ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಕೇವಲ ವ್ಯಾಪಾರಕ್ಕೆ ಸೀಮಿತವಾಗಿಲ್ಲ ಎಂಬ ಅನುಮಾನಗಳು ದಟ್ಟವಾಗುತ್ತಿವೆ. ಅಮೆರಿಕದ ಕೋಟ್ಯಧಿಪತಿ ಜೆಫ್ರಿ ಎಪ್‌ಸ್ಟೀನ್‌ನ ಕರಾಳ ಹಗರಣಗಳನ್ನು ಬಿಚ್ಚಿಟ್ಟ ‘Epstein Files’ ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದ್ದಂತೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ನಡುವಿನ ಹೊಸ ಆರ್ಥಿಕ ಒಪ್ಪಂದಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಟ್ರಂಪ್ ಅವರ ಕಠಿಣ ಷರತ್ತುಗಳಿಗೆ ಭಾರತ ಒಪ್ಪುತ್ತಿರುವುದು ನೋಡಿದರೆ, ಇದು ಸ್ನೇಹವೋ ಅಥವಾ ಯಾವುದೋ ರಹಸ್ಯದ ಒತ್ತಡಕ್ಕೆ ಸಿಲುಕಿ ಅಮೆರಿಕದ ಮುಂದೆ ಮಂಡಿಯೂರಿದ್ರಾ ಮೋದಿ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
Epstein Files ಮತ್ತು ಭಾರತದ ನಾಯಕರ ಮೇಲಿನ ಗುಪ್ತ ಒತ್ತಡ?
ಜೆಫ್ರಿ ಎಪ್‌ಸ್ಟೀನ್ ಹಗರಣ ಕೇವಲ ಲೈಂಗಿಕ ದಂಧೆಯಲ್ಲ, ಅದು ವಿಶ್ವದ ಪ್ರಭಾವಿ ನಾಯಕರನ್ನು ನಿಯಂತ್ರಿಸುವ ಒಂದು ‘ಬ್ಲ್ಯಾಕ್‌ಮೇಲ್’ ಅಸ್ತ್ರ ಎಂದು ಹಲವು ತಜ್ಞರು ವಿಶ್ಲೇಷಿಸಿದ್ದಾರೆ. ಈ Epstein Filesಗಳಲ್ಲಿ ಅಡಗಿರುವ ರಹಸ್ಯಗಳು ಯಾರನ್ನು ಬೇಕಾದರೂ ಬೀದಿಗೆ ತರಬಲ್ಲವು. ಇಂತಹ ಹೊತ್ತಿನಲ್ಲೇ ಭಾರತದ ಮಾರುಕಟ್ಟೆಯನ್ನು ಅಮೆರಿಕಾಗೆ ಸಂಪೂರ್ಣವಾಗಿ ಬಿಟ್ಟುಕೊಡುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯ ಸ್ವಾಮಿಯವರೇ ಈ ಹಿಂದೆ Epstein Files ಬಗ್ಗೆ ನೀಡಿದ್ದ ಸುಳಿವುಗಳು ಈಗ ಮುನ್ನೆಲೆಗೆ ಬರುತ್ತಿವೆ. ಕೇವಲ ಒಂದು ಫೋನ್ ಕಾಲ್‌ಗೆ ಹೆದರಿ ಭಾರತದ ಮಾರುಕಟ್ಟೆಯನ್ನು ಹರಾಜು ಹಾಕಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಅಂತರಾಷ್ಟ್ರೀಯ ರಾಜಕಾರಣದಲ್ಲಿ ಇಂತಹ ‘ರಹಸ್ಯ ಮಾಹಿತಿ’ಗಳನ್ನು ಇಟ್ಟುಕೊಂಡು ದೇಶದ ಹಿತಾಸಕ್ತಿಯನ್ನು ಬಲಿಕೊಡುವಂತೆ ಒತ್ತಡ ಹೇರಲಾಗುತ್ತಿದೆಯೇ? ಎಂಬ “ಅಸಲಿ ಸತ್ಯ”ದ ಕುರಿತು ಜನರಲ್ಲಿ ಅನುಮಾನ ಮೂಡಿದೆ.
ಇದನ್ನೂ ಓದಿ: Epstein files: ಜಾಗತಿಕ ಅತ್ಯಾಚಾರಿಗಳ ಜಾಲಕ್ಕೂ ನಿಮಗೂ ಏನು ನಂಟು? ಮೌನ ಮುರಿಯದ ಮೋದಿ
MAGA Vs MICA: ಭಾರತ ಅಮೆರಿಕದ ಆರ್ಥಿಕ ವಸಾಹತು ರಾಷ್ಟ್ರವೇ?
ಡೊನಾಲ್ಡ್ ಟ್ರಂಪ್ ಅವರ ಘೋಷಣೆ ‘Make America Great Again’ (MAGA) ಎಂಬುದು ಅಮೆರಿಕದ ಆರ್ಥಿಕತೆಯನ್ನು ಬಲಪಡಿಸುವ ಗುರಿ ಹೊಂದಿದೆ. ಆದರೆ ಭಾರತದ ಮೋದಿಯವರ ನಡೆಗಳು ‘Make India Colony Again’ (MICA) ಎಂಬಂತೆ ಕಾಣುತ್ತಿವೆ. ಅಂದರೆ, ಭಾರತವನ್ನು ಮತ್ತೆ ಅಮೆರಿಕದ ಆರ್ಥಿಕ ವಸಾಹತನ್ನಾಗಿ ಮಾಡುವ ಹುನ್ನಾರ ಇಲ್ಲಿ ಅಡಗಿದೆ.
ಸರ್ಕಾರವು ಅಮೆರಿಕಾ ಸುಂಕವನ್ನು ಶೇ. 25 ರಿಂದ ಶೇ. 18ಕ್ಕೆ ಇಳಿಸಿದೆ ಎಂದು ಸಂಭ್ರಮಿಸುತ್ತಿದೆ. ಆದರೆ ಇದರ ಹಿಂದಿರುವ ಕಟು ವಾಸ್ತವವೇನೆಂದರೆ, ಅಮೆರಿಕದ ಸಬ್ಸಿಡಿ ಪಡೆದ ಅಗ್ಗದ ಕೃಷಿ ಮತ್ತು ಡೈರಿ ಉತ್ಪನ್ನಗಳು ಯಾವುದೇ ಅಡೆತಡೆಯಿಲ್ಲದೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಸೊನ್ನೆ ಪರ್ಸೆಂಟ್ ಸುಂಕದಲ್ಲಿ ಅಮೆರಿಕದ ಸರಕುಗಳು ಬಂದರೆ, ನಮ್ಮ ದೇಶದ ಸಣ್ಣ ಉದ್ದಿಮೆಗಳು ಮತ್ತು ಚನ್ನಪಟ್ಟಣದಂತಹ ಸಾಂಪ್ರದಾಯಿಕ ಕಲೆಗಳು ಅಮೆರಿಕದ ಪ್ಲಾಸ್ಟಿಕ್ ಗೊಂಬೆಗಳ ಮುಂದೆ ಮಕಾಡೆ ಮಲಗಲಿವೆ.
ಮೋದಿ ‘ಕೈಗೊಂಬೆ’ ರಾಜಕಾರಣ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ
ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರು ಭಾರತದ ಜೊತೆಗಿನ ವಾಣಿಜ್ಯ ಒಪ್ಪಂದ ಯಶಸ್ವಿಯಾಗಿದೆ ಎಂದು ಘೋಷಿಸಿದ್ದು ಭಾರತದ ಸಂಸತ್ತಿನಲ್ಲಲ್ಲ, ಬದಲಾಗಿ ಎಲಾನ್ ಮಸ್ಕ್ ಅವರ ‘X’ ವೇದಿಕೆಯಲ್ಲಿ. ಭಾರತದ ಸಂಸತ್ತು ಅಧಿವೇಶನದಲ್ಲಿರುವಾಗಲೇ ದೇಶದ ನಿರ್ಣಾಯಕ ನಿರ್ಧಾರಗಳನ್ನು ಅಮೆರಿಕದ ನೆಲದಲ್ಲಿ ಘೋಷಿಸುವುದು ನಮ್ಮ ಸಾರ್ವಭೌಮತ್ವಕ್ಕೆ ಮಾಡಿದ ಘೋರ ಅವಮಾನ. ‘ಹೌಡಿ ಮೋದಿ’ ಅಬ್ಬರ ಕೇವಲ ವೈಯಕ್ತಿಕ ಪ್ರಚಾರಕ್ಕೆ ಸೀಮಿತವಾಯಿತು, ಆದರೆ ಒಪ್ಪಂದದ ಮೇಜಿನ ಮೇಲೆ ಭಾರತ ಅಕ್ಷರಶಃ ಅಮೆರಿಕಾದ ದಲ್ಲಾಳಿಯಂತೆ ವರ್ತಿಸುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಅಮೆರಿಕಾದ ಅಧ್ಯಕ್ಷ ಟ್ರಂಪ್ ಪೋಸ್ಟ್:-
( @realDonaldTrump – Truth Social Post )
( Donald J. Trump – Feb 02 2026, 11:58 AM ET )It was an Honor to speak with Prime Minister Modi, of India, this morning. He is one of my greatest friends and, a Powerful and Respected Leader of his Country. We s… pic.twitter.com/LhDi4p9gWo
— Donald J Trump Posts TruthSocial (@TruthTrumpPost) February 2, 2026
ಭಾರತೀಯ ರೈತರಿಗೆ ಮತ್ತು ಉದ್ಯಮಿಗಳಿಗೆ ಕಾದಿದೆ ಮರಣಶಾಸನ?
ಈ ಒಪ್ಪಂದದ ಅಸಲಿ ಸತ್ಯ ತಿಳಿದರೆ ಪ್ರತಿಯೊಬ್ಬ ಭಾರತೀಯನೂ ಬೆಚ್ಚಿಬೀಳುತ್ತಾನೆ.
- ಹೈನುಗಾರಿಕೆಯ ನಾಶ: ಅಮೆರಿಕದ ಅಗ್ಗದ ಹಾಲಿನ ಉತ್ಪನ್ನಗಳು ಬಂದರೆ, ಭಾರತದ ರೈತರು ಬೆಳೆದ ಹಾಲಿಗೆ ಬೆಲೆ ಸಿಗದೆ ಹೈನುಗಾರಿಕೆ ಉದ್ಯಮವೇ ನಾಶವಾಗಲಿದೆ.
- ಆರ್ಥಿಕ ಲೂಟಿ: ನಮ್ಮ ದೇಶದ ಸಾಮಾನ್ಯ ತೆರಿಗೆದಾರರ ಹಣವು ಅಮೆರಿಕದ ಕಂಪನಿಗಳ ಖಜಾನೆ ತುಂಬಲು ಬಳಕೆಯಾಗುತ್ತಿದೆ. ರಕ್ಷಣಾ ಒಪ್ಪಂದಗಳ ಹೆಸರಿನಲ್ಲಿ ಅಮೆರಿಕದ ಹಳೆಯ ತಂತ್ರಜ್ಞಾನವನ್ನು ದುಬಾರಿ ಬೆಲೆಗೆ ನಮ್ಮ ಮೇಲೆ ಹೇರಲಾಗುತ್ತಿದೆ.
- ತಾಂತ್ರಿಕ ಗುಲಾಮಗಿರಿ: ನಾವು ಖರೀದಿಸುವ ಶಸ್ತ್ರಾಸ್ತ್ರಗಳ ಬಿಡಿಭಾಗಗಳಿಗಾಗಿ ದಶಕಗಳ ಕಾಲ ಅಮೆರಿಕದ ಮೇಲೆ ಅವಲಂಬಿತವಾಗಿರುವಂತೆ ಮಾಡುವುದು ಈ ಒಪ್ಪಂದದ ಗುರಿ.
ಇದನ್ನೂ ಓದಿ: Black Eye Club: ಕಪ್ಪು ಕಲೆ ಹಿಂದಿದೆ ಬೆಚ್ಚಿಬೀಳಿಸಯವ ರಹಸ್ಯ; ವಿಶ್ವದ ಪ್ರಭಾವಿಗಳ ಅಸಲಿ ಮುಖವಾಡ ಕಳಚಿದ ಫೈಲ್ಸ್!
ರಾಷ್ಟ್ರೀಯತೆಯ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕಿ, ಮರೆಯಲ್ಲಿ ದೇಶದ ಮಾರುಕಟ್ಟೆಯನ್ನು ವಿದೇಶಿ ಶಕ್ತಿಗಳಿಗೆ ಹರಾಜು ಹಾಕುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕ. Epstein Files ನಂತಹ ರಹಸ್ಯಗಳು ಜಾಗತಿಕ ನಾಯಕರ ಅಸಲಿ ಮುಖವಾಡವನ್ನು ಕಳಚುತ್ತಿವೆ. ಭಾರತವು ಅಮೆರಿಕದ ಕೈಗೊಂಬೆಯಾಗುವ ಬದಲು ತನ್ನ ಸ್ವಂತ ಆರ್ಥಿಕ ಶಕ್ತಿಯ ಮೇಲೆ ನಿಲ್ಲಬೇಕಿದೆ. ಈ ಒಪ್ಪಂದವು ಭಾರತವನ್ನು ಅಮೆರಿಕದ ಆರ್ಥಿಕ ವಸಾಹತು ರಾಷ್ಟ್ರವನ್ನಾಗಿ ಮಾಡುತ್ತಿದೆ ಎಂಬ ಕರಾಳ ಸತ್ಯವನ್ನು ಜನರು ಅರಿಯಬೇಕಿದೆ.
ಪ್ರಚಾರದ ಹಿಂದೆ ಅಡಗಿರುವ ಈ ಅಪಾಯಕಾರಿ ಬೆಳವಣಿಗೆಯನ್ನು ಪ್ರಶ್ನಿಸುವುದು ಪ್ರತಿ ದೇಶಭಕ್ತನ ಕರ್ತವ್ಯ. ನಮಗೆ ಬೇಕಾಗಿರುವುದು ಅಮೆರಿಕದ ಶರಣಾಗತಿಯಲ್ಲ, ಭಾರತದ ಸ್ವಾಭಿಮಾನಿ ಆರ್ಥಿಕತೆ.

