RBI Updates: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳು ಎಷ್ಟು ವೇಗವಾಗಿ ಬೆಳೆಯುತ್ತಿವೆಯೋ, ಅಷ್ಟೇ ವೇಗವಾಗಿ ಆನ್ಲೈನ್ ವಂಚನೆಗಳೂ ಹೆಚ್ಚುತ್ತಿವೆ. ಸೈಬರ್ ಕಳ್ಳರ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡ ಸಾಮಾನ್ಯ ಜನರ ನೆರವಿಗೆ ಈಗ ಭಾರತೀಯ ರಿಸರ್ವ ಬ್ಯಾಂಕ್ (RBI) ದಾವಿಸಿ ಬಂದಿದೆ. ಫೆಬ್ರವರಿ 2026ರ ಹೊಸ ಅಪ್ಡೇಟ್ನಂತೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಜಾರಿಗೆ ಬರಲಿವೆ. ಆ ಪ್ರಮುಖ ಅಂಶಗಳು ಇಲ್ಲಿವೆ:
1. ವಂಚನೆ ನಡೆದರೆ 25,000 ರೂಪಾಯಿವರೆಗೆ ಪರಿಹಾರ!
ಇಲ್ಲಿಯವರೆಗೆ ನಿಮ್ಮ ಅಜಾಗರೂಕತೆಯಿಂದ (ಓಟಿಪಿ ಹಂಚುವುದು ಅಥವಾ ಲಿಂಕ್ ಕ್ಲಿಕ್ ಮಾಡುವುದು) ಹಣ ಕಳೆದುಕೊಂಡರೆ ಬ್ಯಾಂಕ್ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಈಗ ಬಂದಿರುವ RBI Updates ಪ್ರಕಾರ, 50,000 ರೂಪಾಯಿಯೊಳಗಿನ ಸಣ್ಣ ಮೊತ್ತದ ವಂಚನೆ ನಡೆದರೆ ಗ್ರಾಹಕರಿಗೆ ಪರಿಹಾರ ಸಿಗಲಿದೆ.
- ಗರಿಷ್ಠ 25,000 ರೂಪಾಯಿವರೆಗೆ ಪರಿಹಾರ ದೊರೆಯಬಹುದು.
- ಉದಾಹರಣೆಗೆ ನೀವು 10,000 ರೂಪಾಯಿ ಕಳೆದುಕೊಂಡರೆ, ಈ ಹೊಸ ರೂಲ್ಸ್ ಪ್ರಕಾರ ನಿಮ್ಮ ನಷ್ಟ ಕೇವಲ 15% (1500 ರೂಪಾಯಿ) ಮಾತ್ರ. ಉಳಿದ ಹಣವನ್ನು ಬ್ಯಾಂಕ್ ಮತ್ತು ಆರ್ಬಿಐ ಭರಿಸಲಿವೆ.
- ಸೂಚನೆ: ವಂಚನೆ ನಡೆದ 3 ದಿನದ ಒಳಗಾಗಿ ಬ್ಯಾಂಕಿಗೆ ದೂರು ನೀಡಿದರೆ ಮಾತ್ರ ಈ ಸೌಲಭ್ಯ ಸಿಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Investment Tips: ಎಫ್ಡಿಗಿಂತಲೂ ಹೆಚ್ಚಿನ ಲಾಭ ಬೇಕೇ? ಈ 5 ಕಡೆ ಹಣ ಹೂಡಿಕೆಯಿಂದ ಭರ್ಜರಿ ರಿಟರ್ನ್ಸ್!
ದುಡ್ಡು ಕಳುಹಿಸಿದ ತಕ್ಷಣ ವಂಚನೆ ಎಂದು ತಿಳಿದರೂ ಅದನ್ನು ತಡೆಯಲು ಇಲ್ಲಿಯವರೆಗೆ ಸಾಧ್ಯವಿರಲಿಲ್ಲ. ಆದರೆ ಆರ್ಬಿಐ ಈಗ ‘ಕೂಲಿಂಗ್ ಪೀರಿಯಡ್’ ವ್ಯವಸ್ಥೆ ತರುತ್ತಿದೆ.
- ಮೊದಲ ಬಾರಿಗೆ ಯಾರಿಗಾದರೂ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುವಾಗ ಹಣ ತಕ್ಷಣ ಜಮೆಯಾಗದೆ ಸ್ವಲ್ಪ ಸಮಯ ತಡೆಹಿಡಿಯಲ್ಪಡುತ್ತದೆ.
- ಈ ಗ್ಯಾಪ್ನಲ್ಲಿ ನೀವು ಮೋಸ ಹೋಗಿರುವುದು ತಿಳಿದರೆ ತಕ್ಷಣ ಟ್ರಾನ್ಸಾಕ್ಷನ್ ಕ್ಯಾನ್ಸಲ್ ಮಾಡಬಹುದು, ಆಗ ಆ ಹಣ ಕಳ್ಳನ ಖಾತೆಗೆ ಹೋಗದೆ ಸುರಕ್ಷಿತವಾಗಿ ನಿಮಗೆ ವಾಪಸ್ ಸಿಗುತ್ತದೆ.
3. ಅಡಮಾನವಿಲ್ಲದೆ 20 ಲಕ್ಷ ರೂಪಾಯಿ ಸಾಲ!
ಸಣ್ಣ ಉದ್ಯಮಿಗಳಿಗೆ ಇದು ಬಂಪರ್ ಕೊಡುಗೆ. ಈ ಮೊದಲು ಆಸ್ತಿ ಪತ್ರ ಅಥವಾ ಶೂರಿಟಿ ಇಲ್ಲದೆ ಕೇವಲ 10 ಲಕ್ಷ ರೂಪಾಯಿವರೆಗೆ ಸಾಲ ಸಿಗುತ್ತಿತ್ತು.
- ಈಗ ಈ ಮಿತಿಯನ್ನು 20 ಲಕ್ಷ ರೂಪಾಯಿಗೆ ಏರಿಸಲಾಗಿದೆ.
- ಈ ನಿಯಮವು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದ್ದು, ಸಣ್ಣ ವ್ಯಾಪಾರಿಗಳು ಮತ್ತು ಉತ್ಪಾದಕರಿಗೆ ತಮ್ಮ ಉದ್ಯಮ ಬೆಳೆಸಲು ಇದು ವರದಾನವಾಗಲಿದೆ.
4. ರಿಕವರಿ ಏಜೆಂಟ್ ಗಳ ಟಾರ್ಚರ್ ಗೆ ಫುಲ್ ಸ್ಟಾಪ್!
ಸಾಲ ಮರುಪಾವತಿ ಸ್ವಲ್ಪ ತಡವಾದರೂ ರಿಕವರಿ ಏಜೆಂಟ್ ಗಳು ಮನೆಗೆ ಬಂದು ಗಲಾಟೆ ಮಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದಕ್ಕೆ ಆರ್ಬಿಐ ಕಠಿಣ ಕಾನೂನು ತಂದಿದೆ.
ಏಜೆಂಟ್ ಗಳು ಬೆಳಿಗ್ಗೆ 8 ಗಂಟೆ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕರೆ ಮಾಡುವ ಹಾಗಿಲ್ಲ. ಒಂದು ವೇಳೆ ಏಜೆಂಟ್ ನಿಯಮ ಮೀರಿ ವರ್ತಿಸಿದರೆ ನೇರವಾಗಿ ಬ್ಯಾಂಕ್ ಹೊಣೆಯಾಗುತ್ತದೆ ಮತ್ತು ಬ್ಯಾಂಕಿಗೆ ಆರ್ಬಿಐ ದಂಡ ವಿಧಿಸಲಿದೆ.
ಇದನ್ನೂ ಓದಿ: Bank Jobs: ಪದವಿದರರಿಗೆ ಗುಡ್ ನ್ಯೂಸ್: ನೋ ಎಕ್ಸಾಮ್, ಲಕ್ಷಗಳಲ್ಲಿ ಸಂಬಳದ ಕೆಲಸ!
ಹಿರಿಯ ನಾಗರಿಕರ ಖಾತೆಯಿಂದ ಹಣ ವರ್ಗಾವಣೆಯಾಗುವಾಗ ಹೆಚ್ಚಿನ ಭದ್ರತೆಗಾಗಿ ಬರೀ ಪಿನ್ ನಂಬರ್ ಮಾತ್ರವಲ್ಲದೆ, ಫೇಸ್ ಐಡಿ ಅಥವಾ ವಾಯ್ಸ್ ರೆಕಗ್ನಿಷನ್ (ಧ್ವನಿ ಗುರುತಿಸುವಿಕೆ) ತರಲು ಆರ್ಬಿಐ ಯೋಜಿಸುತ್ತಿದೆ.
ಗಮನಿಸಿ: ಆರ್ಬಿಐ ತರುತ್ತಿರುವ ಈ ಬದಲಾವಣೆಗಳು ಬ್ಯಾಂಕ್ ಗ್ರಾಹಕರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಲಿವೆ. ಒಂದು ವೇಳೆ ವಂಚನೆ ನಡೆದರೆ ಗಾಬರಿಯಾಗದೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಅಥವಾ ಬ್ಯಾಂಕಿಗೆ ದೂರು ನೀಡಿ.

