Dharmasthala Case: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Dharmasthala Case) ರಾಜ್ಯಾದ್ಯಂತ ದೊಡ್ಡಮಟ್ಟದ ಸಂಚಲನ ಮೂಡಿಸಿತ್ತು. ಇದೀಗ ಆ ಪ್ರಕರಣದ ತನಿಖೆಯ ಹಾದಿಯಲ್ಲಿ ಈಗ ಒಂದು ಮಹತ್ವದ ಮೈಲಿಗಲ್ಲು ಸಿಕ್ಕಂತಾಗಿದೆ. ಹೌದು, ದಶಕಗಳಿಂದ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಸಂತ್ರಸ್ತ ಕುಟುಂಬಕ್ಕೆ ಮತ್ತು ಹೋರಾಟಗಾರರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಇತ್ತೀಚಿನ ನಡೆ ಹೊಸ ಆಶಾವಾದವನ್ನು ಮೂಡಿಸಿದೆ. Dharmasthala Case ಕೇವಲ ಒಬ್ಬ ಹೆಣ್ಣುಮಗಳ ಸಾವಿಗೆ ಸೀಮಿತವಾಗದೆ, ಬೆಳ್ತಂಗಡಿ ಮತ್ತು ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾದ ಸುಮಾರು 74 ಅಸಹಜ ಸಾವುಗಳ ನಿಗೂಢತೆಯನ್ನು ಬಯಲು ಮಾಡುವ ಹಂತಕ್ಕೆ ಬಂದು ತಲುಪಿದೆ. ಇದೀಗ ಆ ಕಾಮುಕ ಕುಟಂಬದ ಎದೆಯಲ್ಲಿ ಅಕ್ಷರಶಃ ನಡುಕ ಶುರುವಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
Dharmasthala Caseನ ಸಂತ್ರಸ್ತ ಕುಟುಂಬದಲ್ಲಿ ಆಶಾದಾಯ ಮೂಡಲು ಕಾರಣವೇನು?
ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಹಿರಿಯ ನ್ಯಾಯವಾದಿ ಎಸ್. ಬಾಲನ್ ಅವರ ಮೂಲಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು (PIL) ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಈ ಅರ್ಜಿಯಲ್ಲಿ ಪ್ರಮುಖವಾಗಿ 74 ಸಂಶಯಾಸ್ಪದ ಸಾವುಗಳ ಕುರಿತು ಪ್ರತ್ಯೇಕ ಎಫ್‌ಐಆರ್ ದಾಖಲಿಸಿ, ಸಮಗ್ರ ತನಿಖೆ ನಡೆಸಬೇಕು ಎಂಬ ಬೇಡಿಕೆ ಇಡಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ (AG) ಅವರು ನೀಡಿದ ಹೇಳಿಕೆಗಳು ಈ ಹೋರಾಟಕ್ಕೆ ಆನೆಬಲ ತಂದಿವೆ:
- ಸರ್ಕಾರದ ಸಮ್ಮತಿ: ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಎಜಿ ಅವರು ಸ್ಪಷ್ಟಪಡಿಸಿದ್ದಾರೆ.
- ಮರುತನಿಖೆಗೆ ಸಿದ್ಧ: ಯಾವ ಪ್ರಕರಣಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸುವುದು ಅತ್ಯಗತ್ಯವಿದೆಯೋ, ಅಂತಹ ಕಡೆಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲು ನಮಗೆ ಅಭ್ಯಂತರವಿಲ್ಲ ಎಂದಿದ್ದಾರೆ.
- ಪಾಲಕರ ಸಂಪರ್ಕ: ಈಗಾಗಲೇ ಕಾಣೆಯಾದ ಮತ್ತು ಅಸಹಜವಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬದವರನ್ನು ಎಸ್‌ಐಟಿ ಸಂಪರ್ಕಿಸಿ ಮಾಹಿತಿ ಕಲೆಹಾಕುತ್ತಿದೆ ಎಂಬ ಆಶಾದಾಯಕ ಮಾಹಿತಿಯನ್ನು ಕೋರ್ಟ್‌ಗೆ ನೀಡಲಾಗಿದೆ.
ಇದನ್ನೂ ಓದಿ: PMKVY SCAM: ಸ್ಕಿಲ್ ಇಂಡಿಯಾ ಹೆಸರಲ್ಲಿ 14,450 ಕೋಟಿ ರೂ. ಲೂಟಿ? ಪಿಎಂಕೆವಿವೈ ಹಗರಣದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ಬಂಗ್ಲೆಗುಡ್ಡದ ರಹಸ್ಯ ಬಯಲಾಗುವ ಸಮಯ ಬಂದೇಬಿಡ್ತಾ?
ಈ ಇಡೀ ಪ್ರಕರಣದ ಕೇಂದ್ರಬಿಂದುವಾಗಿರುವುದು ಬಂಗ್ಲೆಗುಡ್ಡದ ಅರಣ್ಯ ಪ್ರದೇಶ. ಈ ಹಿಂದೆ ವಿಶೇಷ ತನಿಖಾ ತಂಡ (SIT) ಇಲ್ಲಿ ಮಹಜರು ನಡೆಸಿದಾಗ ಪತ್ತೆಯಾದ ಸಾಕ್ಷ್ಯಗಳು ಎಂತವರನ್ನೂ ಬೆಚ್ಚಿಬೀಳಿಸುವಂತಿದ್ದವು.
- ಅವಶೇಷಗಳ ರಾಶಿ: ಈ ಪ್ರದೇಶದಲ್ಲಿ ಸುಮಾರು 7 ತಲೆಬುರುಡೆಗಳು ಮತ್ತು ನೂರಾರು ಮೂಳೆಗಳು ಪತ್ತೆಯಾಗಿದ್ದವು.
- ಯುದ್ಧಭೂಮಿಯಂತಹ ದೃಶ್ಯ: ಅಲ್ಲಿನ ಪರಿಸ್ಥಿತಿಯನ್ನು ನೋಡಿದ ಅಧಿಕಾರಿಗಳು ಅದು ಯಾವುದೋ ‘ಬ್ಯಾಟಲ್ ಫೀಲ್ಡ್’ನಂತೆ ಭಾಸವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದರು.
- ಮತ್ತೆ ಅಗೆಯುವ ಚಿಂತನೆ: ನೆಲದ ಮೇಲ್ಭಾಗದಲ್ಲೇ ಇಷ್ಟೊಂದು ಅವಶೇಷಗಳು ಸಿಕ್ಕಿರುವಾಗ, ಆಳವಾಗಿ ಉತ್ಖನನ (Exhumation) ನಡೆಸಿದರೆ ದಶಕಗಳಿಂದ ಹೂತುಹೋಗಿರುವ ಇನ್ನು ಹತ್ತಾರು ಕರಾಳ ಸತ್ಯಗಳು ಹೊರಬರಬಹುದು ಎಂದು ಎಸ್‌ಐಟಿ ಚಿಂತಿಸುತ್ತಿದೆ. ಇದು ತಪ್ಪಿತಸ್ಥರಲ್ಲಿ ನಡುಕ ಹುಟ್ಟಿಸಿದೆ.
ನ್ಯಾಯವಾದಿ ಎಸ್. ಬಾಲನ್ ಅವರ ತೀಕ್ಷ್ಣ ವಾದಗಳು
ಹಿರಿಯ ನ್ಯಾಯವಾದಿ ಎಸ್. ಬಾಲನ್ ಅವರು ಮಂಡಿಸಿದ ವಾದಗಳು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸಿವೆ. ಅವರು ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:
- ಕಾಗ್ನಿಸಬಲ್ ಪ್ರಕರಣ: ಈ ಸಾವುಗಳು ಸಂಶಯಾಸ್ಪದವಾಗಿದ್ದು, ಇವು ಗಂಭೀರ ಸ್ವರೂಪದ ಕಾಗ್ನಿಸಬಲ್ (Cognizable) ಅಪರಾಧಗಳಾಗಿವೆ.
- ನಿಯಮಬಾಹಿರ ವಿಲೇವಾರಿ: ಯಾವುದೇ ಶವಪರೀಕ್ಷೆ ಅಥವಾ ಕಾನೂನು ಪ್ರಕ್ರಿಯೆ ನಡೆಸದೆ ಶವಗಳನ್ನು ವಿಲೇವಾರಿ ಮಾಡಿರುವುದು ಅತ್ಯಂತ ಗಂಭೀರ ಲೋಪ.
- ಎಸ್‌ಐಟಿ ಅಧಿಕಾರ: ಎಸ್‌ಐಟಿಗೆ ಸರ್ಕಾರವು ಪೊಲೀಸ್ ಠಾಣೆಯ ಮಾನ್ಯತೆ ನೀಡಿದ್ದರೂ, ಈವರೆಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸದೆ ವಿಳಂಬ ಮಾಡಿರುವುದು ಏಕೆ ಎಂಬ ಅವರ ಪ್ರಶ್ನೆಗೆ ಈಗ ಎಸ್‌ಐಟಿ ಉತ್ತರಿಸಬೇಕಿದೆ.
ಇದನ್ನೂ ಓದಿ: Online Game: ಜೀವ ತೆಗೆಯುತ್ತಿದೆ ಕೊರಿಯನ್ ಗೇಮ್; ಅಪಾಯದಿಂದ ಮಕ್ಕಳನ್ನು ರಕ್ಷಿಸೋದು ಹೇಗೆ?
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪಿತೂರಿ
ಇದೇ ವೇಳೆ ಧರ್ಮಸ್ಥಳ ಪ್ರಕರಣದ ಪ್ರಬಲ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಅವರು ಹೊರಡಿಸಿದ್ದ ಗಡಿಪಾರು ಆದೇಶದ ಬಗ್ಗೆಯೂ ದೊಡ್ಡ ಮಟ್ಟದ ಚರ್ಚೆ ನಡೆದಿದೆ.
- ದೋಷಪೂರಿತ ಆದೇಶ: ಈ ಆದೇಶವು ಕಣ್ಣಿಗೆ ಕಾಣುವಂತಹ ಕಾನೂನು ದೋಷಗಳಿಂದ ಕೂಡಿದೆ ಎಂದು ಹೈಕೋರ್ಟ್ ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿತ್ತು.
- ಹೋರಾಟ ಹತ್ತಿಕ್ಕುವ ಪ್ರಯತ್ನ: ರಾಜಕೀಯ ಕಾರಣಗಳಿಗಾಗಿ ಅಥವಾ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಹಳೆಯ ಕೇಸ್‌ಗಳನ್ನು ಉಲ್ಲೇಖಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಸಂಶಯವನ್ನು ವಕೀಲರು ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 19ರ ನಿರ್ಣಾಯಕ ದಿನ
ಹೈಕೋರ್ಟ್ ಈಗ ಸರ್ಕಾರದ ನಿಲುವನ್ನು ಅಧಿಕೃತ ಅಫಿಡವಿಟ್ ಮೂಲಕ ಸಲ್ಲಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯು ಫೆಬ್ರವರಿ 19, 2026 ರಂದು ನಡೆಯಲಿದ್ದು, ಆ ದಿನ ಬಂಗ್ಲೆಗುಡ್ಡದ ಉತ್ಖನನ ಮತ್ತು 74 ಪ್ರಕರಣಗಳ ಭವಿಷ್ಯ ನಿರ್ಧಾರವಾಗಲಿದೆ.
ದಶಕಗಳಿಂದ ಮೌನವಾಗಿದ್ದ ಸತ್ಯಗಳು ಈಗ ಹೈಕೋರ್ಟ್‌ನ ಮಧ್ಯಸ್ಥಿಕೆಯಿಂದಾಗಿ ಹೊರಬರಲು ಸಿದ್ಧವಾಗಿವೆ. ಎಸ್‌ಐಟಿ ತಂಡವು ಪ್ರಾಮಾಣಿಕವಾಗಿ ತನಿಖೆ ನಡೆಸಿ, ಬಂಗ್ಲೆಗುಡ್ಡದ ನಿಗೂಢತೆಯನ್ನು ಭೇದಿಸಿದರೆ ಮಾತ್ರ ಧರ್ಮಸ್ಥಳದ ಸಂತ್ರಸ್ತ ಕುಟುಂಬಗಳಿಗೆ ನೈಜ ನ್ಯಾಯ ಸಿಗಲಿದೆ. ತಪ್ಪಿತಸ್ಥರು ಯಾರೇ ಇರಲಿ, ಕಾನೂನಿನ ಉರುಳು ಬಿಗಿಯಾಗುವ ಕಾಲ ಹತ್ತಿರ ಬಂದಿದೆ ಎಂಬುದು ಈಗ ಸ್ಪಷ್ಟವಾಗುತ್ತಿದೆ.

