ದಿನ ಭವಿಷ್ಯ ವಿಶೇಷ: ಇಂದು ಸೋಮವಾರ, ಮನಃಕಾರಕ ಚಂದ್ರನ ದಿನ. ಮಾನಸಿಕ ಶಾಂತಿ ಮತ್ತು ಕೌಟುಂಬಿಕ ನೆಮ್ಮದಿಯ ದೃಷ್ಟಿಯಿಂದ ಯಾವ ರಾಶಿಯವರಿಗೆ ಇಂದು ಶುಭ ತರಲಿದೆ? ಇಲ್ಲಿದೆ ಸಂಪೂರ್ಣ ವಿವರ.
ಮೇಷ (Aries) ರಾಶಿಯ ದಿನ ಭವಿಷ್ಯ
ಇಂದು ನೀವು ಮಾಡುವ ಕೆಲಸಗಳಲ್ಲಿ ಹೆಚ್ಚಿನ ಸೃಜನಶೀಲತೆ ಇರಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಮಟ್ಟದ ಲಾಭವಾಗಲಿದೆ. ಶಿವನ ಆರಾಧನೆಯಿಂದ ಕಾರ್ಯಸಿದ್ಧಿಯಾಗಲಿದೆ.
ವೃಷಭ (Taurus) ರಾಶಿಯ ದಿನ ಭವಿಷ್ಯ
ನಿಮಗೆ ಇಂದು ಸಮಾಧಾನದ ದಿನ. ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಸ್ಥಿರಾಸ್ತಿ ಅಥವಾ ವಾಹನ ಖರೀದಿ ಮಾಡುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಲಿದೆ. ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ.
ಮಿಥುನ (Gemini) ರಾಶಿಯ ದಿನ ಭವಿಷ್ಯ
ನಿಮ್ಮ ಸಂವಹನ ಕಲೆ ಇಂದು ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುವಂತಹ ಘಟನೆಗಳು ನಡೆಯಲಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಆಕಸ್ಮಿಕ ಧನ ಲಾಭದ ಸೂಚನೆ ಇದೆ.
ಇದನ್ನೂ ದಿನ: Darshan: ಜೈಲಿನಲ್ಲಿರುವ ದರ್ಶನ್ ಭವಿಷ್ಯ? ಕೋಡಿಶ್ರೀ ಅಚ್ಚರಿಯ ಹೇಳಿಕೆ ವೈರಲ್!
ಕರ್ಕಾಟಕ (Cancer)
ನಿಮ್ಮ ರಾಶ್ಯಾಧಿಪತಿ ಚಂದ್ರನ ದಿನವಾದ ಇಂದು ಮನಸ್ಸು ಸ್ವಲ್ಪ ಚಂಚಲವಾಗಿರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ತಾಯಿಯ ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಚಾರದಲ್ಲಿ ಇಂದು ಸಾಧಾರಣ ಫಲವಿದೆ.
ಸಿಂಹ (Leo)
ಇಂದು ನೀವು ಆಕರ್ಷಣೆಯ ಕೇಂದ್ರಬಿಂದುವಾಗುವಿರಿ. ರಾಜಕೀಯ ಅಥವಾ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡವರಿಗೆ ಉನ್ನತ ಸ್ಥಾನಮಾನ ಸಿಗುವ ಯೋಗವಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಇದ್ದ ಚಿಂತೆಗಳು ದೂರವಾಗಲಿವೆ. ಧನ ಹರಿವು ಹೆಚ್ಚಲಿದೆ.
ಕನ್ಯಾ (Virgo)
ಅತಿಯಾದ ಆಲೋಚನೆಯಿಂದ ದೂರವಿರಿ. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ಇಂದು ತಾಳ್ಮೆಯಿಂದ ಇರುವುದು ನಿಮಗೆ ಬಹಳ ಮುಖ್ಯ. ದೈವದತ್ತವಾದ ನಂಬಿಕೆ ಇಂದು ನಿಮಗೆ ಶ್ರೀರಕ್ಷೆಯಾಗಲಿದೆ.
ತುಲಾ (Libra)
ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಹಣ ಇಂದು ನಿಮ್ಮ ಕೈ ಸೇರಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ನಿಮ್ಮ ವೃತ್ತಿ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಉಂಟಾಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಇಂದು ಶುಭ ಸುದ್ದಿ ಕೇಳಿಬರಲಿದೆ.
ಇದನ್ನೂ ಓದಿ: Bagalkot: ‘ಹಲಗೆ ಮಜಲು’; ಕೋಮುವಾದಿಗಳ ಕುತಂತ್ರಕ್ಕೆ ಸೌಹಾರ್ದತೆಯ ಚಡಿ ಏಟು!
ವೃಶ್ಚಿಕ (Scorpio)
ಇಂದು ನೀವು ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ವ್ಯಾಪಾರದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಸಕಾಲ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರಲಿದ್ದು, ದೂರದ ಪ್ರಯಾಣದ ಯೋಜನೆ ಕೈಗೊಳ್ಳುವಿರಿ.
ಧನು (Sagittarius)
ದೈವಿಕ ಚಿಂತನೆಗಳು ನಿಮ್ಮ ಮನಸ್ಸನ್ನು ಪ್ರಸನ್ನಗೊಳಿಸಲಿವೆ. ದಾನ ಧರ್ಮಗಳಿಗಾಗಿ ಹಣ ವ್ಯಯಿಸುವಿರಿ. ಆರ್ಥಿಕವಾಗಿ ಇಂದು ಲಾಭದಾಯಕ ದಿನ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.
ಮಕರ (Capricorn)
ಕೆಲಸದ ಒತ್ತಡದಿಂದ ಮಾನಸಿಕ ಆಯಾಸವಾಗಬಹುದು. ಶತ್ರುಗಳ ಕಾಟ ಇಂದು ಸ್ವಲ್ಪ ಹೆಚ್ಚಿರಬಹುದು, ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕಠಿಣ ಪರಿಶ್ರಮದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ.
ಇದನ್ನೂ ಓದಿ: PM-KISAN SCAM: ರೈತರೇ ಎಚ್ಚರ! ಈ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿ!
ಕುಂಭ (Aquarius)
ಅದೃಷ್ಟ ನಿಮ್ಮ ಮನೆ ಬಾಗಿಲು ತಟ್ಟಲಿದೆ. ಅನಿರೀಕ್ಷಿತವಾಗಿ ಹಳೆಯ ಸಾಲಗಳಿಂದ ಮುಕ್ತಿ ಪಡೆಯುವಿರಿ. ಹೊಸ ವ್ಯವಹಾರ ಆರಂಭಿಸಲು ತಜ್ಞರ ಸಲಹೆ ಪಡೆಯಿರಿ. ಸಂಗಾತಿಯಿಂದ ಅನಿರೀಕ್ಷಿತ ಬೆಂಬಲ ಮತ್ತು ಸಹಕಾರ ದೊರೆಯಲಿದೆ.
ಮೀನ (Pisces)
ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಹೊಸ ಮಿತ್ರರ ಭೇಟಿಯಾಗಲಿದ್ದು, ಭವಿಷ್ಯದಲ್ಲಿ ಅವರಿಂದ ಲಾಭವಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

