾತಿಗಾಗಿ ಮತ್ತು ಶೋಷಿತರ ಧ್ವನಿಯಾಗಿ ಇವರು ಮಾಡಿದ ಕೆಲಸಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಆದರೆ, ಯಾವಾಗ ಅಧ್ಯಾತ್ಮದ ಹಾದಿ ತಪ್ಪಿ ರಾಜಕೀಯದ ಕೆಸರಿನಲ್ಲಿ ಕಾಲಿಟ್ಟರೋ, ಅಂದೇ ಇವರ ಪತನ ಶುರುವಾಗಿತ್ತು.

ವಿಜಯಪುರದ ಬೆಡಗಿಯ ಬಲೆಯಲ್ಲಿ ಸಿಲುಕಿದರೇ ಪ್ರಬಲ ಶ್ರೀಗಳು?

ವಿಜಯಪುರದಲ್ಲಿ ನಡೆದಿದೆ ಎನ್ನಲಾದ ಘಟನೆ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸುತ್ತಿದೆ. ಮೂಲತಃ ವಿಜಯಪುರ ಜಿಲ್ಲೆಯವಳಾದ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆಯೊಬ್ಬಳ ಜೊತೆ ಶ್ರೀಗಳು ಎರಡು ದಿನಗಳ ಕಾಲ ಕಳೆದಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸ್ವಾಮೀಜಿ ನೂರಕ್ಕೂ ಅಧಿಕ ಯುವತಿಯರ ಸಂಪರ್ಕ ಹೊಂದಿದ್ದಾರೆ ಆದರೆ ಯಾವುದೂ ಬೆಳಕಿಗೆ ಬಂದಿಲ್ಲ ಎನ್ನಲಾಗುತ್ತಿದೆ. ಆದರೆ, ಈ ಪ್ರಕರಣದಲ್ಲಿ, ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಮಹಿಳೆಯು ಜನರನ್ನು ಸೇರಿಸಿದ್ದರಿಂದ ಸ್ವಾಮೀಜಿಯ ಕಾಮಪುರಾಣ ಬಯಲಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ರಾಜಕಾರಣಿಗಳ ಮೊರೆ ಹೋದರೂ ಕೈಕೊಟ್ಟ ‘ಕೈಗೊಂಬೆ’ ಭಾಗ್ಯ!

ಯಾವಾಗ ತಮ್ಮದೇ ಸಮುದಾಯದ ಜನರು ಆಕ್ರೋಶಗೊಂಡು ಶ್ರೀಗಳನ್ನು ತರಾಟೆಗೆ ತೆಗೆದುಕೊಂಡರೋ, ಆಗ ರಕ್ಷಣೆಗಾಗಿ ಶ್ರೀಗಳು ವಿಜಯಪುರ ಭಾಗದ ಖ್ಯಾತ ರಾಜಕಾರಣಿಯೊಬ್ಬರಿಗೆ ಕರೆ ಮಾಡಿ ಸಹಾಯ ಕೋರಿದ್ದರು. ಆದರೆ, ಆ ರಾಜಕಾರಣಿಯು ಫೋನ್ ಸ್ವೀಕರಿಸದ ಕಾರಣ ಶ್ರೀಗಳು ಅಕ್ಷರಶಃ ಲಾಕ್ ಆಗಿದ್ದಾರೆ. ಪ್ರಮುಖರ ಮಧ್ಯಸ್ಥಿಕೆಯಿಂದಾಗಿ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರದಿದ್ದರೂ, ಸ್ವಾಮೀಜಿಯ ಅಸಲಿ ಮುಖವಾಡ ಕಳಚಿರುವುದು ಭಕ್ತರಲ್ಲಿ ತೀವ್ರ ಆಘಾತ ಮೂಡಿಸಿದೆ.

ರಾಜಕೀಯ ನಾಯಕರ ಕಪಿಮುಷ್ಟಿಯಲ್ಲಿ ಸ್ವಾಮೀಜಿ ವಿಲವಿಲ!

ಇಲ್ಲಿ ಕೇವಲ ಸ್ವಾಮೀಜಿಯ ತಪ್ಪು ಮಾತ್ರವಲ್ಲ, ಅವರ ಸುತ್ತಲಿರುವ ರಾಜಕೀಯ ಹಿತಾಸಕ್ತಿಗಳ ದೊಡ್ಡ ಚದುರಂಗದಾಟವೇ ಅಡಗಿದೆ. ಉತ್ತರ ಕರ್ನಾಟಕದ ಪ್ರಬಲ ನಾಯಕರು ಈ ಸ್ವಾಮೀಜಿಯನ್ನು ಕಾಲ ಕಾಲಕ್ಕೆ ತಮ್ಮ ‘ಕೈಗೊಂಬೆ’ಯಾಗಿ ಬಳಸಿಕೊಳ್ಳುತ್ತಾ ಬಂದಿದ್ದಾರೆ ಎಂಬುದು ಕಹಿಸತ್ಯ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸ್ವಾಮೀಜಿಯನ್ನು ಅಸ್ತ್ರವಾಗಿ ಬಳಸುವ ಈ ನಾಯಕರು, ಅವರಿಗೆ ಬೇಕಾದ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದಾರೆ.

ಮತ್ತೊಂದುಕಡೆ ಇದು ಸ್ವಾಮೀಜಿಗೆ ಮಸಿ ಬಳಿಯುವ ಯತ್ನವಾ? ಅಥವಾ ಸ್ವಾಮೀಜಿಯನ್ನು ಗೊಂಬೆಯಂತೆ ಆಡಿಸುವ ತಂತ್ರವಾ? ಎಂಬ ಪ್ರಶ್ನೆ ಈಗ ಮೂಡುತ್ತಿದೆ. ಸ್ವಾಮೀಜಿಯ ಪ್ರತಿಯೊಂದು ನಡೆಯೂ ಈಗ ರಾಜಕಾರಣಿಗಳ ರಿಮೋಟ್ ಕಂಟ್ರೋಲ್‌ನಲ್ಲಿದೆ. ಯಾವಾಗ ಒಬ್ಬ ಗುರು ರಾಜಕಾರಣಿಯ ಮುಂದೆ ಮಂಡಿಯೂರುತ್ತಾನೋ, ಅಂದೇ ಆ ಗುರುವಿನ ನೈತಿಕತೆ ಸತ್ತು ಹೋಗುತ್ತದೆ.

ಇದನ್ನೂ ಓದಿ: Mallikarjuna Mutya: ನಕಲಿ ದೇವಮಾನವನ ಭವಿಷ್ಯ ಸಂತ್ರಸ್ತ ಬಾಲಕಿಯ ಕೈಯಲ್ಲಿ!; ಅಸ್ತಿತ್ವಕ್ಕಾಗಿ ಮುತ್ಯಾನ ಹರಸಾಹಸ

ನಿಜವಾಗಿಯೂ ನಡೆದಿತ್ತಾ ಪಲ್ಲಂಗದಾಟ?

ಇತ್ತೀಚೆಗೆ ಗುಮ್ಮಟ ನಗರಿಯ ಹಳ್ಳಿಯೊಂದರಲ್ಲಿ ನಡೆದ ಆ ರಾತ್ರಿಯ ಘಟನೆ ಯಾವುದೇ ಸಸ್ಪೆನ್ಸ್ ಸಿನಿಮಾಗಿಂತ ಕಡಿಮೆಯಿಲ್ಲ. ಬೆಂಗಳೂರಿನಿಂದ ಯುವತಿಯನ್ನು ಕರೆಸಿಕೊಂಡು, ಶಾಸಕರೊಬ್ಬ ಫಾರ್ಮ್‌ಹೌಸ್‌ನಲ್ಲಿ ರಹಸ್ಯವಾಗಿ ತಂಗಿದ್ದ ಸ್ವಾಮೀಜಿ, ಎರಡು ದಿನಗಳವರೆಗೆ ಇಬ್ಬರ ನಡುವಿನ ಲವ್ವಿಡವ್ವಿ ಚೆನ್ನಾಗಿಯೇ ಇತ್ತಂತೆ. ಮೂರನೇ ದಿನ ವ್ಯವಹಾರವೇ ಈ ಹೈಡ್ರಾಮಾಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಆಕೆಯನ್ನು ತನ್ನ ಕಾಮು ತೃಷೆಗೆ ಬಳಸಿಕೊಂಡ ಬಳಕಿ ಆಕೆಯೊಂದಿಗೆ ವ್ಯವಹರಿಸಿದ ದುಡ್ಡನ್ನೋ ಅಥವಾ ಈನ್ನೇನನ್ನೋ ನೀಡಿದ್ದರೆ ಸ್ವಾಮೀಜಿ ಬಚಾವ್‌ ಆಗ್ತಿದ್ರೆನೋ… ಆದರೆ ಮೂರನೇ ದಿನ ಈ ಸ್ವಾಮಿ ಮೂರಾಬಟ್ಟೆ ಮಾಡಿಕೊಂಡಿದ್ದಾರೆ. ವ್ಯವಹರಿಸಿದ ದುಡ್ಡು ಕೊಡದಿದ್ದಾಗ ಉಟ್ಟುಬಟ್ಟೆಯಲ್ಲೇ ಅಲ್ಲಿಂದ ಆಚೆಹಾಕಿದ್ದಾಳಂತೆ! ಹೀಗೆ ಪತ್ರಿಕೆಯೊಂದು ಬಿತ್ತರಿಸಿದೆ ಆದರೆ ಅಲ್ಲಿ ನಡೆದಿದ್ದು ಪಲ್ಲಂಗದಾಟವೋ ಅಥವಾ ದೊಡ್ಡ ಸೆಟಪ್‌ವೋ ಎಂಬುದು ಇನ್ನು ನಿಗೂಢ.

ಭಕ್ತಿಯ ಹೆಸರಲ್ಲಿ ಬಂದು ಮೋಸ ಮಾಡಿದ್ರಾ ಅಥವಾ ಸ್ವಾಮೀಜಿ ತಾವೇ ಹೆಣ್ಣಿನ ಮೋಹಕ್ಕೆ ಬಲಿಬಿದ್ದಿದ್ದಾರಾ? ಅಲ್ಲಿ 80 ಲಕ್ಷ ರೂಪಾಯಿಗಳ ಸೆಟಲ್‌ಮೆಂಟ್ ಮಾತುಕತೆ ನಡೆದಿದೆ ಎಂಬ ಸುದ್ದಿ ಅರ್ಧ ಸತ್ಯವಾಗಿರಬಹುದು, ಆದರೆ ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ. ಖಾವಿಧಾರಿ ತಪ್ಪು ಹಾದಿ ತುಳಿದಿರಬಹುದು ಎಂದು ಹೇಳುತ್ತವೆ ಬಲ್ಲಮೂಲಗಳು.

ಆಫ್ ದಿ ರೆಕಾರ್ಡ್: ಬೆಳಗಾವಿ ಮಹಿಳೆ ಮತ್ತು ಮಾಜಿ ಸಚಿವನ ‘ಪ್ಲಾನ್’!

ಈ ಹಗರಣದ ಬೇರುಗಳು ಕೇವಲ ಇತ್ತೀಚಿನ ಘಟನೆಗೆ ಸೀಮಿತವಾಗಿಲ್ಲ. ಅಸಲಿ ಸುದ್ದಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಸ್ವಾಮೀಜಿಗೆ ಬೆಳಗಾವಿಯ ಮಹಿಳೆಯೊಂದಿಗೆ ದೀರ್ಘಕಾಲದ ಅಕ್ರಮ ಸಂಬಂಧವಿತ್ತಂತೆ. ಧಾರವಾಡ, ಬೆಂಗಳೂರು ಹೀಗೆ ಅಲ್ಲಲ್ಲಿ ಕಚ್ಚೆ ಬಿಚ್ಚುವ ಚಟ ಅಂಟಿಸಿಕೊಂಡಿದ್ದಾರಂತೆ. ಅಚ್ಚರಿಯ ವಿಷಯವೆಂದರೆ, ಈ ಸ್ವಾಮೀಜಿಗೆ ಅಂತಹ ಹೆಣ್ಣಿನ ರುಚಿ ಹಚ್ಚಿಸಿದ್ದೇ ಉತ್ತರ ಕರ್ನಾಟಕದ ಒಬ್ಬ ಪ್ರಭಾವಿ ಮಾಜಿ ಸಚಿವನಂತೆ! ಆ ಸ್ವಾಮೀಜಿಯ ದೌರ್ಬಲ್ಯವನ್ನು ತಿಳಿದುಕೊಂಡ ರಾಜಕಾರಣಿಗಳು, ಅವನನ್ನು ಬ್ಲ್ಯಾಕ್‌ಮೇಲ್ ಮಾಡಲು ಈ ದಾರಿಯನ್ನು ಆರಿಸಿಕೊಂಡಿದ್ದಾರೆ.

ಇನ್ನು ಭಯಾನಕ ವಿಷಯವೆಂದರೆ, ಉತ್ತರ ಕರ್ನಾಟಕದ ಮೂವರು ಪ್ರಬಲ ರಾಜಕಾರಣಿಗಳ ಬಳಿ ಈ ಸ್ವಾಮೀಜಿಯ ಅಶ್ಲೀಲ ವಿಡಿಯೋಗಳು ಇವೆಯಂತೆ. ಈ ವಿಡಿಯೋಗಳನ್ನು ಇಟ್ಟುಕೊಂಡೇ ಸ್ವಾಮೀಜಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ. ಆ ರಾಜಕಾರಣಿಗಳು ಹೇಳಿದಂತೆ ಸ್ವಾಮೀಜಿ ಕೇಳಬೇಕು, ಇಲ್ಲದಿದ್ದರೆ ವಿಡಿಯೋ ರಿಲೀಸ್ ಮಾಡುವ ಬೆದರಿಕೆ ಹಾಕಲಾಗುತ್ತಿದೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಇದನ್ನೂ ಓದಿ: Darshan: ಜೈಲಿನಲ್ಲಿರುವ ದರ್ಶನ್ ಭವಿಷ್ಯ? ಕೋಡಿಶ್ರೀ ಅಚ್ಚರಿಯ ಹೇಳಿಕೆ ವೈರಲ್!

ಖಾವಿಧಾರಿಗಳೋ ಅಥವಾ ಕಾಮಿಗಳೋ?

ಬಸವಣ್ಣನ ನಾಡಿನಲ್ಲಿ ‘ದಯವೇ ಧರ್ಮದ ಮೂಲವಯ್ಯ’ ಎಂಬ ಮಾತಿದೆ. ಆದರೆ ಇಂದು ‘ಕಾಮವೇ ಧರ್ಮದ ಮೂಲ’ ಎನ್ನುವಂತೆ ಕೆಲವು ಸ್ವಾಮೀಜಿಗಳು ವರ್ತಿಸುತ್ತಿದ್ದಾರೆ. ಖಾವಿ ತೊಟ್ಟು ಕಾಮಿಗಳಂತೆ ವರ್ತಿಸುವವರಿಂದ ಇಡೀ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಹಗಲಿನಲ್ಲಿ ತತ್ವಗಳ ಬಗ್ಗೆ ಭಾಷಣ ಬಿಗಿಯುವವರು ರಾತ್ರಿಯಲ್ಲಿ ಅಂಧಕಾರದ ಹಾದಿ ಹಿಡಿಯುತ್ತಿರುವುದು ನಾಚಿಕೆಗೇಡಿನ ಸಂಗತಿ.

ಸ್ವಾಮೀಜಿ ತಮ್ಮ ಇಂದ್ರಿಯಗಳನ್ನು ಗೆಲ್ಲುವಲ್ಲಿ ಸೋತಿದ್ದಾರೆ ಇನ್ನೆಲ್ಲಿಯ ʻಜಯʼ ಸಿಗಬೇಕು? ಆಸ್ತಿ ನುಂಗಿದ ಆರೋಪವೂ ಇವರ ಮೇಲಿದೆ, ಇದೀಗ ಕಾಮದ ಪುರಾಣ ಬೀದಿಗೆ ಬಂದಿದ್ದು – ಇವೆಲ್ಲವೂ ಒಬ್ಬ ವ್ಯಕ್ತಿಯ ಸರ್ವನಾಶಕ್ಕೆ ಹಿಡಿದ ಕೈಗನ್ನಡಿ.

ಸದ್ದು ಮಾಡಿದ ಸುದ್ದಿಗಳು ಅರ್ಧ ಸತ್ಯವೇಕೆ?

ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಮೇಲ್ನೋಟದ ಘಟನೆಗಳನ್ನು ಮಾತ್ರ ಹೇಳುತ್ತಿವೆ. ಆದರೆ ಇದರ ಹಿಂದಿರುವ ರಾಜಕೀಯ ಸಂಚು, ಮಹಿಳೆಯರ ಬಳಕೆ ಮತ್ತು ವಿಡಿಯೋಗಳ ಬ್ಲ್ಯಾಕ್‌ಮೇಲ್ ತಂತ್ರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸಮಾಜದ ಕಣ್ಣಿಗೆ ಮಣ್ಣೆರಚಲು ಕೆಲವರು ಈ ಸುದ್ದಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಸಲಿ ಸುದ್ದಿ ಸದಾ ಸತ್ಯವನ್ನು ಹುಡುಕುತ್ತದೆ. ಇದು ಕೇವಲ ಸ್ವಾಮೀಜಿಯ ವೈಯಕ್ತಿಕ ವಿಚಾರವಲ್ಲ, ಇದು ಧರ್ಮದ ಪಾವಿತ್ರ್ಯತೆಯ ಪ್ರಶ್ನೆ.

ಇದನ್ನೂ ಓದಿ: KERALA STORY-2: ಕಲೆಯ ಮುಖವಾಡದಡಿ ವಿಷದ ಇಂಜೆಕ್ಷನ್; ಇದು ಸಿನೆಮಾ ಅಲ್ಲ, ಯೋಜಿತ ಸಾಂಸ್ಕೃತಿಕ ಭಯೋತ್ಪಾದನೆ!

ಮಠಗಳ ಶುದ್ಧೀಕರಣದ ಕಾಲ ಬಂದಿದೆ

ಇಂತಹ ಘಟನೆಗಳು ನಡೆದಾಗ ಭಕ್ತರ ನಂಬಿಕೆ ಕುಸಿಯುತ್ತದೆ. ಯಾವ ಕೈಗಳು ಪಾದಪೂಜೆ ಮಾಡುತ್ತವೆಯೋ, ಅದೇ ಕೈಗಳು ಇಂದು ಸ್ವಾಮೀಜಿಯ ಬಟ್ಟೆ ಹಿಡಿದು ಎಳೆಯುತ್ತಿವೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಊಹಿಸಿ. ರಾಜಕಾರಣಿಗಳ ಹಂಗಿನಲ್ಲಿ ಬದುಕುವ ಸ್ವಾಮೀಜಿಗಳು ಸಮಾಜಕ್ಕೆ ಮಾದರಿಯಾಗಲು ಸಾಧ್ಯವಿಲ್ಲ. ಉತ್ತರ ಕರ್ನಾಟಕದ ಈ ಪ್ರಬಲ ಸ್ವಾಮೀಜಿ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಅಥವಾ ತಮ್ಮ ತಪ್ಪನ್ನು ಒಪ್ಪಿಕೊಂಡು ಪೀಠದ ಘನತೆಯನ್ನು ಉಳಿಸಬೇಕಿದೆ.

ಖಾವಿ ಎಂದರೆ ತ್ಯಾಗ, ಅಧ್ಯಾತ್ಮ ಮತ್ತು ಲೋಕಕಲ್ಯಾಣ. ಆದರೆ ಇಂದು ಅದು ಬ್ಲ್ಯಾಕ್‌ಮೇಲ್ ಮತ್ತು ಅನೈತಿಕತೆಯ ಅಸ್ತ್ರವಾಗುತ್ತಿದೆ. ರಾಜಕೀಯ ನಾಯಕರ ಕೈಗೊಂಬೆಯಾಗಿರುವ ಈ ಸ್ವಾಮೀಜಿಯ ಕಥೆ ಇಡೀ ನಾಡಿಗೆ ಒಂದು ಪಾಠ. ಸತ್ಯವು ಎಂದಿದ್ದರೂ ಹೊರಬರುತ್ತದೆ, ಅದು ಇಂದು ಗುಮ್ಮಟ ನಗರಿಯ ರಸ್ತೆಯಲ್ಲಿ ಬಿದ್ದಿದೆ. ಇದರ ಹಿಂದಿರುವ ದೊಡ್ಡ ತಲೆಗಳು ಯಾರು? ಆ ಮೂವರು ರಾಜಕಾರಣಿಗಳು ಯಾರು? ಎಂಬುದು ಶೀಘ್ರದಲ್ಲೇ ಬಯಲಾಗಲಿದೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments