ದಾವಣಗೆರೆಗಿಂತ ಬಾಗಲಕೋಟೆ ಪತ್ರಕರ್ತರದ್ದೇ ಸದ್ದು!
ಬೆಂಗಳೂರು: ರಾಜ್ಯದಲ್ಲಿ ಎರಡು ಕ್ಷೇತ್ರದಲ್ಲಿ ಉಪಚುನಾವಣೆ ಭರ್ಜರಿಯಾಗಿ ನಡೆಯುತ್ತಿದ್ದು, ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಸದ್ದು ಮಾಡಿದ್ದ ಅಬಕಾರಿ ಮಿನಿಸ್ಟರ್ ಆರ್.ಬಿ. ತಿಮ್ಮಾಪುರ ಅವರು ಇದೀಗ ಮತ್ತೆ ಆಪ್ತ ಪತ್ರಕರ್ತನ ಸಾಂಗತ್ಯದಿಂದ KPCCಗೆ ದೋಖಾ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಹೌದು, ಮೂರು ವರ್ಷಗಳಿಂದ ಅಬಕಾರಿ ಹಗರಣದ ಆರೋಪವು ದೇಶದ ಮುಂದೆ ರಾಜ್ಯದ ಮಾನ ಹಾರಾಜಾಗುವಂತೆ ಮಾಡಿದೆ. ಇದೀಗ ಉಪಚುನಾವಣೆಯ ಸಂದರ್ಭದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. KPCCಯಿಂದ ಬಾಗಲಕೋಟೆಯ ಉಪಚುನಾವಣೆಯ ಜವಾಬ್ದಾರಿ ಹೊತ್ತಿರುವ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಚುನಾವಣಾ ವೆಚ್ಚಕ್ಕಾಗಿ ನೀಡಿದ್ದ ಹಣದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಪತ್ರಕರ್ತರಿಗೆ ಮೀಸಲಿಟ್ಟ ಹಣದಲ್ಲಿ ಅರ್ಧಕ್ಕರ್ಧ ಹಣ ಲಪಟಾಯಿಸಲಾಗಿದೆ ಎನ್ನುವ ಗಂಭೀರ ಆರೋಪ ಬಾಗಲಕೋಟೆಯ ಗಲ್ಲಿಗಲ್ಲಿಯಲ್ಲಿ ಸದ್ದು ಮಾಡುತ್ತಿದೆ.. ಈ ಬಗ್ಗೆ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ…
ಸಾಮಾನ್ಯವಾಗಿ ಆಡಳಿತ ನಡೆಸುವ ಪಕ್ಷಗಳು, ತಮ್ಮ ಅವಧಿಯಲ್ಲಿ ನಡೆಯುವ ಉಪಚುನಾವಣೆ ಸಂದರ್ಭದಲ್ಲಿ ಎಲ್ಲಾ ರೀತಿಯ ಪವರ್ ಬಳಸಿ, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆ. ಅದಕ್ಕೆ ಮಾದ್ಯಮಗಳ ಸಹಾಯವನ್ನೂ ಪಡೆಯುತ್ತಾರೆ, ಇದೇ ಮೊದಲೇನಲ್ಲ. ಅದೇ ರೀತಿ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸಿಎಂ, ಡಿಸಿಎಂ ಹಾಗೂ KPCCಯಿಂದ ಬಹುದೊಡ್ಡ ಮಟ್ಟದ ಫಂಡಿಂಗ್ ಮಾಡಲಾಗಿದೆ. ಅದರಲ್ಲಿ ಬಾಗಲಕೋಟೆಯ ಪತ್ರಕರ್ತರಿಗೆ (Media Management) 41 ಲಕ್ಷ ರೂಪಾಯಿವರೆಗೆ ಹಣ ಖರ್ಚು ಮಾಡುವಂತೆ ನೀಡಲಾಗಿದೆ. ಆದರೆ, ಈ ಹಣ ನಿಜವಾದ ಪತ್ರಕರ್ತರಿಗೆ ತಲುಪಿಲ್ಲ ಎನ್ನುವುದೇ ಕುತೂಹಲಕಾರಿ ವಿಚಾರ…
ಬಾರ್ ಮಾಲೀಕ ಕಂ ಪತ್ರಕರ್ತನ ಡೀಲಿಂಗ್!
ಬಾಗಲಕೋಟೆಯ ಖಾಸಗಿ ಬ್ಯಾಂಕ್ ವೊಂದರಲ್ಲಿ ಮಿಡಿಯಾ ಮ್ಯಾನೇಜ್ಮೆಂಟ್ ಗೆ ಇರಿಸಲಾಗಿದ್ದ 41 ಲಕ್ಷ ರೂಪಾಯಿ ಹಣವನ್ನು ರಾತ್ರೋರಾತ್ರಿ ಸ್ಥಳೀಯ ನಾಯಕರನ್ನು ಬದಿಗೊತ್ತಿ ಮೊನಾಲಿಸಾ ಬಾರ್ ಮಾಲೀಕ ಕಂ ಪತ್ರಕರ್ತ ಆ ಹಣವನ್ನು ತೆಗೆದುಕೊಂಡು ಹೋಗಿದ್ಸಾರೆ. ಇವರು ಉಸ್ತುವಾರಿ ಮಂತ್ರಿ ಆರ್‌ಬಿ ತಿಮ್ಮಾಪುರ ಅವರ ಪರಮಾತ್ಮ ಪತ್ರಕರ್ತ ಎನ್ನುವುದು ಜಿಲ್ಲೆಯ ಜನರಿಗೆ ತಿಳಿದಿರುವ ವಿಚಾರ… ಮಂತ್ರಿಯ ಪರಮಾತ್ಮನಾಗಿರುವ ಈ ಪತ್ರಕರ್ತ ಹಣವನ್ನು ನವನಗರದ ಸೆಕ್ಟರ್ ನಂಬರ್ 58 ರಲ್ಲಿ ತನ್ನ ಛೇಲಾ ಪತ್ರಕರ್ತರಿಗೆ ಲಕ್ಷಾಂತರ ರೂಪಾಯಿ ಹಣ ಹಂಚಿದ್ದಾರೆ.
ನಿತ್ಯವೂ ಸುದ್ದಿಗಾಗಿ ಭಿಕ್ಷೆ ಬೇಡುವ ಪತ್ರಕರ್ತ
ಈ ಡೀಲಿಂಗ್ ಪತ್ರಕರ್ತ ಅಲಿಯಾಸ್ ಹಿರಿಯ ಪತ್ರಕರ್ತನ ಆವಸ್ತೆ ನೋಡಿದ್ರೆ ನೀವು ನಗಲಾಡದೇ ಇರಲಾರರಿ,.. ಇವರು ರಾಜ್ಯದ ಪ್ರತಿಷ್ಟಿತ ಪತ್ರಿಕೆ (ಕನ್ನಡದ ಪ್ರಭೆಯಂತೆ ಕಂಗೊಳಿಸುವ ಪತ್ರಿಕೆ)ಯ ಜಿಲ್ಲಾ ವರದಿಗಾರ ಆದರೆ, ಇವರು ಮಾತ್ರ, ದಿನಪೂರ್ತಿ ರಾಜಕಾರಣಿಗಳ ಹಿಂದೆ ಸುತ್ತುವುದರಲ್ಲಿ ಬ್ಯೂಸಿಯಂತೆ, ಸಂಜೆಯಾದ್ರೆ ಸಾಕು ತಮ್ಮ ಛೇಲಾ ಪತ್ರಕರ್ತರಿಂದ ಹಳಸಿದ ಸುದ್ದಿ ತರಿಸಿಕೊಂಡು, ಅದನ್ನ ಯಥಾವತ್ತಾಗಿ ತಮ್ಮ ಕಛೇರಿಗೆ ಕಳುಹಿಸುತ್ತಾರಂತೆ. ಕೆಲವು ಪತ್ರಕರ್ತರನ್ನು ಛೇಲಾ ಮಾಡಿಕೊಂಡಿರುವ ಇವರು, ಆಗಾಗ್ಗೆ ಭ್ರಷ್ಟಾಚಾರದ ಮೈಸೂರು ಪಾಕ್ ಅನ್ನು ತನ್ನ ಛೇಲಾಗಳಿಗೆ ತಿನ್ನಿಸಿ, ನಳಪಾಕ ಮಾತ್ರ ತಾವೇ ಸೇವಿಸುತ್ತಾರೆ ಎಂದು ಸ್ಥಳೀಯ ಹಿರಿಯ ಪತ್ರಕರ್ತರು ವ್ಯಂಗ್ಯವಾಗಿ ಮಾತನಾಡುತ್ತಾರೆ.
ಸಂಜೆ ಸುದ್ದಿ ಭಿಕ್ಷಾಟನೆ ಮುಗಿದ ಬಳಿಕ ಮಿನಿಸ್ಟರ್ ಜೊತೆ ಟೇಬಲ್ ಹಂಚಿಕೊಂಡು ಎರಡು ಪೆಗ್ ಏರಿಸಿಕೊಳ್ಳುತ್ತಾರೆ. ಹೊರಬಂದ ಬಳಿಕ ತಮ್ಮ ಛೇಲಾಗಳ ಎದುರು ಬಡಾಯಿಕೊಚ್ಚಿಕೊಳ್ಳುತ್ತಾರಂತೆ. ಈ ಹಿಂದಿನ ರನ್ನ ಉತ್ಸವ, ಅಬಕಾರಿ ಹಗರಣದ ಆರೋಪ ಕೇಳಿಬಂದ ಸಂದರ್ಭದಲ್ಲಿಯೂ ಇದೇ ರೀತಿ ಮಾಡಿದ್ದಾರೆ ಎಂದು ಆ ಹಿರಿಯ ಪತ್ರಕರ್ತರು ಹೇಳಿಕೊಂಡಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಸಚಿವ ತಿಮ್ಮಾಪುರ ಅವರಿಂದ ಆರ್ಥಿಕ ಲಾಭ ಪಡೆದರೂ, ಈವರೆಗೆ ಯಾವುದೇ ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿ, ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಳ್ಳಲ್ಲ, ಬದಲಿಗೆ ಯಾವುದಾದರೂ ಪಕ್ಷದ ಫಂಡಿಂಗ್ ಅಥವಾ ಪ್ರಚಾರದ ಹಣ ಬರುವಂತಿದ್ದರೆ ಮಾತ್ರ ಮುಂದಿರುತ್ತಾರೆ ಎಂದು ಹೇಳಲಾಗುತ್ತಿದೆ. ಈವರೆಗೂ ಈ ಹಿರಿಯ ಪತ್ರಕರ್ತ ತಿಮ್ಮಾಪುರ ಜೊತೆಗಿನ ಒಡನಾಟವನ್ನು ದುರ್ಬಳಕೆ ಮಾಡಿಕೊಂಡು ಸಾಕಷ್ಟು ಲಾಭ ಮಾಡಿಕೊಂಡು ಬಾರ್ ಮಾಲೀಕರಾಗಿದ್ದಾರೆ ಎಂದು ಸ್ಥಳೀಯ ಪತ್ರಕರ್ತರೇ ಆರೋಪ ಮಾಡುತ್ತಿದ್ದಾರೆ..
ಕಾಂಗ್ರೆಸ್‌ನ 41 ಲಕ್ಷ ರೂ. ಹಣ ಬಲಪಂಥೀಯ ಪತ್ರಕರ್ತರಿಗೆ ಮೀಸಲು!
ಕೋಮುವಾದದ ವಿರುದ್ಧದ ನಿಲುವು ಹೊಂದಿದ್ದ ಪತ್ರಕರ್ತರಿಗೆ ಈ 41 ಲಕ್ಷ ರೂಪಾಯಿ ಹಣದಲ್ಲಿ ಬಿಡಿಗಾಸು ತಲುಪಿಲ್ಲ. ಆದರೆ, ನಿತ್ಯವೂ ಬಿಜೆಪಿ ಅಭ್ಯರ್ಥಿಯೊಂದಿಗೆ ರಾಜಕೀಯ ಜಪ ಮಾಡುವ ಬಲಪಂಥೀಯ ಪತ್ರಕರ್ತರಿಗೆ ಮಾತ್ರ ಈ ಹಣ ತಲುಪಿದೆ. 41 ಲಕ್ಷ ರೂ. ಪೈಕಿ 18 ಲಕ್ಷ ರೂಪಾಯಿ ಕೇವಲ ದೃಶ್ಯ ಹಾಗೂ ಮುದ್ರಣ ಮಾಧ್ಯಮದ 12 ಪತ್ರಕರ್ತರಿಗೆ ABC ಕೆಟಗರಿ ಮಾಡಿ ಹಣ ಹಂಚಿದ್ದಾರೆ. ಈ ಹಣ ಹಂಚುವ ಪ್ರಕ್ರಿಯೆಯಲ್ಲಿ ಖುದ್ದು ಸಚಿವ ತಿಮ್ಮಾಪುರ ಅವರೇ ಸ್ಥಳದಲ್ಲಿದ್ದರು. ಈ ಹಣವನ್ನು ಮೇಲ್ಪಂಥೀಯ ಪತ್ರಕರ್ತರಿಗೆ ಹಂಚಿದ್ದಾರೆ ಎನ್ನುವುದು ಗಮನಾರ್ಹ ವಿಷಯ. ಇನ್ನುಳಿದ ಹಣವನ್ನು ಈ ಮಹಾನುಭಾವ ಪತ್ರ ತನ್ನ ಕಿಸೆಗೆ ಇಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು, ಈ ಬೃಹತ್ ಮೊತ್ತದ ಹಣದಲ್ಲಿ ಬಾಗಲಕೋಟೆಯಲ್ಲಿರುವ ಅಲ್ಪಸಂಖ್ಯಾತ, SC-ST ಹಾಗೂ OBC ಪತ್ರಕರ್ತರಿಗೆ ಬಿಡಿಗಾಸು ನೀಡಿಲ್ಲ. ಹೀಗಾಗಿ ಅನೇಕ ಪತ್ರಕರ್ತರು ಕಾಂಗ್ರೆಸ್ ನೀತಿ ಕಂಡು ಅಸಮಾಧಾನಗೊಂಡಿದ್ದಾರೆ. ಇದು ಜಿಲ್ಲೆಯಲ್ಲಿ ಬಾಯಿಂದ ಬಾಯಿಗೆ ಹರಿದು ಸುದ್ದಿಯಾಗುತ್ತಿದ್ದಂತೆ ಡೀಲ್‌ಮಾಸ್ಟರ್ ಅಲಿಯಾಸ್ ಈ ಹಿರಿಯ ಪತ್ರಕರ್ತ, ಇತರ ಪತ್ರಕರ್ತರನ್ನು ಕರೆದು ಚಿಲ್ಲರೆ ಹಣ ನೀಡಿ ಬಾಯಿಮುಚ್ಚಿಸಲು ಮುಂದಾಗಿದ್ದಾರೆ. ಆದರೆ ಪತ್ರಕರ್ತರು ಮಾತ್ರ ಸುತಾರಾಮ್ ಒಪ್ಪಿಲ್ಲ. ಜಿಲ್ಲಾ ಕಾಂಗ್ರೆಸ್ ಕಚೇರಿ ಅಂಗಳದಲ್ಲೇ ಈ ಡೀಲಿಂಗ್ ವಿಚಾರ ಚರ್ಚೆಮಾಡುತ್ತಿರುವುದು, ಸ್ಥಳೀಯ ಕೈ ಮುಖಂಡರಿಗೆ ಮುಜುಗರ ಉಂಟುಮಾಡಿದೆ.
ಇದನ್ನೂ ಓದಿ: Parenting Alert: ಯಮರೂಪಿಯಾದ ದಾಸವಾಳದ ಹೂವು! ಹಸುಗೂಸಿನ ಪ್ರಾಣಪಕ್ಷಿ ಹಾರಿದ್ದು ಹೇಗೆ?
ಹಿರಿಯ ಪತ್ರಕರ್ತ ರಾಮ್ ಮನಗೂಳಿ ಅವರು ಅಸ್ತಂಗತವಾದ ಬಳಿಕ ಈ ಡೀಲ್ ಮಾಸ್ಟರ್ ಹಾವಳಿ ಮಿತಿಮೀರಿದೆ ಎಂದು ಸ್ಥಳೀಯ ಪತ್ರಕರ್ತರು ಹೇಳುತ್ತಿದ್ದಾರೆ, ಇವರ ಡೀಲ್‌ಗಳ ಹಾವಳಿಯಿಂದ ಬಾಗಲಕೋಟೆಯ ಪ್ರಾಮಾಣಿಕ ಪತ್ರಕರ್ತರು ಅಕ್ಷರಶಃ ತಲ್ಲಣಗೊಂಡಿದ್ದಾರೆ. ಈ ಅಸಲಿ ಸುದ್ದಿ KPCC ಗೆ ತಲುಪುತ್ತಿದ್ದಂತೆ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಾಗಲಕೋಟೆಗೆ ದೌಡಾಯಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಇಂಟ್ರಸ್ಟಿಂಗ್ ಸುದ್ದಿ ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ.

