Karnataka Budget Highlights:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ 2026-27ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮಂಡಿಸಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡದಾದ 4.48 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯವನ್ನು ಘೋಷಿಸಿದ್ದಾರೆ. ಈ ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದರೂ, ರಾಜ್ಯದ ಒಟ್ಟು ಸಾಲದ ಹೊರೆ 8.24 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ. ವಿಶೇಷವಾಗಿ, ಐದು ಗ್ಯಾರಂಟಿಗಳಲ್ಲಿ ಒಂದಾದ ‘ಯುವನಿಧಿ’ಗೆ ಈ ಬಾರಿ ಅನುದಾನ ಮೀಸಲಿಡದಿರುವುದು ಮತ್ತು ಹೊಸ ಮದ್ಯ ನೀತಿಯ ಮೂಲಕ ಬೆಲೆ ನಿರ್ಧಾರವನ್ನು ಕಂಪನಿಗಳಿಗೆ ಬಿಟ್ಟಿರುವುದು ಜನಸಾಮಾನ್ಯರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಸಲಿ ಸುದ್ದಿಯ ಈ ವಿಶೇಷ ವರದಿಯಲ್ಲಿ ಬಜೆಟ್‌ನ ಪ್ರತಿಯೊಂದು ಅಂಕಿ-ಅಂಶ ಹಾಗೂ ನಿಮ್ಮ ಜೇಬಿಗೆ ಆಗುವ ಲಾಭ-ನಷ್ಟದ ಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಬಜೆಟ್ 2026-27: ಸಮಗ್ರ ಅಂಕಿ-ಅಂಶಗಳ ವರದಿ
ಹಣಕಾಸಿನ ಹಂಚಿಕೆಯ ಪೂರ್ಣ ವಿವರ (ಪೈಸೆ ಲೆಕ್ಕಾಚಾರದಲ್ಲಿ):
ಸರ್ಕಾರದ ಪ್ರತಿ 1 ರೂಪಾಯಿ ಖರ್ಚು ಈ ಕೆಳಗಿನಂತಿದೆ:
- ಸಾಲ ಮರುಪಾವತಿ: 20 ಪೈಸೆ (20%).
- ಸಂಬಳ ಮತ್ತು ಪೆನ್ಷನ್: 18 ಪೈಸೆ (18%).
- ಸಮಾಜ ಕಲ್ಯಾಣ: 15 ಪೈಸೆ.
- ಆರ್ಥಿಕ ಸೇವೆಗಳು: 14 ಪೈಸೆ.
- ಕೃಷಿ ಮತ್ತು ನೀರಾವರಿ: 13 ಪೈಸೆ.
- ಶಿಕ್ಷಣ: 10 ಪೈಸೆ.
- ಆರೋಗ್ಯ: 4 ಪೈಸೆ.
- ನೀರು ಸರಬರಾಜು: 3 ಪೈಸೆ.
ಇದನ್ನೂ ಓದಿ: Diplomatic Surrender: ಅಮೆರಿಕದ ‘ತೈಲ ಭಿಕ್ಷೆ’: ಭಾರತವೀಗ ವಾಷಿಂಗ್ಟನ್‌ನ ಗುಲಾಮಿ ರಾಷ್ಟ್ರವೇ?
ಇಲಾಖಾವಾರು ಟಾರ್ಗೆಟ್ (ಹಣ ಸಂಗ್ರಹದ ಗುರಿ):
ಸರ್ಕಾರ ಈ ವರ್ಷ ತೆರಿಗೆಯ ಮೂಲಕ ಇಷ್ಟು ಹಣ ವಸೂಲಿ ಮಾಡುವ ಗುರಿ ಇಟ್ಟುಕೊಂಡಿದೆ:
- ವಾಣಿಜ್ಯ ತೆರಿಗೆ: 1,25,000 ಕೋಟಿ ರೂ.
- ಅಬಕಾರಿ (ಮದ್ಯ): 45,000 ಕೋಟಿ ರೂ.
- ನೋಂದಣಿ ಮತ್ತು ಮುದ್ರೆ (Registration): 29,000 ಕೋಟಿ ರೂ.
- ಮೋಟಾರ್ ವಾಹನ ತೆರಿಗೆ: 15,500 ಕೋಟಿ ರೂ.
ಗ್ಯಾರಂಟಿ ಯೋಜನೆಗಳ ಒಳನೋಟ:
- ಯುವನಿಧಿ:ಕಳೆದ ವರ್ಷ 600 ಕೋಟಿ ರೂ. ಇಟ್ಟಿದ್ದರು, ಈ ಬಾರಿ 0 (ಶೂನ್ಯ) ಹಂಚಿಕೆ ಮಾಡಲಾಗಿದೆ.
- ಅನ್ನಭಾಗ್ಯ: ಕಳೆದ ಬಾರಿಗಿಂತ 200 ಕೋಟಿ ರೂ. ಕಡಿತ ಮಾಡಲಾಗಿದೆ (ಒಟ್ಟು 6,200 ಕೋಟಿ ರೂ.).
ಜಿಲ್ಲಾವಾರು ಮತ್ತು ವಿಶೇಷ ಯೋಜನೆಗಳು:
- ಕಲ್ಯಾಣ ಕರ್ನಾಟಕ (KKRDB): 5,000 ಕೋಟಿ ರೂ. (ಕಳೆದ ಬಾರಿಯಷ್ಟೇ ಉಳಿಸಿಕೊಳ್ಳಲಾಗಿದೆ).
- ಮೀನುಗಾರರು: ಮೀನುಗಾರಿಕೆ ಕಿಟ್ ಖರೀದಿಗೆ ನೀಡುತ್ತಿದ್ದ ಸಹಾಯಧನ 10,000 ರಿಂದ 20,000 ರೂ.ಗೆ ಏರಿಕೆ (ಡಬಲ್ ಮಾಡಲಾಗಿದೆ).
- ರಸ್ತೆ ಅಭಿವೃದ್ಧಿ: ‘ಪ್ರಗತಿಪಥ’ ಯೋಜನೆಯಡಿ 5,190 ಕೋಟಿ ರೂ. ಮೊತ್ತದ ಕಾಮಗಾರಿ, ಈ ವರ್ಷ 500 ಕೋಟಿ ರೂ. ಖರ್ಚು.
- ವೃಷಭಾವತಿ ವ್ಯಾಲಿ: ಬೆಂಗಳೂರು ಸುತ್ತಮುತ್ತಲಿನ 119 ಕೆರೆ ತುಂಬಿಸಲು 650 ಕೋಟಿ ರೂ.
- ಗದಗ-ಲಕ್ಕುಂಡಿ: ಪ್ರವಾಸೋದ್ಯಮ ಸರ್ಕ್ಯೂಟ್ ಆಗಿ ಅಭಿವೃದ್ಧಿ.
ಇದನ್ನೂ ಓದಿ: BJP Strategy: ಮೈತ್ರಿ ಎಂಬ ‘ಸ್ಲೋ ಪಾಯ್ಸನ್’; ಮಿತ್ರಪಕ್ಷಗಳ ಸಮಾಧಿಯ ಮೇಲೆ ಬಿಜೆಪಿ ಸಾಮ್ರಾಜ್ಯ?
ಶಿಕ್ಷಣ ಮತ್ತು ತಂತ್ರಜ್ಞಾನ:
- ಲ್ಯಾಪ್ಟಾಪ್ ವಿತರಣೆ: ಅಲ್ಪಸಂಖ್ಯಾತ ಇಲಾಖೆಯ 5,000 ವಿದ್ಯಾರ್ಥಿಗಳಿಗೆ ತಲಾ 50,000 ರೂ. ಮೌಲ್ಯದ ಲ್ಯಾಪ್ಟಾಪ್.
- ಡಿಜಿಟಲ್ ಲೈಬ್ರರಿ: ಧಾರವಾಡ ಮತ್ತು ಬೆಂಗಳೂರಿನಲ್ಲಿ 10 ಕೋಟಿ ರೂ. ವೆಚ್ಚದ ಹೈಟೆಕ್ ಲೈಬ್ರರಿ.
- ಮಹಿಳಾ ಅತಿಥಿ ಉಪನ್ಯಾಸಕರು: 90 ದಿನಗಳ ಮಾತೃತ್ವ ರಜೆ ಘೋಷಣೆ.
ಆರೋಗ್ಯದ ವಿಶೇಷ:
- ಅಂಗಾಂಗ ಕಸಿ ಆಸ್ಪತ್ರೆ: ಬೆಂಗಳೂರಿನ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ 1,000 ಬೆಡ್‌ಗಳ ಬೃಹತ್ ಆಸ್ಪತ್ರೆ.
- ಕ್ಯಾನ್ಸರ್ ಸೆಂಟರ್: ಮೈಸೂರು ಮತ್ತು ತುಮಕೂರಿನಲ್ಲಿ 92 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ.
ಧಾರ್ಮಿಕ ಮತ್ತು ಸಾಮಾಜಿಕ:
- ವಕ್ಫ್ ಆಸ್ತಿ: ರಕ್ಷಣೆಗೆ 100 ಕೋಟಿ ರೂ.
- ಗ್ರಾಮ ಪಂಚಾಯಿತಿ: ಎಲ್ಲಾ ಪಂಚಾಯಿತಿಗಳ ಹೆಸರು ಇನ್ಮುಂದೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’.
ಬಜೆಟ್‌ನ ಬೃಹತ್ ಗಾತ್ರ ಮತ್ತು ಆರ್ಥಿಕ ಸ್ಥಿತಿ:
- ಒಟ್ಟು ಬಜೆಟ್ ಮೊತ್ತ: 4,48,484 ಕೋಟಿ ರೂ. (ಕಳೆದ ವರ್ಷಕ್ಕಿಂತ 38,455 ಕೋಟಿ ರೂ. ಅಧಿಕ).
- ರಾಜ್ಯದ ಒಟ್ಟು ಸಾಲ: 2026-27ರ ಅಂತ್ಯಕ್ಕೆ 8.24 ಲಕ್ಷ ಕೋಟಿ ರೂ. ತಲುಪುವ ಅಂದಾಜು.
- ತಲಾ ಸಾಲದ ಹೊರೆ: ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲೆ 1,17,000 ರೂ. ಸಾಲವಿದೆ. ಈ ವರ್ಷವೊಂದರಲ್ಲೇ ಸರ್ಕಾರ 3,20,000 ಕೋಟಿ ರೂ. ಸಾಲ ಮಾಡಲು ಯೋಜಿಸಿದೆ.
- ಜಿಡಿಪಿ ಬೆಳವಣಿಗೆ: ಕಳೆದ ವರ್ಷ 9.4% ಇದ್ದ ಬೆಳವಣಿಗೆ ದರ ಈ ಬಾರಿ 8.1% ಕ್ಕೆ ಕುಸಿದಿದೆ.
ಪಂಚ ಗ್ಯಾರಂಟಿಗಳ ಲೆಕ್ಕಾಚಾರ (ಒಟ್ಟು 50,686 ಕೋಟಿ ರೂ.):
- ಗೃಹಲಕ್ಷ್ಮಿ: 28,608 ಕೋಟಿ ರೂ. (ಅತಿ ಹೆಚ್ಚು ವೆಚ್ಚದ ಯೋಜನೆ).
- ಗೃಹಜ್ಯೋತಿ: 10,278 ಕೋಟಿ ರೂ.
- ಶಕ್ತಿ ಯೋಜನೆ: 5,300 ಕೋಟಿ ರೂ.
- ಅನ್ನಭಾಗ್ಯ: 6,200 ಕೋಟಿ ರೂ. (ಇನ್ನು ಮುಂದೆ ಅಕ್ಕಿ ಜೊತೆ ಬೇಳೆ, ಎಣ್ಣೆ, ಸಕ್ಕರೆ ಒಳಗೊಂಡ ‘ಇಂದಿರಾ ಕಿಟ್’ ವಿತರಣೆ).
- ಯುವನಿಧಿ: ಈ ಬಜೆಟ್‌ನಲ್ಲಿ ಹೊಸದಾಗಿ ಯಾವುದೇ ಹಣ ಮೀಸಲಿಟ್ಟಿಲ್ಲ (Zero Allocation), ಇದು ಆತಂಕ ಮೂಡಿಸಿದೆ.
ಶಿಕ್ಷಣ ಮತ್ತು ಯುವಜನತೆ:
- ಒಟ್ಟು ಹಂಚಿಕೆ: 47,224 ಕೋಟಿ ರೂ.
- ಸೋಶಿಯಲ್ ಮೀಡಿಯಾ ಬ್ಯಾನ್: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧಿಸಲು ಹೊಸ ಕಾನೂನು.
- ಶಿಕ್ಷಕರ ನೇಮಕಾತಿ: ಈ ವರ್ಷವೇ 15,000 ಶಿಕ್ಷಕರ ಹುದ್ದೆ ಭರ್ತಿ.
- ರೋಹಿತ್ ವೇಮುಲ ಕಾಯ್ದೆ: ಕಾಲೇಜುಗಳಲ್ಲಿ ಜಾತಿ ನಿಂದನೆ ತಡೆಯಲು ಹೊಸ ಕಾಯ್ದೆ ಮತ್ತು ನಿಂತುಹೋಗಿದ್ದ ಕಾಲೇಜು ಎಲೆಕ್ಷನ್ ಪುನಾರಂಭ.
- ಉಚಿತ ಪುಸ್ತಕ: 1ರಿಂದ 12ನೇ ತರಗತಿ ಮಕ್ಕಳಿಗೆ ಮೌಲ್ಯ ಶಿಕ್ಷಣ ಪುಸ್ತಕ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಉಚಿತ.
- AI ತರಬೇತಿ: 8ರಿಂದ 12ನೇ ತರಗತಿ ಮಕ್ಕಳಿಗೆ ಐಐಟಿ ಧಾರವಾಡ ಸಹಯೋಗದಲ್ಲಿ ಎಐ ತರಬೇತಿ.
ಕೃಷಿ, ನೀರಾವರಿ ಮತ್ತು ಪಶುಸಂಗೋಪನೆ:
- ಕೃಷಿ ಇಲಾಖೆ: 8,373 ಕೋಟಿ ರೂ.
- ರೈತರಿಗೆ ಸಾಲ: 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಣೆಯ ಗುರಿ.
- ಕೃಷ್ಣ ಮೇಲ್ದಂಡೆ ಯೋಜನೆ: ಭೂಸ್ವಾಧೀನ ಪರಿಹಾರ ಮೊತ್ತ ನಿಗದಿ (ಕುಷ್ಕಿ-30 ಲಕ್ಷ, ತರಿ-40 ಲಕ್ಷ ಪ್ರತಿ ಎಕರೆಗೆ).
- ಟಿಬಿ ಡ್ಯಾಮ್: ತುಂಗಭದ್ರ ಜಲಾಶಯದ ಎಲ್ಲಾ 33 ಗೇಟ್‌ಗಳ ಬದಲಾವಣೆ.
- ವಸುಧಾಮೃತ: ಮಲೆನಾಡು/ಕರಾವಳಿಯ ಅಡಿಕೆ ರೋಗ ತಡೆಗೆ 10 ಕೋಟಿ ರೂ. ಪ್ಯಾಕೇಜ್.
- ಪಶುಸಂಗೋಪನೆ: ಹಸು, ಎಮ್ಮೆ ಖರೀದಿಗೆ 25% ಸಬ್ಸಿಡಿ (ಬೆಳಗಾವಿ, ಕಲಬುರ್ಗಿ ಭಾಗದ 10,000 ಜನರಿಗೆ).
ಆರೋಗ್ಯ ಕ್ಷೇತ್ರ:
- ಉಚಿತ ಇನ್ಸುಲಿನ್ ಪೆನ್: ಟೈಪ್-1 ಡಯಾಬಿಟಿಸ್ ಇರುವ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಪೆನ್.
- ಐವಿಎಫ್ ಕೇಂದ್ರ: ಬೆಂಗಳೂರಿನ ವಾಣಿ ವಿಲಾಸ್ ಮತ್ತು ಕಲಬುರ್ಗಿಯ ಜಿಮ್ಸ್‌ನಲ್ಲಿ ಉಚಿತ ಐವಿಎಫ್ ಸೌಲಭ್ಯ.
- ಆಸ್ಪತ್ರೆಗಳ ಮೇಲ್ದರ್ಜೆ: ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಆರಂಭ, ಮೈಸೂರು ಜಯದೇವ 600 ಬೆಡ್‌ಗಳಿಗೆ ಏರಿಕೆ.
- ಹೆಸರು ಬದಲಾವಣೆ: ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ‘ಶಾಂತವೇರಿ ಗೋಪಾಲಗೌಡ ಆಸ್ಪತ್ರೆ’.
ಬೆಂಗಳೂರು ಮತ್ತು ಇನ್ಫ್ರಾಸ್ಟ್ರಕ್ಚರ್:
- ಟನಲ್ ರೋಡ್: 30,000 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಸುರಂಗ ರಸ್ತೆ.
- ರಸ್ತೆ ಅಭಿವೃದ್ಧಿ: ಪಿಡಬ್ಲ್ಯೂಡಿ ಇಲಾಖೆಯಡಿ ರಾಜ್ಯದ ಹೆದ್ದಾರಿಗಳಿಗೆ 35,000 ಕೋಟಿ ರೂ. ಹೂಡಿಕೆ.
- ರೈಲ್ವೆ: ರಾಜ್ಯದ 9 ಪ್ರಮುಖ ರೈಲ್ವೆ ಯೋಜನೆಗಳಿಗೆ 50% ವೆಚ್ಚ ಭರಿಸಲು ಸರ್ಕಾರ ಸಮ್ಮತಿ.
ಮದ್ಯ ಮತ್ತು ಅಬಕಾರಿ ನೀತಿ:
- ಹೊಸ ಮದ್ಯ ನೀತಿ: ಸರ್ಕಾರ ಇನ್ಮುಂದೆ ಬೆಲೆ ಫಿಕ್ಸ್ ಮಾಡಲ್ಲ; ಕಂಪನಿಗಳೇ ನಿರ್ಧರಿಸಲಿವೆ.
- ಕಿಕ್ ಆಧಾರಿತ ಟ್ಯಾಕ್ಸ್: ಆಲ್ಕೋಹಾಲ್ ಪ್ರಮಾಣ ಹೆಚ್ಚಿದ್ದರೆ ತೆರಿಗೆ ಹೆಚ್ಚು.
- ಅಬಕಾರಿ ಟಾರ್ಗೆಟ್: ಮದ್ಯಪ್ರಿಯರಿಂದ ಈ ವರ್ಷ 45,000 ಕೋಟಿ ರೂ. ಸಂಗ್ರಹಿಸುವ ಗುರಿ.
ಇದನ್ನೂ ಓದಿ: Sensational: ಸದ್ದು ಮಾಡುತ್ತಿರೋ ವಿವಾದದ ನಡುವೆ ಶ್ರೀಗಳ ‘ಹುನ್ನಾರ’ದ ಪೋಸ್ಟ್: ಏನಿದು ಒಳಗಿನ ಮರ್ಮ?
ಪ್ರವಾಸೋದ್ಯಮ ಮತ್ತು ಸಂಸ್ಕೃತಿ:
- ರೋಪ್‌ವೇ: ಮುಳ್ಳಯ್ಯನಗಿರಿಯಿಂದ ಸೀತಾಳಯ್ಯನಗಿರಿ ವರೆಗೆ ರೋಪ್‌ವೇ ನಿರ್ಮಾಣ.
- ಅಂಜನಾದ್ರಿ ಬೆಟ್ಟ: ಕೊಪ್ಪಳದ ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ.
- ಧಾರ್ಮಿಕ ಸಹಾಯಧನ: ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ತಲಾ 5,000 ರೂ. ಸಹಾಯಧನ.
ಸರ್ಕಾರದ ಆದಾಯದ ಲೆಕ್ಕ (ಪ್ರತಿ 1 ರೂಪಾಯಿಯಲ್ಲಿ):
- ಬರುವುದು: ಸ್ವಂತ ತೆರಿಗೆ (49 ಪೈಸೆ), ಸಾಲ (29 ಪೈಸೆ), ಕೇಂದ್ರದ ಪಾಲು (14 ಪೈಸೆ).
- ಹೋಗುವುದು: ಸಾಲ ತೀರಿಸಲು (20 ಪೈಸೆ), ಸಂಬಳ/ಪೆನ್ಷನ್ (18 ಪೈಸೆ), ಶಿಕ್ಷಣ (10 ಪೈಸೆ), ಆರೋಗ್ಯ (4 ಪೈಸೆ).
ಈ ಬಜೆಟ್ ಅಭಿವೃದ್ಧಿಗಿಂತ ಹೆಚ್ಚಾಗಿ ಗ್ಯಾರಂಟಿ ಮತ್ತು ಸಾಲದ ಮೇಲೆ ಕೇಂದ್ರೀಕೃತವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

