ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆರಿಯರ್ ಮಾಡಬೇಕೆಂದು ಕೊಂಡಿದ್ದೀರಾ? ಹಾಗಿದ್ದರೆ Bank Jobsಗೆ ಸಂಬಂಧಿಸಿದಂತೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಖ್ಯಾತ ಸಾರ್ವಜನಿಕ ವಲಯದ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ (BOB) ಭರ್ಜರಿ ಉದ್ಯೋಗಾವಕಾಶವನ್ನು ಹೊತ್ತು ತಂದಿದೆ. ಇಲ್ಲಿ ವಿಶೇಷವೇನೆಂದರೆ, ಯಾವುದೇ ಕಠಿಣ ಲಿಖಿತ ಪರೀಕ್ಷೆ ಇಲ್ಲದೆಯೇ ನೀವು ಕೆಲಸ ಗಿಟ್ಟಿಸಿಕೊಳ್ಳಬಹುದು!
ಯಾವೆಲ್ಲಾ ಹುದ್ದೆಗಳಿವೆ?
Bank ಒಟ್ಟು 419 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಇದರಲ್ಲಿ ಮುಖ್ಯವಾಗಿ:
- ಹಿರಿಯ ವ್ಯವಸ್ಥಾಪಕ (Senior Manager)
- ಉಪ ವ್ಯವಸ್ಥಾಪಕ (Deputy Manager)
- ಸಹಾಯಕ ವ್ಯವಸ್ಥಾಪಕ (Assistant Manager)
- ಸಹಾಯಕ ಉಪಾಧ್ಯಕ್ಷ (Assistant Vice President)
ಅರ್ಹತೆ ಏನಿರಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ (MBA, PGDM, CA, CFA ಅಥವಾ CMA) ಮುಂತಾದ ವೃತ್ತಿಪರ ಶಿಕ್ಷಣ ಹೊಂದಿರಬೇಕು. ಜೊತೆಗೆ ಕೆಲಸದ ಅನುಭವ ಕೇಳಲಾಗಿದೆ.
ಇದನ್ನೂ ಓದಿ: Flipkart: ವಿದ್ಯಾರ್ಥಿಗಳಿಗೆ ಬಂಪರ್ ಆಫರ್! 50,000 ರೂ. ಸ್ಕಾಲರ್‌ಶಿಪ್‌ಗಾಗಿ ಇಂದೇ ಅರ್ಜಿ ಸಲ್ಲಿಸಿ
ವಯೋಮಿತಿ ಮತ್ತು ಸಡಿಲಿಕೆ:
ಸಾಮಾನ್ಯ ವಯೋಮಿತಿ: 22 ರಿಂದ 40 ವರ್ಷ.
ಸಡಿಲಿಕೆ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಬಹಳಷ್ಟು ಜನರಿಗೆ ಬ್ಯಾಂಕ್ ಕೆಲಸ ಅಂದ ಕೂಡಲೇ ‘ಪರೀಕ್ಷೆ’ ಎಂಬ ಭಯವಿರುತ್ತದೆ. ಆದರೆ ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲ! ನಿಮ್ಮ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ನೇರವಾಗಿ ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿವರ:
- ಅರ್ಜಿ ಸಲ್ಲಿಸಲು ಆರಂಭ: ಫೆಬ್ರವರಿ 6, 2026.
- ಕೊನೆಯ ದಿನಾಂಕ: ಫೆಬ್ರವರಿ 26, 2026.
- ಅರ್ಜಿ ಶುಲ್ಕ: ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ರೂ. 850. ಮಹಿಳೆಯರು, SC, ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಕೇವಲ ರೂ. 175 ಮಾತ್ರ.
ಗಮನಿಸಿ: ಸಂಬಳ ಲಕ್ಷಗಳಲ್ಲಿ ಇರುವುದರಿಂದ ಪೈಪೋಟಿ ಕೂಡ ಹೆಚ್ಚಿರಬಹುದು. ಹಾಗಾಗಿ ತಡಮಾಡದೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಿ.

