ಅಸಲಿ ಸುದ್ದಿ ಓದುಗರೇ ನಮಸ್ಕಾರ, ನೀವು ನಿರುದ್ಯೋಗದ ಸಮಸ್ಯೆಯಿಂದ ಕಂಗಾಲಾಗಿದ್ದೀರಾ? ಸ್ವಂತ ಕಾಲಿನ ಮೇಲೆ ನಿಂತು ಗೌರವಯುತ ಬದುಕು ಕಟ್ಟಿಕೊಳ್ಳುವ ಕನಸು ಇದೆಯೇ? ಹಾಗಿದ್ದಲ್ಲಿ, ನಿಮ್ಮ ಕನಸುಗಳ ಸ್ಟೀರಿಂಗ್ ಹಿಡಿಯಲು ಕರ್ನಾಟಕ ಸರ್ಕಾರ ಸುವರ್ಣ ಅವಕಾಶ ನೀಡುತ್ತಿದೆ. ಹೌದು, 2026-27ನೇ ಸಾಲಿನ PM-AJAY ಯೋಜನೆಯಡಿ, ಪರಿಶಿಷ್ಟ ಜಾತಿ (SC) ಸಮುದಾಯದ ಯುವಕರಿಗಾಗಿ KSRTC (ಕೆ.ಎಸ್.ಆರ್.ಟಿ.ಸಿ ) ವತಿಯಿಂದ ಉಚಿತ ಭಾರಿ ವಾಹನ ಚಾಲನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ತರಬೇತಿ ಅಷ್ಟೇ ಅಲ್ಲ, ತರಬೇತಿಯ ಅವಧಿಯಲ್ಲಿ ನಿಮಗೆ ರಾಜಾತಿಥ್ಯವೂ ಸಿಗಲಿದೆ!
KSRTCಯ ಈ ಯೋಜನೆಯ ವಿಶೇಷತೆಗಳೇನು?
- ಸಂಪೂರ್ಣ ಉಚಿತ: ಒಂದು ತಿಂಗಳ ತರಬೇತಿಗೆ ನೀವು ಒಂದು ರೂಪಾಯಿ ಕೂಡ ನೀಡಬೇಕಿಲ್ಲ.
- ಊಟ ಮತ್ತು ವಸತಿ: ದೂರದ ಊರಿನಿಂದ ಬರುವವರಿಗೆ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆ ಇರಲಿದೆ.
- ಉಚಿತ ಲೈಸೆನ್ಸ್: ತರಬೇತಿ ಮುಗಿದ ನಂತರ ಭಾರೀ ವಾಹನ ಚಾಲನಾ ಪರವಾನಗಿ (HTV DL) ಪಡೆಯಲು ಸರ್ಕಾರವೇ ನೆರವಾಗಲಿದೆ.
- ನುರಿತ ತರಬೇತಿ: ಕೆಎಸ್‌ಆರ್‌ಟಿಸಿಯ ಅನುಭವಿ ಚಾಲಕರಿಂದಲೇ ನೀವು ಡ್ರೈವಿಂಗ್ ಕಲಿಯಬಹುದು.
KSRTCಯ ಈ ಯೋಜನೆಗೆ ಯಾರೆಲ್ಲಾ ಅರ್ಹರು?
1. ಅಭ್ಯರ್ಥಿಗಳು ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿದವರಾಗಿರಬೇಕು.
2. ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.
3. ಕನಿಷ್ಠ 8ನೇ ಅಥವಾ 10ನೇ ತರಗತಿ ಪಾಸಾಗಿರಬೇಕು.
4. ಈಗಾಗಲೇ ನಿಮ್ಮ ಬಳಿ ಲಘು ವಾಹನ (LMV) ಲೈಸೆನ್ಸ್ ಇದ್ದರೆ ಉತ್ತಮ.
5. ಈ ಹಿಂದೆ ಇಂತಹ ಉಚಿತ ತರಬೇತಿ ಪಡೆದಿರಬಾರದು.
ಇದನ್ನೂ ಓದಿ: Railway Jobs: 10th ಪಾಸ್ ಆಗಿದ್ರೆ ಸಾಕು; 32,000ರೂ ವರೆಗೆ ಸಂಬಳ ಗ್ಯಾರಂಟಿ!
ಅರ್ಜಿ ಸಲ್ಲಿಸುವ 3 ಸುಲಭ ವಿಧಾನಗಳು:
1. ಫೋನ್ ಮೂಲಕ (ತೀರಾ ಸರಳ): ಈಗ ನೀವು ಕೇವಲ ಒಂದು ಫೋನ್ ಕಾಲ್ ಮೂಲಕ ರಿಜಿಸ್ಟ್ರೇಶನ್ ಮಾಡಬಹುದು! ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಸಂಖ್ಯೆಗೆ ಕರೆ ಮಾಡಿ ನಿಮ್ಮ ಹೆಸರು, ಆಧಾರ್ ಸಂಖ್ಯೆ ಮತ್ತು ವಿಳಾಸ ನೀಡಿದರೆ ಸಾಕು. ಅವರು ನಿಮಗೆ ಕನ್ಫರ್ಮೇಷನ್ ನಂಬರ್ ನೀಡುತ್ತಾರೆ.
2. ಆನ್‌ಲೈನ್ ಮೂಲಕ: KSRTC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ‘PM-AJAY Free Training’ ಲಿಂಕ್ ಕ್ಲಿಕ್ ಮಾಡಿ. ನಿಮ್ಮ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.
3. ಆಫ್‌ಲೈನ್ ಮೂಲಕ: ನಿಮ್ಮ ಹತ್ತಿರದ KSRTC ಡಿಪೋ ಅಥವಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು.
ಇದನ್ನೂ ಓದಿ: PMFME: ರೈತರಿಗೆ ಗುಡ್ ನ್ಯೂಸ್; 15 ಲಕ್ಷ ರೂ. ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ.
ಹಾಸನ, ಹೊಳಲ್ಕೆರೆ, ಚಿಕ್ಕಮಗಳೂರು, ಮಾಲೂರು ಮತ್ತು ಮಳವಳ್ಳಿಯ ತರಬೇತಿ ಕೇಂದ್ರಗಳಲ್ಲಿ ಈ ಸೌಲಭ್ಯ ಇರಲಿದೆ.
ಗಮನಿಸಿ – ಕೊನೆಯ ದಿನಾಂಕ!
ಈ ಯೋಜನೆಗೆ ಅರ್ಜಿ ಸಲ್ಲಿಸಲು ಫೆಬ್ರವರಿ 2026ರ ಅಂತ್ಯದವರೆಗೆ ಮಾತ್ರ ಕಾಲಾವಕಾಶವಿದೆ. ಸಮಯ ಬಹಳ ಕಡಿಮೆ ಇರುವುದರಿಂದ ಆಸಕ್ತರು ಇಂದೇ ಅರ್ಜಿ ಸಲ್ಲಿಸುವುದು ಸೂಕ್ತ. ತರಬೇತಿ ಮುಗಿದ ತಕ್ಷಣ ಸರ್ಕಾರಿ ಸಾರಿಗೆ ಸಂಸ್ಥೆಗಳು ಮಾತ್ರವಲ್ಲದೆ, ಖಾಸಗಿ ವಲಯದಲ್ಲೂ ನಿಮಗೆ ಕೈತುಂಬಾ ಸಂಬಳ ಸಿಗುವ ಕೆಲಸ ಖಂಡಿತ ಸಿಗಲಿದೆ.
ನಿಮ್ಮ ಊರಿನ ನಿರುದ್ಯೋಗಿ ಯುವಕರಿಗೆ ಈ ಮಾಹಿತಿಯನ್ನು ಶೇರ್ ಮಾಡಿ, ಅವರ ಬಾಳಿಗೆ ದಾರಿದೀಪವಾಗಿ!

