Thursday, September 10, 2026
Home ಸುದ್ದಿಗಳು ಮನರಂಜನೆ Rashmika Vijay Marriage: ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ: ವಿಜಯ್ ದೇವರಕೊಂಡ ಜೊತೆ ಹಸೆಮಣೆ!

Rashmika Vijay Marriage: ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ: ವಿಜಯ್ ದೇವರಕೊಂಡ ಜೊತೆ ಹಸೆಮಣೆ!

Rashmika Vijay Marriage: ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ: ವಿಜಯ್ ದೇವರಕೊಂಡ ಜೊತೆ ಹಸೆಮಣೆ!

ಕಳೆದ ಕೆಲವು ವರ್ಷಗಳಿಂದ ಸಿನಿರಂಗದಲ್ಲಿ ಸಖತ್ ಸದ್ದು ಮಾಡುತ್ತಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೇಮ ಪುರಾಣಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಅಭಿಮಾನಿಗಳು ಪ್ರೀತಿಯಿಂದ ಕರೆದ ‘ವಿರೋಶ್’ ಹೆಸರಿನಲ್ಲೇ ಈ ಜೋಡಿ ಈಗ ಹಸೆಮಣೆ (Rashmika Vijay Marriage) ಏರಲು ಸಜ್ಜಾಗಿದೆ.

ಅಭಿಮಾನಿಗಳು ನೀಡಿದ ಹೆಸರಲ್ಲೇ ವಿವಾಹ ಮಹೋತ್ಸವ

ತಮ್ಮ ಮದುವೆಯ ((Rashmika Vijay Marriage)) ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ವಿಶೇಷವೆಂದರೆ, ಅಭಿಮಾನಿಗಳು ಈ ಜೋಡಿಗೆ ನೀಡಿದ್ದ “ವಿರೋಶ್” (Virosh) ಎಂಬ ಹೆಸರನ್ನೇ ತಮ್ಮ ಮದುವೆಯ ಅಧಿಕೃತ ಟ್ಯಾಗ್ ಲೈನ್ ಆಗಿ ಬಳಸಿಕೊಂಡಿದ್ದಾರೆ.

“ನಮಗಾಗಿ ನಾವು ಏನನ್ನೂ ಯೋಚಿಸುವ ಮೊದಲೇ ಅಭಿಮಾನಿಗಳು ನಮಗೆ ಈ ಹೆಸರಿಟ್ಟಿದ್ದರು, ಅವರ ಗೌರವಾರ್ಥವಾಗಿ ಇದೇ ಹೆಸರಿನಲ್ಲಿ ಮದುವೆಯಾಗುತ್ತಿದ್ದೇವೆ” ಎಂದು ರಶ್ಮಿಕಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಮದುವೆಯ ದಿನಾಂಕ ಮತ್ತು ಕಾರ್ಯಕ್ರಮದ ವಿವರ

ಈ ಸ್ಟಾರ್ ಜೋಡಿಯ ವಿವಾಹದ (Rashmika Vijay Marriage) ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ:

  • ಶಾಸ್ತ್ರಗಳ ಆರಂಭ: ಫೆಬ್ರವರಿ 24 ರಿಂದ ವಿವಾಹದ ವಿಧಿವಿಧಾನಗಳು ಶುರುವಾಗಲಿವೆ.
  • ಮದುವೆ ಮುಹೂರ್ತ: ಫೆಬ್ರವರಿ 26 ರಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.
  • ಗ್ರ್ಯಾಂಡ್ ರಿಸೆಪ್ಷನ್: ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ಆರತಕ್ಷತೆ ಆಯೋಜಿಸಲಾಗಿದೆ ಎನ್ನಲಾಗಿದೆ.

ಮದುವೆಯಲ್ಲಿ ಮೊಬೈಲ್ ನಿಷೇಧ! (No-Phone Policy)

ಬಾಲಿವುಡ್ ಹೈ-ಪ್ರೊಫೈಲ್ ಮದುವೆಗಳ ಮಾದರಿಯಲ್ಲೇ ರಶ್ಮಿಕಾ-ವಿಜಯ್ ಮದುವೆಯಲ್ಲೂ (Rashmika Vijay Marriage) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.

  • ಗೌಪ್ಯತೆ ಕಾಪಾಡಲು ನಿರ್ಧಾರ: ಮದುವೆಯ ಫೋಟೋ ಅಥವಾ ವಿಡಿಯೋಗಳು ಸೋರಿಕೆಯಾಗಬಾರದು ಎಂಬ ಕಾರಣಕ್ಕೆ ಅತಿಥಿಗಳಿಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ.
  • ಫೋಟೋಗ್ರಾಫರ್‌ಗಳಿಗೂ ರೂಲ್ಸ್: ಮದುವೆಯ ಕವರೇಜ್ ಮಾಡುವ ತಂಡದವರಿಂದಲೂ ‘ಗೌಪ್ಯತಾ ಒಪ್ಪಂದ’ಕ್ಕೆ (NDA) ಸಹಿ ಹಾಕಿಸಿಕೊಳ್ಳಲಾಗಿದ್ದು, ಅಧಿಕೃತ ಫೋಟೋ ಹೊರಬರುವವರೆಗೂ ಯಾವುದನ್ನೂ ಹಂಚಿಕೊಳ್ಳುವಂತಿಲ್ಲ.

ಇದನ್ನೂ ಓದಿ: ಸಿನಿಮಾ ನೋಡಿ ‘ಜಡ್ಜ್’ ಮಾಡೋಕೆ ನೀವ್ಯಾರು? ʻಕನಸುಗಾರನʼ ಕಣ್ಣು ಕೆಂಪಾಗಿದ್ದು ಯಾರ ಮೇಲೆ?

ಆಪ್ತರಿಗಷ್ಟೇ ಆಹ್ವಾನ

ಮದುವೆಯ ಮುಖ್ಯ ಸಮಾರಂಭಕ್ಕೆ ಕೇವಲ ಕುಟುಂಬದವರು ಮತ್ತು ತೀರಾ ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿದೆ. ಚಿತ್ರರಂಗದ ಸಹೋದ್ಯೋಗಿಗಳಿಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ರಿಸೆಪ್ಷನ್‌ಗೆ ಆಮಂತ್ರಣ ನೀಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ ದಕ್ಷಿಣ ಭಾರತದ ಮೋಸ್ಟ್ ಹ್ಯಾಪನಿಂಗ್ ಜೋಡಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಸ್ವತಂತ್ರ ಮಾಧ್ಯಮ ಬೆಂಬಲಿಸಿ

ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...