Swamiji Scandal: ಧರ್ಮ, ಅಧ್ಯಾತ್ಮ ಮತ್ತು ಭವಿಷ್ಯದ ನುಡಿಗಳ ಮೂಲಕ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿದ್ದ ಪೀಠವೊಂದು ಈಗ ‘ಕಾಮಕಾಂಡ’ದ ಸುಳಿಗೆ ಸಿಲುಕಿದೆ. ಹಳ್ಳಿಯಿಂದ ದಿಲ್ಲಿಯವರೆಗಿನ ರಾಜಕಾರಣಿಗಳ ಭವಿಷ್ಯ ನುಡಿಯುತ್ತಿದ್ದ, ಮಳೆ-ಬೆಳೆ, ಯುದ್ಧ-ಶಾಂತಿ, ಅಷ್ಟೇ ಏಕೆ ಜಾಗತಿಕ ಸಾಂಕ್ರಾಮಿಕ ರೋಗಗಳ ಬಗ್ಗೆಯೂ ‘ಪಕ್ಕಾ’ ಮುನ್ಸೂಚನೆ ನೀಡುತ್ತಿದ್ದ ಹಳೆ ಮೈಸೂರು ಭಾಗದ ಖ್ಯಾತ ಸ್ವಾಮೀಜಿಯೊಬ್ಬರದ್ದು ಎನ್ನಲಾದ ಆಕ್ಷೇಪಾರ್ಹ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.
ಭವಿಷ್ಯ ಹೇಳುವ ನಾಲಿಗೆಯ ಹಿಂದೆ ಅಡಗಿದೆಯೇ ಕರಾಳ ಮುಖ?
ಈ ಸ್ವಾಮೀಜಿ ಸಾಮಾನ್ಯದವರಲ್ಲ. ಇವರು ಬಾಯಿ ಬಿಟ್ಟರೆ ಸಾಕು, ಅದು ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾ? ಚಂದನವನದ ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗುತ್ತಾರಾ? ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತಾ? ಈಗ ನಡೆಯುತ್ತಿರುವ ಇಸ್ರೇಲ್- ಇರಾನ್ ಯುದ್ಧದ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದಾರಂತೆ! ಹೀಗೆ ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡೋದ್ರಲ್ಲಿ ಇವರು ಫುಲ್ ಫೇಮಸ್. ವಿಶೇಷವಾಗಿ ಕೊರೊನಾ ಕಾಲದಲ್ಲಿ ಇವರು ಹೇಳಿದ ಮುನ್ಸೂಚನೆಗಳು ನಿಜವಾಗಿದ್ದವು ಎಂದು ನಂಬುವ ಒಂದು ದೊಡ್ಡ ಭಕ್ತ ಸಮೂಹವೇ ಇವರ ಹಿಂದೆ ಇದೆ. ಆದರೆ, ಈಗ ಇವರದ್ದೇ ಎನ್ನಲಾದ ‘ಹಸಿಬಿಸಿ’ ವಿಡಿಯೋ ಲೀಕ್ ಆಗಿರುವುದು ಅಧ್ಯಾತ್ಮ ಲೋಕದ ನೈತಿಕತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಭವಿಷ್ಯ ಹೇಳುವ ನಾಲಿಗೆಯ ಹಿಂದೆ ಇಷ್ಟೊಂದು ಕರಾಳ ಕಾಮದ ಹಸಿವು ಅಡಗಿದೆಯೇ ಎಂಬ ಚರ್ಚೆ ಶುರುವಾಗಿದೆ.
‘ಗ್ಯಾರಂಟಿ ನ್ಯೂಸ್’ ಬಿತ್ತರಿಸಿದ ಆ ಒಂದು ವಿಡಿಯೋ ಬಾಂಬ್!
ಈ ಗಂಭೀರ ವಿಷಯವನ್ನು ಮೊದಲು ಮುನ್ನೆಲೆಗೆ ತಂದಿದ್ದು ‘ಗ್ಯಾರಂಟಿ ನ್ಯೂಸ್’. ಈ ವಾಹಿನಿಯಲ್ಲಿ ಬಿತ್ತರವಾದ ವರದಿಯ ನಂತರ ಇಡೀ ರಾಜ್ಯದ ಭಕ್ತ ಸಮೂಹ ತಲ್ಲಣಗೊಂಡಿದೆ. ವಿಡಿಯೋದಲ್ಲಿರುವ ದೃಶ್ಯಗಳು ಅತ್ಯಂತ ಆಕ್ಷೇಪಾರ್ಹವಾಗಿದ್ದು, ಮಠದ ಪಾವಿತ್ರ್ಯತೆಗೆ ಮತ್ತು ಕಾವಿ ವಸ್ತ್ರದ ಘನತೆಗೆ ಚ್ಯುತಿ ತರುವಂತಿವೆ. ಕಾನೂನಾತ್ಮಕ ತೊಂದರೆ ತಪ್ಪಿಸಲು ಹೆಸರನ್ನು ನೇರವಾಗಿ ಬಹಿರಂಗಪಡಿಸದಿದ್ದರೂ, ಆ ಹಸಿಬಿಸಿ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಅದು ನೋಡಲು ಯೋಗ್ಯವಲ್ಲದ್ದು ಎನ್ನುವ ಕಾರಣಕ್ಕೆ ವಿಡಿಯೋ ಬ್ಲರ್ ಮಾಡಿ ತೋರಿಸಲಾಗಿದೆ. ಅದನ್ನು ಗಮನಿಸಿದರೆ ಅದು ಯಾವ ‘ದೊಡ್ಡವರು’ ಎಂಬುದು ಜನಸಾಮಾನ್ಯರಿಗೆ ಈಗಾಲೇ ಅರ್ಥವಾಗಿದೆ.
ಇದನ್ನೂ ಓದಿ: Swamiji Scandal: ಮುಖವಾಡ ಕಳಚಿದ ಪಂಚ ಪುರಾವೆ; ಅಸಲಿ ಸುದ್ದಿ ಕೈಗೆ ಸಿಕ್ಕಿವೆ ಸ್ಫೋಟಕ ಸಾಕ್ಷ್ಯಗಳು!
ಉತ್ತರ ಕರ್ನಾಟಕದ ಪ್ರಕರಣದ ನೆರಳು ಮತ್ತು ‘ಸಂಧಾನ’ ರಾಜಕೀಯ
ಈ ಬೆಳವಣಿಗೆಯ ಬೆನ್ನಲ್ಲೇ ಉತ್ತರ ಕರ್ನಾಟಕದ ಪ್ರಭಾವಿ ಸ್ವಾಮಿಯೊಬ್ಬರ ಹಳೆಯ ಪ್ರಕರಣವೂ ಮತ್ತೆ ಮುನ್ನೆಲೆಗೆ ಬರುತ್ತಿದೆ. ಆ ಪ್ರಕರಣದಲ್ಲಿ ಕೇಂದ್ರ ಸಚಿವರು, ಸ್ಥಳೀಯ ಶಾಸಕರು ಹಾಗೂ ಸ್ವಜಾತಿಯ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯಸ್ತಿಕೆ ವಹಿಸಿ ‘ರಾಜಿ ಸಂಧಾನ’ ಮಾಡಿಸಿದ್ದರು ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಅಂದು ಹಣ ಮತ್ತು ಅಧಿಕಾರದ ಬಲದಿಂದ ಬಾಯಿ ಮುಚ್ಚಿಸಲಾಗಿತ್ತು. ಆದರೆ ಆ ಸಂಧಾನ ಈಗ ಬೂದಿ ಮುಚ್ಚಿದ ಕೆಂಡದಂತಿದೆ.
ಮೂಲಗಳ ಪ್ರಕಾರ, ಆ ಹಳೆಯ ಪ್ರಕರಣದ ಸಂತ್ರಸ್ತ ಮಹಿಳೆ ಯಾವುದೇ ಕ್ಷಣದಲ್ಲಿ ವಿಡಿಯೋ ಸಾಕ್ಷಿಯೊಂದಿಗೆ ಮಾಧ್ಯಮಗಳ ಮುಂದೆ ಬರುವ ಸಾಧ್ಯತೆಯಿದೆ. ಏಕೆಂದರೆ ಸಂಧಾನದ ವೇಳೆ 80 ಲಕ್ಷ ನೀಡುವುದಾಗಿ ಸ್ವಾಮೀಜಿ ಒಪ್ಪಿಕೊಂಡಿದ್ದಾರಂತೆ ಆದರೆ ಈಗ 25 ಲಕ್ಷ ಮಾತ್ರ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಬಲ್ಲ ಮೂಲಗಳು ತಿಳಿಸಿವೆ. ಇನ್ನೂಳಿದ ಹಣ ಬೇಗ ನೀಡದಿದ್ದರೆ ಆ ಮಹಿಳೆ ಮತ್ತೆ ಸಿಡಿದೇಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಇದು ಅಷ್ಟಕ್ಕೆ ಮುಗಿಯುವಂತದ್ದೂ ಅಲ್ಲ, ಬಾಗಲಕೋಟೆ ಜಿಲ್ಲೆಯ ಮಾಜಿ ಸಚಿವರು, ಹಾಲಿ ಶಾಸಕರು ಮತ್ತು ವಿಜಯಪುರ ಜಿಲ್ಲೆಯ ಶಾಸಕರ ಬಳಿಯೂ ಆ ಸ್ವಾಮೀಜಿಯ ಹಸಿಬಿಸಿ ವಿಡಿಯೋಗಳು ಇವೆ ಎಂಬ ಗುಸುಗುಸು ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋಗಳು ಸಾರ್ವಜನಿಕವಾದರೆ ಉತ್ತರ ಕರ್ನಾಟಕದ ಧಾರ್ಮಿಕ ವಲಯದಲ್ಲೂ ಸುನಾಮಿ ಏಳುವುದರಲ್ಲಿ ಸಂಶಯವಿಲ್ಲ.
ರಾಜಕಾರಣಿಗಳ ನಿದ್ದೆಗೆಡಿಸಿದ ‘ಕಿಂಗ್ ಮೇಕರ್’ ಪತನ!
ಹಳೆ ಮೈಸೂರು ಭಾಗದ ಈ ಸ್ವಾಮೀಜಿ ಕೇವಲ ಧಾರ್ಮಿಕ ಗುರುವಾಗಿರದೆ, ರಾಜಕಾರಣಿಗಳ ಪಾಲಿಗೆ ‘ಕಿಂಗ್ ಮೇಕರ್’ ರೀತಿ ಗುರುತಿಸಿಕೊಂಡಿದ್ದರು. ಅನೇಕ ರಾಜಕಾರಣಿಗಳು ತಮ್ಮ ಅಧಿಕಾರ ಉಳಿಸಿಕೊಳ್ಳಲು ಅಥವಾ ಪಡೆಯಲು ಇವರ ಕಾಲಿಗೆ ಬೀಳುತ್ತಿದ್ದರು. ಈಗ ಸ್ವಾಮೀಜಿಯ ವಿಡಿಯೋ ಲೀಕ್ ಆಗಿರುವುದು ಆ ರಾಜಕಾರಣಿಗಳಿಗೂ ನಡುಕ ಹುಟ್ಟಿಸಿದೆ. ಒಂದು ವೇಳೆ ಈ ಪ್ರಕರಣ ತನಿಖೆಯ ಹಂತಕ್ಕೆ ಹೋದರೆ, ಮಠದ ಒಳಗಿನ ಇನ್ನೂ ಹತ್ತಾರು ಅಕ್ರಮಗಳು ಹೊರಬರಬಹುದು ಎಂಬ ಆಂತರಿಕ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: Sensational: ಸದ್ದು ಮಾಡುತ್ತಿರೋ ವಿವಾದದ ನಡುವೆ ಶ್ರೀಗಳ ‘ಹುನ್ನಾರ’ದ ಪೋಸ್ಟ್: ಏನಿದು ಒಳಗಿನ ಮರ್ಮ?
ಮೌನಕ್ಕೆ ಶರಣಾದ ಮಠ: ಸತ್ಯಾಂಶ ಹೊರಬರುವುದೇ?
ಯಾವಾಗಲೂ ಹತ್ತಾರು ಕ್ಯಾಮೆರಾಗಳ ಮುಂದೆ ಭವಿಷ್ಯ ನುಡಿಯುತ್ತಾ ಸುದ್ದಿಯಲ್ಲಿದ್ದ ಸ್ವಾಮೀಜಿ ಈಗ ಈ ವಿಡಿಯೋ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಮಠದ ಭಕ್ತರು ಈ ವಿಡಿಯೋ ‘ನಕಲಿ’ ಅಥವಾ ‘ತೇಜೋವಧೆ’ ಮಾಡುವ ಸಂಚು ಎಂದು ವಾದಿಸುತ್ತಿದ್ದರೂ, ವಿಡಿಯೋದ ದೃಶ್ಯಗಳು ಮಾತ್ರ ಬೇರೆಯದೇ ಕಥೆ ಹೇಳುತ್ತಿವೆ. ಧರ್ಮದ ಹೆಸರಿನಲ್ಲಿ ಜನರನ್ನು ನಂಬಿಸಿ, ತೆರೆಯ ಮರೆಯಲ್ಲಿ ಇಂತಹ ಕಾಮಕಾಂಡಗಳಲ್ಲಿ ತೊಡಗುವುದು ಎಷ್ಟರ ಮಟ್ಟಿಗೆ ಸರಿ ಎಂಬ ತೀಕ್ಷ್ಣ ಪ್ರಶ್ನೆಗಳು ಕೇಳಿಬರುತ್ತಿವೆ.
ಸಂಧಾನದ ಹಾದಿಯೋ ಅಥವಾ ಕಾನೂನು ಹೋರಾಟವೋ?
ಉತ್ತರ ಕರ್ನಾಟಕದ ಸ್ವಾಮೀಜಿ ಪ್ರಕರಣದಂತೆ ಇಲ್ಲೂ ಕೂಡ ಪ್ರಭಾವಿ ವ್ಯಕ್ತಿಗಳು ರಾಜಿ ಸಂಧಾನಕ್ಕೆ ಇಳಿಯುತ್ತಾರಾ? ಅಥವಾ ಸತ್ಯಾಂಶ ಹೊರಬರುತ್ತದಾ? ಎಂಬುದು ಕುತೂಹಲ ಮೂಡಿಸಿದೆ. ಆದರೆ, ಈಗಿನ ಡಿಜಿಟಲ್ ಯುಗದಲ್ಲಿ ವಿಡಿಯೋಗಳನ್ನು ಅಳಿಸಿ ಹಾಕುವುದು ಅಷ್ಟು ಸುಲಭವಲ್ಲ. ಬಾಗಲಕೋಟೆ ಮತ್ತು ವಿಜಯಪುರದ ಜನಪ್ರತಿನಿಧಿಗಳ ಬಳಿ ಇರುವ ವಿಡಿಯೋಗಳು ಯಾವಾಗ ಸ್ಫೋಟಗೊಳ್ಳುತ್ತವೆಯೋ ಎಂಬ ಭಯ ಸದ್ಯಕ್ಕೆ ಮಠದ ಆಪ್ತ ವಲಯವನ್ನು ಕಾಡುತ್ತಿದೆ.
ಮುಖವಾಡ ಕಳಚುವ ಕಾಲ ಬಂದಿದೆ!
ಧರ್ಮಗುರುಗಳು ಸಮಾಜಕ್ಕೆ ಮಾರ್ಗದರ್ಶಕರಾಗಿರಬೇಕು. ಆದರೆ ಅಧಿಕಾರ, ಹಣ ಮತ್ತು ಕಾಮದ ಅಮಲಿನಲ್ಲಿ ಮಠದ ಘನತೆಯನ್ನು ಮಣ್ಣುಪಾಲು ಮಾಡುತ್ತಿರುವುದು ದುರದೃಷ್ಟಕರ. ಈ ‘ಕಾಮಕಾಂಡ’ದ ವಿಡಿಯೋ ಅಸಲಿಯೇ ಆಗಿದ್ದರೆ, ಇಂತಹ ನಕಲಿ ಸ್ವಾಮೀಜಿಗಳ ಮುಖವಾಡ ಕಳಚಲೇಬೇಕು. ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟವಾಡುವ ಇಂತಹ ವ್ಯಕ್ತಿಗಳಿಗೆ ಕಾನೂನು ಶಿಕ್ಷೆಯಾಗಬೇಕು. ಅಸಲಿ ಸುದ್ದಿಯ ತಂಡವು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಪ್ರತಿ ಅಪ್‌ಡೇಟ್‌ಗಳನ್ನು ನಿಮ್ಮ ಮುಂದೆ ಇಡಲಿದೆ.
⚠️ ಸೂಚನೆ: ಈ ಲೇಖನವು ಸೋಷಿಯಲ್ ಮೀಡಿಯಾದಲ್ಲಿ ಲಭ್ಯವಿರುವ ಮಾಹಿತಿ ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿದೆ. ನಾವು ಯಾವುದೇ ವ್ಯಕ್ತಿ ಅಥವಾ ಧರ್ಮದ ಹೆಸರನ್ನು ಉದ್ದೇಶಪೂರ್ವಕವಾಗಿ ಬಳಸಿರುವುದಿಲ್ಲ. ಇದು ಕೇವಲ ಜನಜಾಗೃತಿಗಾಗಿ ಪ್ರಕಟಿಸಿದ ವರದಿಯಾಗಿದೆ. — ಅಸಲಿ ಸುದ್ದಿ.

