Homeಉಪಯುಕ್ತ ಮಾಹಿತಿಇನ್ಮುಂದೆ 'ಫೈರ್‌ಮ್ಯಾನ್' ಅಲ್ಲ, 'ಫೈರ್ ಫೈಟರ್': ಅಗ್ನಿಶಾಮಕ ದಳಕ್ಕೆ ಮಹಿಳೆಯರ ಎಂಟ್ರಿ!

ಇನ್ಮುಂದೆ ‘ಫೈರ್‌ಮ್ಯಾನ್’ ಅಲ್ಲ, ‘ಫೈರ್ ಫೈಟರ್’: ಅಗ್ನಿಶಾಮಕ ದಳಕ್ಕೆ ಮಹಿಳೆಯರ ಎಂಟ್ರಿ!

ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಲಿಂಗ ಸಮಾನತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ದಶಕಗಳಿಂದ ಬಳಕೆಯಲ್ಲಿದ್ದ ‘ಫೈರ್‌ಮ್ಯಾನ್’ ಹುದ್ದೆಯ ಹೆಸರನ್ನು ಇತಿಹಾಸದ ಪುಟಗಳಿಗೆ ಸೇರಿಸಿದೆ. ಇನ್ಮುಂದೆ ಈ ಹುದ್ದೆಯನ್ನು ‘ಫೈರ್ ಫೈಟರ್’ (Fire Fighter) ಎಂದು ಕರೆಯಲಾಗುವುದು.

ಬದಲಾವಣೆಯ ಹಿಂದಿನ ಅಸಲಿ ಉದ್ದೇಶವೇನು?

ಕೇವಲ ಹೆಸರಿನ ಬದಲಾವಣೆ ಇದಲ್ಲ; ಇದು ಮಹಿಳಾ ಸಬಲೀಕರಣದತ್ತ ಇಟ್ಟ ದೊಡ್ಡ ಹೆಜ್ಜೆ. ಕೇಂದ್ರ ಗೃಹ ಸಚಿವಾಲಯದ (SFAC) ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಪುರುಷ ಪ್ರಧಾನವೆಂದೇ ಬಿಂಬಿತವಾಗಿದ್ದ ಅಗ್ನಿಶಾಮಕ ಇಲಾಖೆಯಲ್ಲಿ ‘ಫೈರ್‌ಮ್ಯಾನ್’ಗಳಿರುತ್ತಿದ್ದರು, ಈಗ ಮಹಿಳೆಯರಿಗೂ ಸಮಾನ ಅವಕಾಶ ನೀಡಲು ಈ ‘ಲಿಂಗ ತಟಸ್ಥ’ (Gender Neutral) ಹೆಸರನ್ನು ನಾಮಕರಣ ಮಾಡಲಾಗಿದೆ.

ಮಹಿಳೆಯರಿಗೆ 10% ಮೀಸಲಾತಿ ಫಿಕ್ಸ್!

ಕೇವಲ ಹೆಸರಿಗಷ್ಟೇ ಸೀಮಿತವಾಗದೆ, ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಇನ್ಮುಂದೆ ಇಲಾಖೆಯ ಅಗ್ನಿಶಾಮಕ (ಫೈರ್ ಫೈಟರ್) ಮತ್ತು ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 10ರಷ್ಟು ಮೀಸಲಾತಿ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದಾಗಿ ಧೈರ್ಯವಂತ ಮಹಿಳೆಯರು ಅಗ್ನಿ ದುರಂತಗಳ ಸಂದರ್ಭದಲ್ಲಿ ಸಾಹಸ ಮೆರೆಯಲು ಅಗ್ನಿಶಾಮಕ ಪಡೆಗೆ ಸೇರಲು ದಾರಿ ಸುಗಮವಾಗಿದೆ.

ಇದನ್ನೂ ಓದಿ: ಪಾಪ ಕೂಪದ ಕ್ವೀನ್; ಎಫ್‌ಸ್ಟೀನ್ ಸಾಮ್ರಾಜ್ಯದ ಅಸಲಿ ಸೂತ್ರಧಾರಿ ಈಕೆಯೇ!

ಹುದ್ದೆಗಳ ಹೊಸ ನಾಮಕರಣ ಹೀಗಿದೆ:

ಸರ್ಕಾರದ ಆದೇಶದಂತೆ 2013ರ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಪದನಾಮಗಳನ್ನು ಈ ಕೆಳಗಿನಂತೆ ಬದಲಿಸಲಾಗಿದೆ:

  • ಫೈರ್‌ಮ್ಯಾನ್ (Fireman) ಇನ್ಮುಂದೆ ಫೈರ್ ಫೈಟರ್ (Fire Fighter)
  • ಲೀಡಿಂಗ್ ಫೈರ್‌ಮ್ಯಾನ್ (Leading Fireman) ಇನ್ಮುಂದೆ ಲೀಡಿಂಗ್ ಫೈರ್ ಫೈಟರ್ (Leading Fire Fighter)

ಇಲಾಖೆಯ ಇಂದಿನ ಚಿತ್ರಣ:

1964ರಿಂದಲೂ ಜನ-ಜಾನುವಾರುಗಳ ರಕ್ಷಣೆ, ಪ್ರಕೃತಿ ವಿಕೋಪ ಮತ್ತು ಅಗ್ನಿ ದುರಂತಗಳ ಸಮಯದಲ್ಲಿ ಕನ್ನಡಿಗರ ಆಪದ್ಬಾಂಧವನಂತೆ ಕೆಲಸ ಮಾಡುತ್ತಿರುವ ಈ ಇಲಾಖೆಯ ಬಲ ಹೀಗಿದೆ:

  • ಒಟ್ಟು ಮಂಜೂರಾದ ಹುದ್ದೆಗಳು: 7159
  • ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರು: 5272 ಅಧಿಕಾರಿ ಮತ್ತು ಸಿಬ್ಬಂದಿ.

ಈ ಹೊಸ ಬದಲಾವಣೆಯು ಇಲಾಖೆಗೆ ಹೊಸ ಚೈತನ್ಯ ನೀಡಲಿದ್ದು, ಲಿಂಗ ಭೇದವಿಲ್ಲದೆ ಕಠಿಣ ಸವಾಲುಗಳನ್ನು ಎದುರಿಸಲು ನಮ್ಮ ‘ಫೈರ್ ಫೈಟರ್’ಗಳು ಸಜ್ಜಾಗಲಿದ್ದಾರೆ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments