ಬೆಂಗಳೂರು: ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅಂದ್ರೆ ಅಲ್ಲಿ ಬಣ್ಣಗಳ ಲೋಕ, ಪ್ರೀತಿಯ ಅಲೆ ಹಾಗೂ ವಿಶಿಷ್ಟ ಕಲ್ಪನೆಗಳ ಸಾಗರವೇ ಇರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದುಬರುವ ನೆಗೆಟಿವ್ ಕಮೆಂಟ್ಗಳು ಮತ್ತು ವಿಮರ್ಶೆಗಳ ಬಗ್ಗೆ ರವಿಚಂದ್ರನ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಿನಿಮಾ ಎಂಬುದು ಒಂದು ಅನುಭವವೇ ಹೊರತು, ಅದು ಕೇವಲ ತಪ್ಪು ಹುಡುಕುವ ವೇದಿಕೆಯಾಗಬಾರದು ಎಂಬುದು ಅವರ ಆಕ್ರೋಶದ ಹಿಂದಿನ ಕಳಕಳಿ.
ಯಾವನು ಕೇಳಿದ ನಿಮ್ಮ ಕಮೆಂಟ್?
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ರವಿಚಂದ್ರನ್ (Ravichandran) ಅವರು, ವಿಮರ್ಶಕರ ಮೇಲೆ ಕೆಂಡಾಮಂಡಲವಾಗಿದ್ದಾರೆ. “ಸಿನಿಮಾ ನೋಡಿ ಬಂದ ಮೇಲೆ ಯಾವನು ಕೇಳಿದ ನಿಮ್ಮ ಕಮೆಂಟ್? ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಹೇಳಲು ನೀವ್ಯಾರು?” ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ಒಬ್ಬ ನಿರ್ದೇಶಕ ಅಥವಾ ನಟ ಒಂದು ಸಿನಿಮಾವನ್ನು ತೆರೆಯ ಮೇಲೆ ತರಲು ಎಷ್ಟು ಶ್ರಮ ಪಟ್ಟಿರುತ್ತಾರೆ ಎಂಬುದು ಕೇವಲ ಕಾಮೆಂಟ್ ಮಾಡುವವರಿಗೆ ತಿಳಿಯುವುದಿಲ್ಲ ಎಂಬ ನೋವು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.
ಸಿನಿಮಾ ನೋಡುವುದು ಒಂದು ಭಾವನೆ:
Ravichandran ಅವರ ಪ್ರಕಾರ, ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ, ಅದೊಂದು ಭಾವನೆ. “ಸಿನಿಮಾ ನೋಡುವಾಗ ಆ ಕ್ಷಣವನ್ನು ಆಸ್ವಾದಿಸಬೇಕು. ಅದನ್ನು ಬಿಟ್ಟು ಮೊಬೈಲ್ ಹಿಡಿದು ಕಮೆಂಟ್ ಮಾಡುವುದು, ರೇಟಿಂಗ್ ಕೊಡುವುದು ಕಲೆಗೆ ಮಾಡುವ ಅಪಮಾನ” ಎಂಬ ಅಭಿಪ್ರಾಯ ಅವರದ್ದು. ಇತ್ತೀಚಿನ ದಿನಗಳಲ್ಲಿ ಥಿಯೇಟರ್ನಿಂದ ಹೊರಬರುತ್ತಿದ್ದಂತೆ ಮೈಕ್ ಹಿಡಿದು ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಮಾತನಾಡುವ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಅವV. Ravichandranರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ‘ಕೈ’ಲಿ ವಂಶವೃಕ್ಷ: ಅಲ್ಪಸಂಖ್ಯಾತರು ಕೇವಲ ವೋಟ್ ಬ್ಯಾಂಕೇ?
ಚಿತ್ರರಂಗಕ್ಕೆ ಮಾರಕವಾಗುತ್ತಿರುವ ‘ರಿವ್ಯೂ’ ಸಂಸ್ಕೃತಿ:
ಯಾವುದೇ ಒಂದು ಚಿತ್ರಕ್ಕೆ ಮೊದಲ ದಿನವೇ ನೆಗೆಟಿವ್ ಪ್ರಚಾರ ಸಿಕ್ಕರೆ ಅದು ಆ ಸಿನಿಮಾದ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. “ಒಬ್ಬ ವ್ಯಕ್ತಿಯ ಅಭಿಪ್ರಾಯ ಇಡೀ ಸಿನಿಮಾದ ಗೆಲುವನ್ನು ನಿರ್ಧರಿಸಬಾರದು. ಜನರಿಗೆ ಸಿನಿಮಾ ಇಷ್ಟವಾಗುತ್ತೋ ಇಲ್ಲವೋ ಎಂಬುದು ಅವರಿಗೆ ಬಿಟ್ಟ ವಿಚಾರ, ಆದರೆ ಮೊದಲೇ ಕಮೆಂಟ್ ಮಾಡಿ ಜನರ ದಾರಿ ತಪ್ಪಿಸುವುದು ಸರಿಯಲ್ಲ” ಎಂಬುದು ಕ್ರೇಜಿಸ್ಟಾರ್ ವಾದ.
ಒಟ್ಟಿನಲ್ಲಿ, ತಂತ್ರಜ್ಞಾನ ಬೆಳೆದಂತೆ ಸಿನಿಮಾ ವಿಮರ್ಶೆ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ಈ ವಿಮರ್ಶೆಗಳು ಕಲೆಯ ಉಸಿರನ್ನು ಹತ್ತಿಕ್ಕಬಾರದು ಎಂಬುದು ರವಿಚಂದ್ರನ್ ಅವರ ನೇರ ನುಡಿಯ ಸಾರಾಂಶವಾಗಿದೆ. ಅವರ ಈ ಖಡಕ್ ಮಾತುಗಳು ಈಗ ಗಾಂಧಿನಗರದ ಗಲ್ಲಿಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಯಾರ ಹಂಗೂ ಇಲ್ಲದ, ಯಾರಿಗೂ ಬಗ್ಗದ ಸ್ವತಂತ್ರ ಮಾಧ್ಯಮಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ...






